ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದಲ್ಲಿ ಹರಿಯುವ ದೂಧಗಂಗಾ ನದಿಯ ಕೆಸರಿನಲ್ಲಿ ಹಳೆಯ ಸೀತಾರಾಮ ದೇವಾಲಯ ಪತ್ತೆಯಾಗಿದ್ದು, ಪಾದುಕೆಗಳು ಲಭ್ಯವಾಗಿವೆ.
ಬೆಳಗಾವಿ/ಚಿಕ್ಕೋಡಿ (ಜ.15): ಅಯೋಧ್ಯೆಯಲ್ಲಿ ಸರಯೂ ನದಿ ದಂಡೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ದೂದ ಗಂಗಾ ನದಿಯ ಕೆಸರಿನಲ್ಲಿ ಮುಳುಗಿ ಹೋಗಿದ್ದ ಸೀತಾರಾಮ ದೇವಸ್ಥಾನವನ್ನು ಗ್ರಾಮಸ್ಥರು ಹೆಕ್ಕಿ ಹೊರಗೆ ತೆಗದು ಪೂಜೆಯನ್ನು ಸಲ್ಲಿಸಲು ಮುಂದಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ 100 ಕೋಟಿ ಹಿಂದೂಗಳ ಆರಾಧ್ಯ ದೈವವಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರವನ್ನು ಆಯೋಧ್ಯೆಯಲ್ಲಿ ನಿರ್ಮಿಸಿ ಇದೇ ಜ.22ರಂದು ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ. ಆದರೆ, ಇದೇ ವೇಳೆ ನಾವು ಕೂಡ ನಮ್ಮೂರಿನಲ್ಲಿ ಹಲವು ದಶಕಗಳಿಂದ ನದಿ ನೀರು ಹಾಗೂ ಕೆಸರಿನಲ್ಲು ಹುದುಗಿ ಹೋಗಿದ್ದ ಸೀತಾ-ರಾಮ ದೇವಾಲಯವನ್ನು ಹೆಕ್ಕಿ ತೆಗೆದು ಪೂಜೆ ಸಲ್ಲಿಸುತ್ತೇವೆ ಎಂದು ಬೆಳಗಾವಿ ಜನತೆ ಮುಂದಾಗಿದ್ದಾರೆ.
undefined
ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಈ ಹಳೆಯ ಸೀತಾರಾಮ ದೇವಾಲಯ ಇರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ದೂದಗಂಗಾ ನದಿ ದಡದಲ್ಲಿ. ದೂದಗಂಗಾ ನದಿ ಹಿನ್ನೀರಿನ ಒತ್ತಡದಲ್ಲಿ ಈ ದೇವಸ್ಥಾನ ಮುಳುಗಿ ಹೋಗಿತ್ತು. ಹಲವು ವರ್ಷಗಳಿಂದ ಕೆಸರಿನ ಒಳಗಡೆ ಹೂತುಕೊಂಡಿದ್ದ ದೇವಸ್ಥಾನದಲ್ಲಿನ ಸೀತಾ ರಾಮ ದೇವರಿಗೆ ಪೂಜೆ ಸಲ್ಲಿಸಿರಲಿಲ್ಲ. ಆದರೆ, ಈಗ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬೆನ್ನಲ್ಲಿಯೇ ಸದಲಗಾ ಗ್ರಾಮಸ್ಥರು ಕೂಡ ಕೆಸರಿನಲ್ಲಿ ಹುದುಗಿದ್ದ ಹಳೆಯ ಸೀತಾರಾಮ ಮಂದಿರ ಹೆಕ್ಕಿ ತೆಗೆದಿದ್ದಾರೆ.
ಒಟ್ಟು 10 ಅಡಿ ಉದ್ದ ಅಗಲ ಇರುವ ಹಳೆಯ ದೇವಸ್ಥಾನವಾಗಿದೆ. ಜೆಸಿಬಿ ಮೂಲಕ ಮಣ್ಣು ತೆಗೆದಾಗ ಒಳಗಡೆ ಪಾದುಕೆಗಳು ಪತ್ತೆಯಾಗಿವೆ. ಇದು ಸೀತಾರಾಮನ ಪೂಜೆಗಾಗಿ ಕಟ್ಟಿದ ದೇವಸ್ಥಾನ ಎಂಬ ಪ್ರತೀತಿಯನ್ನು ಹೊಂದಿದೆ. ಗ್ರಾಮಸ್ಥರು ದೇವಸ್ಥಾನದ ಸುತ್ತಲೂ ಇರುವ ಕೆಸರು ತೆಗೆದು, ದೇವಸ್ಥಾನದ ಜಿರ್ನೋದ್ದಾರಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಪ್ರತಿ 5 ವರ್ಷಕ್ಕೆ ಒಮ್ಮೆ ಕೆಸರು ತೆಗೆದು ಪೂಜೆ ಮಾಡಬೇಕೆಂದುಕೊಂಡಿದ್ದರು. ಆದರೆ, ಇದನ್ನು ಪ್ರತಿ ಐದು ವರ್ಷಕ್ಕೊಮ್ಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಮಂದಿರವನ್ನು ಜೀರ್ಣೋದ್ಧಾರ ಮಾಡಿ ವರ್ಷಪೂರ್ತಿ ಪೂಜೆಗೆ ಅನುಕೂಲ ಆಗುವಂತೆ ಅಭಿವೃದ್ಧಿ ಮಾಡುವುದಕ್ಕೆ ಚಿಂತನೆ ಮಾಡಿದ್ದಾರೆ.
ಧಾರ್ಮಿಕ ಟೂರಿಸಂಗೆ ಬಂಪರ್ ಟೈಮ್, ಪುಣ್ಯಕ್ಷೇತ್ರ ನೋಡಲು ಭಾರತೀಯರು ಉತ್ಸುಕ!
ಇನ್ನು ದೂದಗಂಗಾ ನದಿಯಲ್ಲೊಂದು ಹಳೆಯ ಸೀತಾರಾಮ ದೇವಸ್ಥಾನ ಇರುವ ಸುದ್ದಿ ಜಿಲ್ಲೆಯಲ್ಲಿ ಹರಡುತ್ತಿದ್ದಂತೆ ಹಲವು ನಾಯಕರು ದೇವಸ್ಥಾನ ಭೇಟಿಗೆ ಆಗಮಿಸುತ್ತಿದ್ದಾರೆ. ಜೊತೆಗೆ, ದೇವಾಲಯ ಜೀರ್ಣೋದ್ಧಾರಕ್ಕೂ ಕೈ ಜೋಡಿಸುವುದಾಗಿ ಹೇಳುತ್ತಿದ್ದಾರೆ. ದೇವಸ್ಥಾನ ಪತ್ತೆ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ನಿಪ್ಪಾಣಿ ಶಾಸಕಿ ಶಶಿಕಲಾ ಜೋಲ್ಲೆ ಭೇಟಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆ, ದೇವಾಲಯ ಸರ್ವಕಾಲಿಕ ಪೂಜೆಗೆ ಅನುಕೂಲ ಆಗುವಂತೆ ಅಭಿವೃದ್ಧಿ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.