ಬಿಜೆಪಿ ಕೊಡುಗೆ ಬಗ್ಗೆ ನಾನು ಚರ್ಚೆಗೆ ಸಿದ್ಧ| ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್, ಶಾಧಿ ಭಾಗ್ಯ ಇತರೆ ಯೋಜನೆಗಳು ಬಂದ್| ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡದೇ ತಾರತಮ್ಯ: ಸಿದ್ದರಾಮಯ್ಯ|
ಬೀದರ್/ಬಸವಕಲ್ಯಾಣ(ಏ.09): ಬಿಜೆಪಿಯವರು ಕಲ್ಯಾಣ ಕರ್ನಾಟಕಕ್ಕಾಗಿ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಹೈದ್ರಾಬಾದ್ ಕರ್ನಾಟಕ ಎಂದು ಇದ್ದುದನ್ನು ಕಲ್ಯಾಣ ಕರ್ನಾಟಕ ಎಂದು ಕರೆದಿದ್ದೇ ಇವರ ದೊಡ್ಡ ಸಾಧನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬೀದರ್ ಮತ್ತು ಬಸವಕಲ್ಯಾಣಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಡಳಿತಾರೂಢ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇವರು ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್, ಶಾಧಿ ಭಾಗ್ಯ ಇತರೆ ಯೋಜನೆಗಳು ಬಂದ್ ಮಾಡಿದರು. ಇಲ್ಲಿ ಹೈದ್ರಾಬಾದ್ ಕರ್ನಾಟಕ ತೆಗೆದು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಆದರೆ ಈ ಭಾಗಕ್ಕೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಇವರ ಜೊತೆಗೆ ಈ ವಿಷಯದಲ್ಲಿ ನಾನು ಚರ್ಚೆಗೆ ಸಿದ್ದ, ಆದರೆ ಬಿಜೆಪಿಯವರು ಚರ್ಚೆಗೆ ಬರ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
undefined
ಜಮೀರ್ ಅಹಮದ್ ನುಡಿದ ಸಿದ್ದರಾಮಯ್ಯ ಭವಿಷ್ಯ
ಇದೇ ವೇಳೆ ಬಸವಕಲ್ಯಾಣದ ಬಿಜಪಿ ಅಭ್ಯರ್ಥಿ ಪ್ರತಾಪಗೌಡ ಮಸ್ಕಿ ವಿರುದ್ಧವೂ ಹರಿಹಾಯ್ದ ಅವರು, ಬಸವಕಲ್ಯಾಣದಲ್ಲಿ ದಿ. ಶಾಸಕ ಬಿ.ನಾರಾಯಣರಾವ್ ಅವರು ಕೊರೋನಾಗೆ ಬಲಿಯಾಗಿದ್ದರ ಜೊತೆಗೆ ಬೆಳಗಾವಿಯ ಸಂಸದರು ಕೂಡ ಕೊರೋನಾದಿಂದ ನಿಧನ ಹೊಂದಿದ್ದಾರೆ. ಆದರೆ ಮಸ್ಕಿಯ ಪ್ರತಾಪ ಗೌಡ ಬಿಜೆಪಿಯ ಆಪರೇಷನ್ ಕಮಲಕ್ಕೆ ತುತ್ತಾಗಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಲು ಚುನಾವಣೆಗೆ ನಿಂತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.