ಸ್ವಕ್ಷೇತ್ರಕ್ಕೆ ಆಂಬುಲೆನ್ಸ್ ಪಿಪಿಇ ಕಿಟ್​, ಮಾಸ್ಕ್​ ಕಳುಹಿಸಿಕೊಟ್ಟ ಸಿದ್ದರಾಮಯ್ಯ

By Suvarna News  |  First Published May 16, 2021, 6:12 PM IST

* ಸ್ವಕ್ಷೇತ್ರ ಬಾದಾಮಿಗೆ ಆಂಬುಲೆನ್ಸ್ ಕಳುಹಿಸಿಕೊಟ್ಟ ಸಿದ್ದರಾಮಯ್ಯ
* ಬಾದಾಮಿಗೆ ಆಂಬುಲೆನ್ಸ್  ಜತೆ ಪಿಪಿಇ ಕಿಟ್, ಮಾಸ್ಕ್​ ರವಾನೆ
* ಸಿದ್ದರಾಮಯ್ಯ ಬೆಂಬಲಿಗರು ತಾಲೂಕು ಆಡಳಿತಕ್ಕೆ ಹಸ್ತಾಂತರ


ಬಾಗಲಕೋಟೆ, (ಮೇ.16): ಕರ್ನಾಟಕದ ಹಳ್ಳಿ ಹಳ್ಳಿಗೂ ಕೊರೋನಾ ವ್ಯಾಪಿಸಿದ್ದು, ಜನರು ಆತಂಕದಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರವಾದ ಬಾದಾಮಿಗೆ ಮೂರು ಆಂಬುಲೆನ್ಸ್ ಗಳನ್ನು ನೀಡಿದ್ದಾರೆ.

ಆಂಬುಲೆನ್ಸ್  ಜತೆ 50 ಪಿಪಿಇ ಕಿಟ್ ಮತ್ತು 100 ಎನ್95 ಮಾಸ್ಕ್​ಗಳನ್ನು ಸಿದ್ದರಾಮಯ್ಯ ಬಾದಾಮಿಗೆ ಕಳುಹಿಸಿಕೊಟ್ಟಿದ್ದಾರೆ. ಇವುಗಳನ್ನು ಇಂದು (ಭಾನುವಾರ) ತಾಲೂಕಿನಲ್ಲಿರುವ ಸಿದ್ದರಾಮಯ್ಯ ಬೆಂಬಲಿಗರು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಬಾದಾಮಿ ತಹಸೀಲ್ದಾರ್ ಸುಹಾಸ ಇಂಗಳೆ, ಟಿಎಚ್ ಒ ಡಾ.ಎಂ.ಬಿ.ಪಾಟೀಲ ಅವರಿಗೆ ಈ ಹಸ್ತಾಂತರ ಮಾಡಲಾಗಿದೆ.

Tap to resize

Latest Videos

ರೆಮ್‌ಡಿಸಿವಿರ್ ದಂಧೆಯಲ್ಲಿ ಸಿಕ್ಕಿಬಿದ್ದ ಶಾಸಕರೊಬ್ಬರ ಸಂಬಂಧಿ!

ಇನ್ನು ಕೊರೋನಾ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಅವರು ಮುಖಂಡರಿಗೆ ಸೂಚನೆ ನೋಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಹೆಲ್ಫ್ ಡೆಸ್ಕ್ ಆರಂಭಿಸಲು ತಿಳಿಸಿದ್ದಾರೆ.

click me!