ಬಿಜೆಪಿ ಸಂಸದರೋರ್ವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ಬರಲು ಈ ವ್ಯಕ್ತಿಯೇ ಕಾರಣ ಎಂದಿದ್ದಾರೆ.
ಮೈಸೂರು (ಜ.16): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಎಚ್. ವಿಶ್ವನಾಥ್ ರೀತಿ ಸಿ.ಪಿ.ಯೋಗೇಶ್ವರ್ ಸಹ ಕಾರಣ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ತಿಳಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಅಸಮಾಧಾನ ಇರೋದು ಸತ್ಯ. ಅಸಮಾಧಾನದ ಬಗ್ಗೆ ಇವರು ಕೇಳಿದ್ದು ಸರಿ. ಅವರು ಸಚಿವ ಸ್ಥಾನ ಕೊಟ್ಟಿರೋದು ಸರಿ ಇದೆ ಎನ್ನುವ ಮೂಲಕ ಸಿ.ಪಿ. ಯೋಗೇಶ್ವರ್ ಪರ ಬ್ಯಾಟ್ ಮಾಡಿದರು.
undefined
ಇದನ್ನ ಮುಖ್ಯಮಂತ್ರಿಗಳಿಗೆ ಯಾಕೇ ಕೊಟ್ರಿ ಅಂತ ಕೇಳಬಾರದು. ಅದು ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರ. ವಿಶ್ವನಾಥ್ ಜೊತೆ ಮಾತನಾಡುತ್ತೇನೆ. ಸದ್ಯ ಕೋಪದಲ್ಲಿದ್ದಾರೆ, ಈಗ ಅವರಿಗೆ ಸಲಹೆ ಕೊಡಲು ಸಾಧ್ಯವಿಲ್ಲ. ಸದ್ಯ ಏನು ಮಾಡಲು ಸಾಧ್ಯವಿಲ್ಲ. ಅವರು ಮಾತಾಡಿ ಮುಗಿಸಿದ ನಂತರ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ. ಸಂಪುಟ ವಿಸ್ತರಣೆಯಾದಾಗ ಎಲ್ಲರಿಗೂ ಅವಕಾಶ ಕೊಡಲು ಸಾಧ್ಯವಿಲ್ಲ. ಈ ವೇಳೆ ಅಸಮಾಧಾನ ಉಂಟಾಗುತ್ತೆ. ಎಚ್. ವಿಶ್ವನಾಥ್ ಅವರು ಎಡವಿದ್ದಾರೆ. ಅವರು ಪಕ್ಷಕ್ಕೆ ಸೇರಬೇಕಾದರೆ ಬೇರೆ ಮಾತುಕತೆಯಾಗಿತ್ತು. ಸಿಎಂ ಮತ್ತು ಅವರಿಬ್ಬರೇ ಮಾತನಾಡಿದ್ದರು. ಕೈ ತಪ್ಪಲು ಅನೇಕ ಕಾರಣಗಳಿದೆ. ಅದನ್ನೆಲ್ಲ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮುಂದೆ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು. ನಾಗೇಶ್ ವಿರುದ್ಧ ಆರೋಪ ಬಂದಿತ್ತು. ಮುಂದೆ ಮುನಿರತ್ನಗೆ ಅವಕಾಶ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಸಿದ್ಧವಾಗುತ್ತಿದೆ ಮಾಸ್ಟರ್ ಪ್ಲಾನ್ : ಭರ್ಜರಿ ಗೆಲುವಿವಾಗಿ ತಂತ್ರಗಾರಿಕೆ ..
ಸಿದ್ದರಾಮಯ್ಯ ಗೋ ಹತ್ಯೆ ವಿಚಾರ ಇಟ್ಟುಕೊಂಡೇ ಚುನಾವಣೆಗೆ ಹೋಗಲಿ. ಜನ ಆಗ ಸರಿ ತಪ್ಪನ್ನ ತೀರ್ಮಾನ ಮಾಡುತ್ತಾರೆ. ಅವರ ಸರ್ಕಾರ ಬಂದರೆ ಈ ಕಾನೂನನ್ನ ವಾಪಸ್ಸು ತೆಗೆದು ಹಾಕಬಹುದು.ಇದರ ಬಗ್ಗೆ ಸಾಕಷ್ಟುಮಾತನಾಡಿದ್ದೇನೆ ಎಂದರು.
ಸಿಎಂ ಬಗ್ಗೆ ಬೇಸರವಿದೆ : ನಿಗಮ, ಮಂಡಳಿ ವಿಚಾರದಲ್ಲಿ ಮುಖ್ಯಮಂತ್ರಿ ಬಗ್ಗೆ ಈಗಲೂ ಬೇಸರವಿದೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ತಪ್ಪು ಮಾಡಿದ್ದಾರೆ. ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಮುಖಂಡರಿಗೆ ಕಾರ್ಯಕರ್ತರಿಗೆ ಇದು ಬೇಸರ ತಂದಿದೆ ಎಂದು ಅವರು ಹೇಳಿದರು.
ಶಾಸಕ ಜಿ.ಟಿ. ದೇವೇಗೌಡರ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ. ಯಾವ ಕಿಟಿಕಿ ಇದೆ, ಯಾವ ಬಾಗಿಲಿದೆ ಎಂಬುದು ಗೊತ್ತಿಲ್ಲ. ಅವರು ಯಾವ ವೇದಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ. ಅವರಿಗೆ ಯಾವ ಪಕ್ಷದ ಹಂಗಿಲ್ಲ. ನಾನು ಅವರ ಬಗ್ಗೆ ಹೆಚ್ಚು ಮಾತನಾಡಿಲ್ಲ ಎಂದು ಅವರು ವ್ಯಂಗ್ಯವಾಡಿದರು.