ಹಸಿದವರಿಗೆ ಆಹಾರ ನೀಡುತ್ತಿದೆ ಹರಿಹರಾ ಪುತ್ರ ಸೇವಾ ಟ್ರಸ್ಟ್, ಅಭಿನಂದನೆ

Published : Apr 30, 2020, 07:41 PM IST
ಹಸಿದವರಿಗೆ ಆಹಾರ ನೀಡುತ್ತಿದೆ ಹರಿಹರಾ ಪುತ್ರ ಸೇವಾ ಟ್ರಸ್ಟ್, ಅಭಿನಂದನೆ

ಸಾರಾಂಶ

ಶ್ರೀ ಹರಿ ಹರಾ ಪುತ್ರ ಸೇವಾ ಟ್ರಸ್ಟ್ (ರಿ) /  ಲಾಕ್ ಡೌನ್ ನಿಮಿತ್ತ ನಿತ್ಯ ಅನ್ನದಾಸೋಹ/ ಹಸಿದವರ ಹೊಟ್ಟೆ ತುಂಬಿಸುವ ಕೆಲಸ/ ಸಾಮಾಜಿಕ ಕೆಲಸಕ್ಕೆ ಪ್ರಶಂಸೆ/

ಬೆಂಗಳೂರು(ಏ. 30) ನಗರದಲ್ಲಿರುವ ಪ್ರಕಾಶ್ ನಗರ ಶ್ರೀ ಹರಿಹರಾ ಪುತ್ರ ಸೇವಾ ಟ್ರಸ್ಟ್ (ರಿ) ವತಿಯಿಂದ  ಲಾಕ್ ಡೌನ್ ಪ್ರಾರಂಭವಾದಗಿನಿಂದ  ಹಸಿದವರಿಗೆ ಅತೀ ಅವಶ್ಯವಿರುವ ಆಹಾರದ ಪೊಟ್ಟಣಗಳನ್ನು ಕೊರೊನಾ ಸಂತ್ರಸ್ತರಿಗೆ ಕೆ.ಆರ್.ಮಾರುಕಟ್ಟೆ ಮತ್ತು ಮೆಜೆಸ್ಟಿಕ್ ಹಾಗೂ ಗಾಂಧಿನಗರ ಭಾಗಗಳಲ್ಲಿ ಆಯ್ದ ಸರಬರಾಜು ಮಾಡುತ್ತಿದ್ದಾರೆ.

ಟ್ರಸ್ಚ್ ವು  ಕಳೆದ ಏಪ್ರಿಲ್ 6 ನೇ ತಾರೀಕಿನಂದು  ಪ್ರಾರಂಭಿಕವಾಗಿ 500 ಜನರಿಗೆ ಆಹಾರದ ಪೊಟ್ಟಣಗಳನ್ನು ಸರಬರಾಜು ಮಾಡಲಾಯ್ತು  ತದನಂತರದ ದಿನಗಳಲ್ಲಿ ಪ್ರತಿದಿನ ಸಂಖ್ಯೆ ಹೆಚ್ಚಾಗತಾ ಬಂದಿದೆ ಈಗ ಪ್ರತಿನಿತ್ಯ 1000 ಜನರಿಗೆ ಆಹಾರದ ಪೊಟ್ಟಣಗಳನ್ನು ಮತ್ತು ಶುದ್ಧ ಕುಡಿಯುವ ನೀರಿನ ಅರ್ಧ ಲೀಟರ್ ಬಾಟಲ್ ನನ್ನು ಕೂಡ ನೀಡಲಾಗುತ್ತಿದೆ.

ಒಂದು ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಮೆಡಿಸಿನ್ ಬರುತ್ತೆ!

ಪ್ರತಿದಿನವು ರೈಸ್ ನ ವಿವಿಧ ತರಹದ ಅಂದರೆ ಫಲಾವು, ಆಲೂ ಬಿರಿಯಾನಿ, ಚಿತ್ರಾನ್ನ, ವಾಂಗಿಭಾತ್, ಮೆಂತೆಬಾತ್, ಕ್ಯಾಪ್ಸಿಕಾಮ್ ಬಾತ್, ಟಮೊಟೊ ಬಾತ್, ಪನೀರ್ ಬಿರಿಯಾನಿ ಹೀಗೆ ಅತ್ಯುತ್ತಮ ನುರಿತ ಅಡುಗೆ ಭಟ್ ರ ಸಹಕಾರದೊಂದಿಗೆ  ಪ್ರತಿದಿನ ಸಿದ್ದಗೊಳಿಸಿ ಸುಮಾರು 18 ದ್ವೀಚಕ್ರ ವಾಹನಗಳಲ್ಲಿ 36 ಜನ ಟ್ರಸ್ಟ್ ಸದಸ್ಯರಗಳು ನಿರಂತರವಾಗಿ  ಶ್ರಮವಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಅವರಿಗೆ ಆಹಾರ ಪದಾರ್ಥಗಳನ್ನು ಪ್ರಕಾಶ್ ನಗರದ ಟ್ರಸ್ಟ್ನ ಆವರಣದಲ್ಲಿ ಸಿದ್ದಗೊಳಿಸಿ ಅದನ್ನೆಲ್ಲಾ ಕಂಟೇನರಗಳಲ್ಲಿ ತುಂಬಿಸಿಕೊಂಡು  ಪ್ರತಿದಿನ ನಿಗದಿತ ಸ್ಥಳಗಳಿಗೆ ತೆಗೆದುಕೊಂಡು ಹೋಗಿ ಹಸಿದ ಹೊಟ್ಟೆಗಳಿಗೆ ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ ಧರಿಸಲು ಜಾಗೃತಿ ಮೂಡಿಸುತ್ತ ಸಕಲರಿಗೂ ಸಹಾಯ ಹಸ್ತ ಚಾಚುತ್ತಿದೆ ಶ್ರೀ ಹರಿಹರಾಪುತ್ರ ಸೇವಾ ಟ್ರಸ್ಟ್ .

ಟ್ರಸ್ಚ್ ನ ಅಧ್ಯಕ್ಷರಾದ ವಿ.ಭಾಸ್ಕರನ್, ಉಪಾಧ್ಯಕ್ಷರು ಪ್ರಶಾಂತ್, ಕಾರ್ಯದರ್ಶಿ ಜಿ.ಶ್ರೀನಿವಾಸ, ಉಪ ಕಾರ್ಯದರ್ಶಿ ಎ.ಬಾಲರಾಜ್ ಮತ್ತು ಖಜಾಂಜಿ ವಿ.ಬಾಬು ಹಾಗೂ ಕಾರ್ತೀಕ್ ಎಲ್ಲ ಕಮಿಟಿ ಸದಸ್ಯರುಗಳು, ಸ್ವಯಂ ಸೇವಕರುಗಳ ಸಹಕಾರದೊಂದಿಗೆ ಈ ಸಾಮಾಜಿಕ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. 

PREV
click me!

Recommended Stories

ದಕ್ಷಿಣ ಭಾರತದ ಉದಯೋನ್ಮುಖ ನಟಿ ಕೊಟ್ಟೂರಿನ ನಂದಿನಿ ಆತ್ಮ*ಹತ್ಯೆ; ಸರ್ಕಾರಿ ನೌಕರಿ ಬೇಡವೆಂದು ಸಾವಿನ ನಿರ್ಧಾರ?
ನ್ಯಾಯವೂ ಹೊರಗುತ್ತಿಗೆ?: ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!