ತಬ್ಲಿಘಿಗಳಿಗೆ ಕೇಂದ್ರ ಸರ್ಕಾರ ಏನು ಮಾಡಬೇಕಿತ್ತು? ಸಿದ್ದರಾಮಯ್ಯ ಪೋಸ್ಟ್ ಮಾರ್ಟಂ

By Suvarna NewsFirst Published Apr 30, 2020, 5:04 PM IST
Highlights

ಕರೋನಾ ವಿರುದ್ಧದ ಹೋರಾಟ/ ಕೇಂದ್ರ ಸರ್ಕಾರದ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ/ ರೈತರು ಮತ್ತು ಕಾರ್ಮಿಕರ ನೆರವಿಗೆ ಸರ್ಕಾರಗಳು ಧಾವಿಸಿಲ್ಲ/ ಫೆಬ್ರವರಿ ತಿಂಗಳಿನಲ್ಲಿಯೇ ವಿಮಾಣ ನಿಲ್ದಾಣ ಬಂದ್ ಮಾಡಬೇಕಾಗಿತ್ತು

ಬೆಂಗಳೂರು(ಏ. 30) ಲಾಕ್ ಡೌನ್ ಘೋಷಣೆ ಮಾಡುವ ಮೊದಲು ಕೇಂದ್ರ ಸರ್ಕಾರ ಮುಂಜಾಗೃತಾ ಕ್ರಮ ಕೈಗೊಳ್ಳಲಿಲ್ಲ. ಫೆಬ್ರವರಿ ತಿಂಗಳಲ್ಲೇ ಏರ್ಪೋರ್ಟ್ ಗಳನ್ನ ಬಂದ್ ಮಾಡಿದ್ರೆ ಕೊರೊನಾ ವೈರಸ್ ತಟಗಟ್ಟಬಹುದಿತ್ತು. ತಬ್ಲಿಘಿಗಳ ಸಮಾವೇಶ ಸೇರಲು ಪರ್ಮಿಷನ್ ಕೊಟ್ಟವರು ಯಾರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆ ತಬ್ಲಿಘಿ ಗಳಿಂದ ಕೊರೊನಾ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕಾಗಿತ್ತು. ರೈತರ ಬೆಳೆ ನಷ್ಟ ಆಗದಂತೆ ಸರ್ಕಾರ ಕ್ರಮಗಳನ್ನ ಕೈಗೊಳ್ಳಲಿಲ್ಲ.  ತರಕಾರಿ ಹಣ್ಣು, ಹೂ ಬೆಳೆಗಾರರಿಗೆ ಸರ್ಕಾರ ಮಾರುಕಟ್ಟೆ ಒದಗಿಸಲಿಲ್ಲ. ಪ್ರಧಾನ ಮಂತ್ರಿಗಳು ನಾಲ್ಕೈದು ಬಾರಿ ದೇಶವನ್ನ ಉದ್ದೇಶಿಸಿ ಭಾಷಣ ಮಾಡಿದ್ರು. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಹೇಳಿದ್ರೆ ಹೊರತು.. ಲಾಕ್ ಡೌನ್ ನಿಂದ ಆದ ಸಮಸ್ಯೆಗಳ ಬಗ್ಗೆ ಯಾವುದೇ ಪರಿಹಾರಕ್ಕೆ ಯಾವುದೇ ಘೋಷಣೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ತಬ್ಲಿಘಿಗಳನ್ನು ಹೀರೋ ಎಂದು ಕರೆದ ಕರ್ನಾಟದ IAS

ಸರ್ಕಾರ ತರಕಾರಿಗಳ ರೈತರಿಂದ ಖರೀದಿ ಮಾಡಬಹುದಿತ್ತು.. ಆ ಕೆಲಸ ಮಾಡಲಿಲ್ಲ.. ರಾಜ್ಯದಲ್ಲಿ ಕೃಷಿ ಕಾರ್ಮಿಕರನ್ನ ಬಿಟ್ಟು ಒಂದು ಕೋಟಿ 38 ಲಕ್ಷ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಇ‌ನ್ನೂ ಸರಿಯಾಗಿ ಆಹಾರ ದೊರೆತಿಲ್ಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಸರ್ಕಾರ ಅಕ್ಕಿ ವಿತರಿಸಿದೆ.  ಬಿಪಿಎಲ್ ಕಾರ್ಡ್ ಇರಲಿ ಬಿಡಲಿ ಎಲ್ಲರಿಗು ಅಕ್ಕಿ ಕೊಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು.

ಕೇರಳ ಸರ್ಕಾರ ಎಲ್ಲರಿಗೂ ಒಂದು ಸಾವಿರ ಮೌಲ್ಯದ 17 ಉತ್ಪನ್ನಗಳನ್ನ ನೀಡಿದೆ.  ಪ್ರಧಾನ ಮಂತ್ರಿ ಅವರ ಪರಿಹಾರ ನಿಧಿಗೆ ನಮ್ಮ ರಾಜ್ಯದಿಂದನೇ 1500 ಕೋಟಿ ದೇಣಿಗೆ ಸಂಗ್ರಹ ಆಗಿದೆ. ನಮ್ಮ ರಾಜ್ಯಕ್ಕೆ ಮೋದಿ ಕೊರೋನಾಗೆ ವಿಚಾರದಲ್ಲಿ ಯಾವುದೇ ಸಹಾಯ ಮಾಡಿಲ್ಲ. ಸಿಎಂ ಪರಿಹಾರ ನಿಧಿಗೆ 200 ಕೋಟಿ ಸಂಗ್ರಹವಾಗಿದೆ. ಅದನ್ನ ಏನು ಮಾಡಿದ್ದಾರೋ ಗೊತ್ತಿಲ್ಲ. ಇಂದು ರೈತ, ಕಾರ್ಮಿಕ ಮುಖಂಡರು, ವಿಪಕ್ಷಗಳ ನಾಯಕರು ಸೇರಿ ಸಭೆ ಮಾಡಿ ಚರ್ಚಿಸಿದ್ದೇವೆ. ಚಾರ್ಟ್ ಆಫ್ ಡಿಮ್ಯಾಂಡ್ ಅನ್ನ ಸರ್ಕಾರದ ಮುಂದಿಡ್ತೇವೆ.  ಸಿಎಂ ಭೇಟಿಗೆ ಸಮಯ ಕೋರಿ ಡಿಮ್ಯಾಂಡ್ ಚಾರ್ಟ್ ಅನ್ನ ಸಿಎಂ ಗೆ ಸಲ್ಲಿಸ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. 

ಕೊರೊನಾ ಲಾಕ್ ಡೌನ್ ವಿಚಾರದಲ್ಲಿ ವಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಿವೆ. ಇಲ್ಲಿಯ ವರೆಗೂ ರಾಜಕೀಯ ಮಾಡಿಲ್ಲ.  ನಮ್ಮ ಚಾರ್ಟ್ ಆಫ್ ಡಿಮ್ಯಾಂಡ್ ಗೆ ಸರ್ಕಾರ ಸ್ಪಂದಿಸಿ ಕಷ್ಟದಲ್ಲಿರುವ ರೈತರು ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಮಾಡದಿದ್ರೆ, ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ವಿಪಕ್ಷ ನಾಯಕ ಎಚ್ಚರಿಕೆ ನೀಡಿದರು.

click me!