ವಿಜಯಪುರ: 'ಶೋ ಮ್ಯಾನ್ ಮೋದಿ ವಿದೇಶಿ ಪ್ರಧಾನಿ..!

Published : Sep 06, 2019, 03:07 PM IST
ವಿಜಯಪುರ: 'ಶೋ ಮ್ಯಾನ್ ಮೋದಿ ವಿದೇಶಿ ಪ್ರಧಾನಿ..!

ಸಾರಾಂಶ

ಮೋದಿ ಶೋ ಮ್ಯಾನ್ ಅವರು ಭಾರತದ ಪ್ರಧಾನಿ ಅಲ್ಲ, ಫಾರಿನ್ ಪ್ರಧಾನಿ ಅಂತ ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ. ಅನರ್ಹ ಶಾಸಕರಿಂದಾಗಿ‌ 16 ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ನಡೆಯುವ ಚುನಾವಣೆಗೆ ಖರ್ಚು ಆಗುತ್ತಿರುವ ದುಡ್ಡು ಯಾರದ್ದು ಎಂದು ಪ್ರಶ್ನಿಸಿದ್ದಾರೆ.

ವಿಜಯಪುರ(ಸೆ.06): ದೇಶದ ಪ್ರಧಾನಿ ನರೇಂದ್ರ ಮೋದಿ ಗ್ರೇಟ್ ಶೋ ಮ್ಯಾನ್ ಆಗಿದ್ದು, ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ಮಾಜಿ‌ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ತಿಕೋಟಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ರಾಜ್ಯದ ಪ್ರವಾಹ, ದೇಶದ ಜಿಡಿಪಿ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಅವರೊಬ್ಬ ಗ್ರೇಟ್ ಶೋ ಮ್ಯಾನ್ ಆಗಿದ್ದಾರೆ. ಅವರು ಭಾರತದ ಪ್ರಧಾನಿಯಲ್ಲ. ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಜನರ ದುಡ್ಡು ಖರ್ಚು ಮಾಡಿಸ್ತಿದ್ದಾರೆ:

ಅನರ್ಹ ಶಾಸಕರಿಂದಾಗಿ‌ 16 ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ನಡೆಯುವ ಚುನಾವಣೆಗೆ ಖರ್ಚು ಆಗುತ್ತಿರುವ ದುಡ್ಡು ಯಾರದ್ದು ಎಂದು ಪ್ರಶ್ನಿಸಿದ ಅವರು, ಜನರ ದುಡ್ಡು ಖರ್ಚು‌ ಮಾಡಿಸುತ್ತಿದ್ದಾರೆ. ಇವರನ್ನು ಕ್ಷೇತ್ರದ ಜನತೆ ಕ್ಷಮಿಸುವುದಿಲ್ಲ ಎಂದಿದ್ದಾರೆ.

ಪ್ರವಾಹದಿಂದಾಗಿ‌ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುದಾನ ಬಿಡುಗಡೆ‌ ಮಾಡಿಲ್ಲ. 40 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಆದರೆ ಚಿಕ್ಕಾಸು ಬಿಡುಗಡೆ ಮಾಡಿಲ್ಲ ಎಂದರು.

PREV
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ