ಮಗ ದೆಹಲಿಗೆ ಹೋದಾಗಿನಿಂದ ಭೇಟಿ ಮಾಡಿಲ್ಲ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ. ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಈ ಬಗ್ಗೆ ಡಿಕೆಶಿ ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ(ಸೆ.06): ಮಗ ದೆಹಲಿಗೆ ಹೋದಾಗಿನಿಂದ ಭೇಟಿ ಮಾಡಿಲ್ಲ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ. ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಈ ಬಗ್ಗೆ ಡಿಕೆಶಿ ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗ ಡಿ.ಕೆ. ಸುರೇಶ್ ತಿಳಿಸಿದ್ರೆ ನಾನು ದೆಹಲಿಗೆ ಹೋಗಿ ಡಿ. ಕೆ. ಶಿವಕುಮಾರ್‌ನನ್ನು ನೋಡಿಕೊಂಡು ಬರ್ತೀನಿ. ದೆಹಲಿಗೆ ಹೋದ ಮೇಲೆ ಡಿಕೆಶಿ ನನ್ನ ಜೊತೆ ಮಾತಾಡಿಲ್ಲಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ತಾಯಿ ಮೌನವ್ರತ, ಮೋದಿ ಶಾ ಅಣಕು ಶವಯಾತ್ರೆ
ಡಿ. ಕೆ. ಸುರೇಶ್ ಮಾತ್ರ ನನ್ನ ಜೊತೆ ಮಾತಾಡಿದ್ದಾನೆ. ಡಿ. ಕೆ. ಶಿವಕುಮಾರ್ ಜೊತೆ ಮಾತ್ರ ಮಾತನಾಡಲು ಸಾಧ್ಯವಾಗಿಲ್ಲ. ದೆಹಲಿಗೆ ಹೋಗಿ ಭೇಟಿಯಾಗಲು ಸಾಧ್ಯವಾದ್ರೆ ಹೋಗಿ ಭೇಟಿಯಾಗಿ ಬರ್ತೀನಿ ಎಂದು ಹೇಳಿದ್ದಾರೆ.
ಮಗ ಡಿಕೆಶಿ ಅರೆಸ್ಟ್ ಸುದ್ದಿ ಕೇಳಿ ತಾಯಿ ಗೌರಮ್ಮ ಅಸ್ವಸ್ಥ