
ಬೆಂಗಳೂರು(ಜೂ. 21) ಕೊರೋನಾ ರೋಗಿಗಳನ್ನು ಚಿತ್ರೀಕರಣ ಮಾಡುವವರಿಗೆ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ರೋಗಿಗಳ ಪೋಟೋ ಚಿತ್ರೀಕರಣ ಮಾಡಬೇಡಿ. ಆಸ್ಪತ್ರೆಗೆ ಹೋಗುವಾಗ ಅದನ್ನು ಜನ ಚಿತ್ರೀಕರಣ ಮಾಡುತ್ತಿದ್ದಾರೆ ನಂತರ ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಖಾಸಗಿತನಕ್ಕೆ ಧಕ್ಕೆ ಬರುತ್ತಿದೆ ಎಂದು ರಾವ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮೂರು ಕೊರೋನಾ ಕೇರ್ ಸೆಂಟರ್, ಎಲ್ಲೆಲ್ಲಿ?
ಈ ರೀತಿ ಚಿತ್ರೀಕರಣ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ಕಮಿಷನರ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಏರುತ್ತಲೇ ಇವೆ. ಹೊಸದಾಗಿ ಬೆಂಗಳೂರಿಗೆ ಸಂಬಂಧಿಸಿ ಮೂರು ಕೊರೋನಾ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ರವಿಶಂಕರ್ ಗುರೂಜಿ ಆಶ್ರಮ, ಕೋರಮಂಗಲ ಮತ್ತು ಕಂಠೀರವ ಒಳಾಂಗಣ ಕ್ರೀಡಾಂಗಣ ಕೇರ್ ಸೆಂಟರ್ ಆಗಿ ಬದಲಾಗಿದೆ