ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಕುಟುಂಬದ ಆಸ್ತಿ ವಿಚಾರವಾಗಿ ಸಹೋದರರ ನಡುವೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ.
ಮೈಸೂರು(ಜೂ.21): ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಕುಟುಂಬದ ಆಸ್ತಿ ವಿಚಾರವಾಗಿ ಸಹೋದರರ ನಡುವೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ.
ಹೈರಿಗೆ ಗ್ರಾಮದ ಮಾದೇಗೌಡ (50) ಕೊಲೆಯಾದವರು. ಮಾದೇಗೌಡ ಮತ್ತು ಈತನ ತಮ್ಮ ಗಂಗಾಧರ್ ನಡುವೆ ಕಳೆದ ಹಲವು ವರ್ಷಗಳಿಂದಲೂ ಜಮೀನು ವಿಚಾರದಲ್ಲಿ ಜಗಳವಾಗುತ್ತಿತ್ತು. ಮಾದೇಗೌಡ ತನ್ನ ಜಮೀನು ಉಳುಮೆ ಮಾಡಲು ತಮ್ಮ ಗಂಗಾಧರ್ ಹಾಗೂ ಗ್ರಾಮದ ಯಜಮಾನರು ಬೆದರಿಕೆ ಹಾಕುವುದು ಹಾಗೂ ಬಹಿಷ್ಕಾರ ಹಾಕುವುದಾಗಿ ತಿಳಿಸಿದ್ದರು.
ಬೆಂಗಳೂರು: ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮೂವರು ಯುವಕರು
ಮಾದೇಗೌಡ ಜೂ. 19ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಮೀನು ಉಳುಮೆ ಹಾಗೂ ಬಹಿಷ್ಕಾರ ಸಂಬಂಧ ಗ್ರಾಮಸ್ಥರ ವಿರುದ್ದ ಹಾಗೂ ತಮ್ಮನ ವಿರುದ್ದ ದೂರು ಸಹ ಸಲ್ಲಿಸಿದ್ದರು.
ಶನಿವಾರ ಮಾದೇಗೌಡ ಜಮೀನಿನಲ್ಲಿ ಉಳುಮೆ ಕೆಲಸ ಮಾಡುವುದಕ್ಕಾಗಿ ಜಮೀನಿಗೆ ಹೋಗಿದ್ದಾಗ ಇದನ್ನು ಗಮನಿಸಿದ ತಮ್ಮ ಗಂಗಾಧರ್ ಅಲ್ಲಿಗೆ ತೆರಳಿದ. ಅಣ್ಣ ಮಾದೇಗೌಡರಿಗೆ ಚಾಕುವಿನಿಂದ ಎಡಭಾಗದ ಪಕ್ಕೆಯ ಭಾಗಕ್ಕೆ ತಿವಿದು ಗಾಯಗೊಳಿಸಿದ್ದು, ತೀವ್ರವಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟರು.
ವಿಷಯ ತಿಳಿದ ಮೃತ ಮಾದೇಗೌಡರ ಪುತ್ರ ಶ್ರೀಕಾಂತ್ ಬಂದಿರುವುದನ್ನು ಗಮನಿಸಿದ ಗಂಗಾಧರ್ ಆತನ ಬೆನ್ನಿನ ಭಾಗಕ್ಕೆ ಚಾಕುವಿನಿಂದ ತಿವಿದಿದ್ದು, ತೀವ್ರವಾಗಿ ಗಾಯಗೊಂಡಿರುವ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೈಕ್ ವ್ಹೀಲಿಂಗ್‌ಗೆ ಪ್ರಿಯಕನನ್ನು ಹುರಿದುಂಬಿಸಿದ ಪ್ರಿಯತಮೆ: ವಿಡಿಯೋ ವೈರಲ್
ಈ ಸಂಬಂಧ ಮೃತ ಮಾದೇಗೌಡನ ತಾಯಿ ಪುಟ್ಟಮ್ಮ, ತನ್ನ ಮಗನ ಸಾವಿಗೆ ಗ್ರಾಮಸ್ಥರು ಹಾಗೂ ಮತ್ತೊಬ್ಬ ಮಗ ಗಂಗಾಧರ ಕಾರಣ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆಯ ಸ್ಥಳಕ್ಕೆ ಪಟ್ಟಣದ ಸರ್ಕಲ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ, ಎಸ್‌ಐ ನಾಯಕ್, ಪೇದೆ ಗೋಪಾಲ್, ಚಾಲಕ ಮಹಾವೀರ್ ನೀಡಿದ್ದಾರೆ.
ಅಣ್ಣನನ್ನು ಕೊಲೆ ಮಾಡಿರುವ ತಮ್ಮ ಗಂಗಾಧರ್ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದಾನೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ,