
ಗಂಗಾವತಿ (ಜು.11): ಆರ್‌ಎಸ್‌ಎಸ್ ಮೇಲೆ ಇಡಿ ದಾಳಿ ಮಾಡಿದಾಗ ಇವರ ನಾಟಕ ಬಯಲಾಗುತ್ತದೆ ಎಂದು ಕನಕಗಿರಿ ಶಾಸಕರಾಗಿರುವ ಮಾಜಿ ಸಚಿವ ಶಿವರಾಜ ತಂಗಡಗಿ ದೂರಿದರು. ನಗರದ ಐಎಂಎ ಭವನದಲ್ಲಿ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಆರ್‌ಎಸ್‌ಎಸ್ ಸಂಘಟನೆಗೆ ಸಾವಿರಾರು ಕೋಟಿ ಹಣ ಎಲ್ಲಿಂದ ಬರ್ತಾ ಇದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಹೇಳಿದ ಅವರು ಕರ್ನಾಟಕದಲ್ಲಿ ಓಟ್ ಚೋರಿ ಮಾಡಲು ಆಗಲ್ಲ ಅಂತ ಬಿಜೆಪಿಗೆ ಟೆನ್ಷನ್ ಶುರುವಾಗಿದೆ ಎಂದರು. ರಾಜ್ಯದಲ್ಲಿ ಎಸ್‌ಐಆರ್ ಚೆನ್ನಾಗಿ ಕೆಲಸ ನಡೆದಿದೆ.ಇದರಿಂದ ಬಿಜೆಪಿ ಪಕ್ಷದವರಿಗೆ ಟೆನ್ಯಿಷನ್ ಶುರುವಾಗಿದೆ ಎಂದರು.
ಎಸ್‌ಐಆರ್ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡ್ತಾ ಇಲ್ಲ. ಈ ಕೆಲಸ ಚುನಾವಣಾ ಆಯೋಗ ಮಾಡ್ತಾ ಇದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಿಗಬೇಕು, ಕೊಡಬೇಕು ಅನ್ನೋದು ನಮ್ಮ ವಾದವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಬಿಜೆಪಿಯವರು ಮಾಡ್ತಾ ಇದ್ದಾರೆ. ಯಾವ ಹಂತದಲ್ಲಿ ರಾಜ್ಯ ಸರ್ಕಾರ ದುರುಪಯೋಗ ಮಾಡ್ತಿದೆ ಎನ್ನುವದರ ಬಗ್ಗೆ ಪ್ರೂಫ್ ನೀಡಲಿ ಎಂದರು. ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರು ವಿನಾಃ ಕಾರಣ ಮಾತಾಡ್ತಾ ಇದ್ದಾರೆ ಎಂದರು. ಪಶ್ಚಿಮ ಬಂಗಾಳ ಹಾಗೂ ಮಧ್ಯ ಪ್ರದೇಶದಲ್ಲಿ 86 ಲಕ್ಷ ಮತದಾರರ ಪಟ್ಟಿಯಿಂದ ತೆದಗು ಹಾಕಿದ್ದಾರೆ ಇದಕ್ಕೆ ಉತ್ತರ ನೀಡಲಿ ಎಂದರು.
ಈಗಾಗಲೇ ಅಯೋಧ್ಯೆಯಲ್ಲಿ ನಡೆದಿರುವ ಕಾಣಿಕೆ ಹುಂಡಿಯ ಭ್ರಷ್ಟಾಚಾರ ಬಟಾ ಬಯಲಾಗಿದ್ದು, ಈಗ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಕಾಣಿಕೆ ಹುಂಡಿಗೆ ಕೈ ಹಾಕಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಶಾಸಕ ತಂಗಡಗಿ ಆರೋಪಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಬಂದರೆ ಹುಷಾರ್ ಅಂತಾ ಹೇಳುವ ಪರಿಸ್ಥಿತಿ ಒದಗಿದೆ ಎಂದರು. 2029 ಲೋಕಸಭಾ ಚುನಾವಣೆಗೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ನನ್ನ ಸಂಪೂಪರ್ಣ ವಿರೋಧ ಇದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ರೀತಿ ಕೆಲಸ ಮಾಡಲು ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಬಿಜೆಪಿಯ ಗಾಳಿ ಹೋಗಿದೆ, ಎಲ್ಲ ಕಡೆ ಗಾಳಿ ಟುಸ್ ಮುರ್ಗಾ ಆಗಿದೆ ಎಂದರು. ಕಾಂಗ್ರೆಸ್ ಪಕ್ಷ ಮಹಿಳಾ ಕಾನೂನಿಗೆ ವಿರೋಧ ಮಾಡಿಲ್ಲ ಸಂಪೂರ್ಣವಾಗಿ ಬೆಂಬಲ ಇದೆ ಎಂದರು. ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ. ನಾನು ಪ್ರಬಲ ಆಕಾಂಕ್ಷಿ ಎಂದರು.