ಬೆಂಗಳೂರು: ಶಿವಾನಂದ ಫ್ಲೈಓವರ್‌ ತಿಂಗಳಾಂತ್ಯಕ್ಕೆ ಸಂಚಾರಕ್ಕೆ ಮುಕ್ತ?

By Kannadaprabha News  |  First Published Aug 12, 2022, 7:47 AM IST

ರೇಸ್‌ಕೋರ್ಸ್‌ ರಸ್ತೆಯಿಂದ ಮಲ್ಲೇಶ್ವರ ಸಂಪರ್ಕಿಸುವ ಫ್ಲೈಓವರ್‌, ಅಂತಿಮ ಹಂತ ಕಾಮಗಾರಿ ಇನ್ನೂ ಅಪೂರ್ಣ


ಸಂಪತ್‌ ತರೀಕೆರೆ

ಬೆಂಗಳೂರು(ಆ.12):  ನಗರದ ರೇಸ್‌ಕೋರ್ಸ್‌ ರಸ್ತೆಯಿಂದ ಮಲ್ಲೇಶ್ವರ, ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಶಿವಾನಂದ ಮೇಲ್ಸೇತುವೆ ಕಾಮಗಾರಿ ವಾರದೊಳಗೆ ಪೂರ್ಣಗೊಂಡರೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನೂ ಆಗಸ್ಟ್‌ ಅಂತ್ಯದವರೆಗೆ ಕಾಯಬೇಕಿದೆ. ಶಿವಾನಂದ ವೃತ್ತದ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಇಳಿಜಾರಿನಲ್ಲಿ ವಾಲ್ಟ್‌ ನಿರ್ಮಾಣ ಬಾಕಿಯಿದೆ. ಮಳೆಯಿಂದ ಯಾವುದೇ ಅಡಚಣೆಯಾಗದಿದ್ದರೆ ವಾರದೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹೀಗಾಗಿ ಆ.15ಕ್ಕೆ ಮೇಲ್ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡುವುದು ಅನುಮಾನ. ಆ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಮೇಲ್ಸೇತುವೆ ಕೆಳಭಾಗದಲ್ಲಿ ಬಾಕಿ ಇರುವ ಇತರೆ ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

Tap to resize

Latest Videos

ಶಿವಾನಂದ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಇಳಿಜಾರನ್ನು ಶೇ.6.66ರಷ್ಟುಹೆಚ್ಚಿಸಲು ಬಿಬಿಎಂಪಿ ಕೋರ್ಚ್‌ನಿಂದ ಅನುಮತಿ ಪಡೆದಿದೆ. ಹೀಗಾಗಿ ಏಳು ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಮುಖ್ಯವಾಗಿ ಮೇಲ್ಸೇತುವೆ ಇಳಿಜಾರಿನಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಅದನ್ನು ಕೂಡ ಮುಗಿಸುವುದಾಗಿ ಬಿಬಿಎಂಪಿ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಶಿವಾನಂದ ವೃತ್ತದ ಮೇಲ್ಸೇತುವೆ ಬಳಿಯಲ್ಲಿ ಫುಟ್‌ಪಾತ್‌ ಒತ್ತುವರಿ

ಶಿವಾನಂದ ವೃತ್ತದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 2017ರ ಮಾಚ್‌ರ್‍ನಲ್ಲಿ ಆರಂಭಿಸಲಾಗಿತ್ತು. ಕಾಮಗಾರಿಯ ಗುತ್ತಿಗೆಯನ್ನು ಎಂ.ವೆಂಕಟರಾವ್‌ ಇನ್ಫ್ರಾ ಪ್ರಾಜೆಕ್ಟ್$್ಸ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿತ್ತು. ಗುತ್ತಿಗೆ ಕಂಪನಿ ಕಾಮಗಾರಿ ಆರಂಭಿಸಿದ 13 ತಿಂಗಳಲ್ಲಿ (2018 ಜೂನ್‌) ಯೋಜನೆ ಪೂರ್ಣಗೊಳ್ಳಬೇಕಿತ್ತು. ಪ್ರಸ್ತುತ ಶೇ.15ರಷ್ಟು ಕಾಮಗಾರಿ ಮಾತ್ರ ಬಾಕಿದೆ.

ಸುಮಾರು .60 ಕೋಟಿ ವೆಚ್ಚದಲ್ಲಿ ರೇಸ್‌ಕೋರ್ಸ್‌ ವೃತ್ತದಿಂದ ಶೇಷಾದ್ರಿಪುರ ಸಂಪರ್ಕಿಸುವ ರಸ್ತೆಯಲ್ಲಿ 493 ಮೀಟರ್‌ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ.85ರಷ್ಟುಕಾಮಗಾರಿಯೂ ಪೂರ್ಣಗೊಂಡಿದೆ. ಅಂತಿಮ ವಿನ್ಯಾಸ, ತಡೆಗೋಡೆ ನಿರ್ಮಾಣ, ಸ್ಲಾ್ಯಬ್‌, ರಾರ‍ಯಂಪಿಂಗ್‌ ಮತ್ತಿತರರ ಕೆಲಸಗಳು ಈಗಾಗಲೇ ಮುಕ್ತಾಯಗೊಂಡಿವೆ.

ರೇಸ್‌ಕೋರ್ಸ್‌ ರಸ್ತೆಯ ಕಡೆಯ ಮೇಲ್ಸೇತುವೆ ಕಾರ್ಯ ಪೂರ್ಣಗೊಂಡಿದ್ದು ಕ್ರಾಶ್‌ ಬ್ಯಾರಿಯರ್‌ ಸೇರಿದಂತೆ ಮತ್ತಿತರ ವಿನ್ಯಾಸದ ಕಾರ್ಯಗಳು ಹಾಗೂ ಶೇಷಾದ್ರಿಪುರ ರೈಲ್ವೆ ಮೇಲ್ಸೆತುವೆ ಕಡೆ ಬಹುತೇಕ ಎಲ್ಲ ಕೆಲಸ ಬಾಕಿ ಇವೆ. ಪ್ರಸ್ತುತ ರೈಲ್ವೆ ಮೇಲ್ಸೇತುವೆಯಿಂದ 95 ಮೀ. ಮುಂಚೆಯೇ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಇದರಿಂದಾಗಿ ಹೆಚ್ಚುವರಿಯಾಗಿ ವೆಚ್ಚವಾಗಬೇಕಿದ್ದ 40 ರಿಂದ 50 ಕೋಟಿ ರು. ಉಳಿತಾಯ ಆದಂತಾಗಲಿದೆ.

ಬೆಂಗಳೂರು: ಶಿವಾನಂದ ಫ್ಲೈಓವರ್‌ ಆ.15ರ ವೇಳಗೆ ಸಿದ್ಧ

ನಿರೀಕ್ಷೆಯಲ್ಲಿ ವಾಹನ ಸವಾರ

ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಕಾಮಗಾರಿ ವಿಳಂಬದಿಂದ ಈ ಸೇತುವೆಯೇ ದಟ್ಟಣೆ ಹೆಚ್ಚಲು ಕಾರಣವಾಗಿದೆ. ದಟ್ಟಣೆ ಸಮಯದಲ್ಲಿ(ಪೀಕ್‌ ಅವರ್‌) ವಾಹನಗಳು ಸಾಲುಗಟ್ಟಿನಿಲ್ಲುತ್ತವೆ. ಈ ಸಂದರ್ಭದಲ್ಲಿ ಪಾದಾಚಾರಿಗಳು ಸಂಚರಿಸಲು ಹರಸಾಹಸ ಪಡಬೇಕು. ರೇಸ್‌ ಕೋರ್ಸ್‌ ರಸ್ತೆಯಿಂದ ಆಗಮಿಸಿ ಶಿವಾನಂದ ವೃತ್ತದಲ್ಲಿ ಕುಮಾರಕೃಪ ರಸ್ತೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ರೇಸ್‌ಕೋರ್ಸ್‌ ರಸ್ತೆಯಿಂದ ಕುಮಾರಕೃಪಾ ರಸ್ತೆಗೆ ಹೋಗಬೇಕಾದ ವಾಹನ ಸವಾರರು ನೇರವಾಗಿ ಶೇಷಾದ್ರಿಪುರಂ ವೃತ್ತದಲ್ಲಿ ಯೂಟರ್ನ್‌ ತೆಗೆದುಕೊಂಡು ಬರಬೇಕಿದೆ.

ವಿಳಂಬಕ್ಕೆ ಕಾರಣಗಳು

*ಮೇಲ್ಸೇತುವೆ ಇಳಿಜಾರಿನಲ್ಲಿ ಒಳಚರಂಡಿ ಕಾಮಗಾರಿ
*ಫ್ಲೈಓವರ್‌ನ ಇಳಿಜಾರಿನಲ್ಲಿ ವಾಲ್ಟ್‌ ನಿರ್ಮಾಣ ಬಾಕಿ
*ನಿರಂತರ ಮಳೆಯಿಂದಾಗಿ ಕಾಮಗಾರಿ ವಿಳಂಬ
 

click me!