ಕುಮಟಾ: 12 ಕುಟುಂಬಗಳಿಗೆ ಬಹಿಷ್ಕಾರ ಆರೋಪ, ಸಿಎಂಗೆ ಪತ್ರ

By Kannadaprabha News  |  First Published Mar 18, 2021, 10:07 AM IST

ರಾಜ್ಯಪಾಲರು, ಸಿಎಂ, ಗೃಹಸಚಿವರಿಗೆ ಶಿವಾನಂದ ಹಳ್ಳೇರ ಪತ್ರ| ಪೊಲೀಸರು ಹೇಳುವುದೆ ಬೇರೆ| ಊರಿನಲ್ಲಿ ಎರಡು ಪಂಗಡಗಳಿವೆ. ಎರಡೂ ಪಂಗಡಗಳ ನಡುವೆ ಹಲ್ಲೆ, ವಾಗ್ವಾದ ನಡೆಯುತ್ತಲೇ ಇದೆ| ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲು|


ಕುಮಟಾ(ಮಾ.18): ತಾಲೂಕಿನ ಎಣ್ಣೆಮಡಿಯ 12 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ತನಕ ಪತ್ರ ಬರೆದಿದ್ದಾರೆ. ಹಿರೇಗುತ್ತಿ ಸಮೀಪದ ಎಣ್ಣೆಮಡಿಯ ಸೀತೆ ಹಳ್ಳೇರ ಹಾಗೂ ಅವರ 11 ಸಂಬಂಧಿಕರ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದು, ಊರಿನ ಇತರರು ಈ 12 ಕುಟುಂಬದೊಂದಿಗೆ ಯಾವ ವ್ಯವಹಾರವನ್ನೂ ಮಾಡುತ್ತಿಲ್ಲ ಎಂದು ಶಿವಾನಂದ ಹಳ್ಳೇರ ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಕೆಲ ದಿನಗಳ ಹಿಂದೆ ಕಾಡುಪ್ರಾಣಿಯನ್ನು ಕೊಲ್ಲಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಲು ಸೀತಾ ಹಳ್ಳೇರ ಹಾಗೂ ಅವರ ಕುಟುಂಬದವರೇ ಕಾರಣ ಎಂದು 12 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಾರಾಯಣ ಹಳ್ಳೇರ, ಪಾಂಡುರಂಗ ಹಳ್ಳೇರ ಮತ್ತಿತರರು ಬಹಿಷ್ಕಾರ ಹಾಕಿದ್ದಾರೆ ಎಂದು ಆಪಾದಿಸಲಾಗಿದೆ.

Latest Videos

undefined

ಗಡಿಗಳಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್‌ ತಪಾಸಣೆ

ಆದರೆ ಪೊಲೀಸರು ಹೇಳುವುದೆ ಬೇರೆ, ಊರಿನಲ್ಲಿ ಎರಡು ಪಂಗಡಗಳಿವೆ. ಎರಡೂ ಪಂಗಡಗಳ ನಡುವೆ ಹಲ್ಲೆ, ವಾಗ್ವಾದ ನಡೆಯುತ್ತಲೇ ಇದೆ. ಈ ಬಗ್ಗೆ ಪೊಲೀಸ್‌ ಪ್ರಕರಣಗಳು ಸಹ ದಾಖಲಾಗಿವೆ. ಕೊರೋನಾ ಸಂದರ್ಭದಲ್ಲಿ ಒಬ್ಬರು ಮೃತಪಟ್ಟಾಗ ಅವರ ಸಂಸ್ಕಾರಕ್ಕೆ ಒಂದು ಪಂಗಡದವರು ಹೋಗಿರಲಿಲ್ಲ. ಕೊರೋನಾ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ಪರವಾನಗಿ ಹಾಗೂ ನಿರ್ದಿಷ್ಟಮಾನದಂಡ ಅನುಸರಿಸದೆ ಇರುವುದರಿಂದ ತಾವು ಹೋಗಿಲ್ಲ ಎಂದು ಇನ್ನೊಂದು ಪಂಗಡದವರು ಹೇಳುತ್ತಾರೆ. ಮಂಗಳವಾರ ಪೊಲೀಸ್‌ ಅಧಿಕಾರಿಗಳು ಹೋಗಿ ಸಭೆ ನಡೆಸಿದ್ದು, ಒಂದೇ ಸರ್ಕಾರಿ ಬಾವಿಯಿಂದ ಎರಡೂ ಪಂಗಡದವರು ನೀರು ಸೇದುತ್ತಾರೆ. ಶಾಲೆಗಳಿಗೂ ಹೋಗುತ್ತಾರೆ. ಎರಡು ಪಂಗಡದವರ ನಡುವಣ ವೈಷಮ್ಯದಿಂದ ಈ ಆಪಾದನೆ ಕೇಳಿಬಂದಿದೆ ಎಂದು ಸಿಪಿಐ ಪರಮೇಶ್ವರ ಗುನಗ ತಿಳಿಸಿದ್ದಾರೆ.
 

click me!