
ಧಾರವಾಡ(ಮಾ.18): ಸಮೀಪದ ಅಮ್ಮಿನಬಾವಿ ಬಳಿಯ ಡಿ.ಬಿ. ಮಾಸೂರ ಸ್ಟೋನ್ ಕ್ರಷಿಂಗ್ ದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿಗಳು ಹಾಗೂ ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸ್ಟೋನ್ ಕ್ರಷಿಂಗ್ ಮಾಡುವ ಸ್ಥಳದಲ್ಲಿ ಭೂಮಿಯೊಳಗೆ ಬಚ್ಚಿಟ್ಟಿದ್ದ 9 ಬಾಕ್ಸ್‌ನಲ್ಲಿ 16500 ಮೊತ್ತದ 1650 ಜಿಲೆಟಿನ್ ಕಡ್ಡಿಗಳು, 3500 ಮೊತ್ತದ 700 ಎಲೆಕ್ಟ್ರಾನಿಕ್ ಡಿಟೋನೆಟರ್ ಗಳು ಪತ್ತೆಯಾಗಿವೆ. ಈ ಕುರಿತು ಬಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಶಿವಮೊಗ್ಗ, ಚಿಕ್ಕಬಳ್ಳಾಪೂರ ಘಟನೆ ನಂತರ ಎಚ್ಚೆತ್ತುಕೊಂಡು ಎಲ್ಲ ಗಣಿಗಾರಿಕೆ ಪ್ರದೇಶದಲ್ಲಿ ತಪಾಸಣೆ ನಡೆಯುತ್ತಿದೆ. ಈ ಮಧ್ಯೆ ಖಚಿತ ಮಾಹಿತಿ ಮೇರೆಗೆ ಮಾಸೂರ ಸ್ಟೋನ್ ಕ್ರಷಿಂಗ್ ದಲ್ಲಿ ತಪಾಸಣೆ ಮಾಡಲಾಗಿ ಅಕ್ರಮ ಸ್ಫೋಟಕ ವಸ್ತುಗಳನ್ನು ನಮ್ಮ ಪೊಲೀಸ್ ತಂಡ ಪತ್ತೆ ಹಚ್ಚಿದೆ ಎಂದರು.
ಹುಬ್ಬಳ್ಳಿ: ಹರಿಜನ ಶಾಲಾ ಮಕ್ಕಳ ಕಣ್ಣೀರಿಗೆ ಸ್ಪಂದಿಸಿದ ಕಿಚ್ಚ!
ಈ ಪ್ರಕರಣದಲ್ಲಿ ಕರಡಿಗುಡ್ಡದ ಶಂಕರಗೌಡ ಶಿವನಗೌಡ ಬಂಧನ ಮಾಡಿದ್ದು, ಧಾರವಾಡದ ದಯಾನಂದ ಬಸವರಾಜ ಮಾಸೂರ ಹಾಗೂ ಬಾಗಲಕೋಟ ನವೀನಕುಮಾರ ಮೇಲೆ ಎಕ್ಸಪ್ಲೋಸಿವ್ ಆ್ಯಕ್ಟ್ 1884ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡಿವೈಎಸ್ಪಿ ಎಂ.ಬಿ. ಸುಂಕದ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಅಧಿಕಾರಿಗಳಾದ ವಿಜಯ ಬಿರಾದಾರ, ಶ್ರೀಧರ ಸಾತಾರೆ ಈ ಕಾರ್ಯಾಚಾರಣೆ ಮಾಡಿದ್ದಾರೆ ಎಂದು ಕೃಷ್ಣಕಾಂತ ಮಾಹಿತಿ ನೀಡಿದರು.