ಬೈಕ್ ರೈಡ್ ಆಸೆ ತೋರಿಸಿದ ಯುವಕನ ಕೈ ಕಚ್ಚಿದ ಮುಸಿಯ, ಸೋಶಿಯಲ್ ಮೀಡಿಯಾ ರೀಲ್ಸ್ ಕ್ರೇಜ್ ತಂದಿಟ್ಟ ದುರಂತ!

Published : Aug 22, 2026, 11:59 AM IST
shivamogga

ಸಾರಾಂಶ

ಶಿವಮೊಗ್ಗದಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚಿನಿಂದ ಯುವಕನೊಬ್ಬ ಮಂಗನೊಂದಿಗೆ ವೀಡಿಯೋ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೆದರಿದ ಮಂಗವು ಆತನ ಕೈಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದು, ವನ್ಯಜೀವಿಗಳೊಂದಿಗೆ ಸಾಹಸ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಎಚ್ಚರಿಕೆಯಾಗಿದೆ.

ಶಿವಮೊಗ್ಗ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿನಿಂದ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಶಿವಮೊಗ್ಗ ನಗರದ ಕಾಶಿಪುರ ಬಡಾವಣೆಯಲ್ಲಿ ನಡೆದಿದೆ.

ಬೈಕ್ ಮೇಲೆ ಕುಳಿತಿದ್ದ ಮುಸಿಯ!

ಕಾಶಿಪುರ ಬಡಾವಣೆಯ ಹುಚ್ಚರಾಯ ಕಾಲೋನಿಯ ನಿವಾಸಿ ಕುಮಾರ ನಾಯ್ಕ್ ಎಂಬ ಯುವಕನೇ ಈ ಅಚಾತುರ್ಯಕ್ಕೆ ಒಳಗಾದವನು. ಕುಮಾರ ನಾಯ್ಕ್ ತನ್ನ ಬೈಕ್ ಬಳಿ ಹೋದಾಗ, ಅಲ್ಲಿ ಮುಸಿಯ (ಒಂದು ಜಾತಿಯ ಕೋತಿ) ಆರಾಮವಾಗಿ ಬೈಕ್ ಮೇಲೆ ಬಂದು ಕುಳಿತಿತ್ತು. ಇದನ್ನು ಕಂಡ ಯುವಕನಿಗೆ ತಕ್ಷಣವೇ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚು ತಲೆಗೇರಿದೆ. ಮಂಗನೊಂದಿಗೆ ಬೈಕ್‌ನಲ್ಲಿ ರೌಂಡ್ಸ್ ಹೊಡೆಯುತ್ತಾ ವೀಡಿಯೋ ಚಿತ್ರೀಕರಿಸಲು ಪ್ಲಾನ್ ಮಾಡಿದ್ದಾನೆ.

ಕ್ಷಣಾರ್ಧದಲ್ಲಿ ಬದಲಾಯ್ತು ದೃಶ್ಯ: ಯುವಕನ ಕೈಗೆ ಮಂಗನ ಭೀಕರ ದಾಳಿ!

ಮಂಗನನ್ನು ಜೊತೆಯಲ್ಲಿಟ್ಟುಕೊಂಡು ಬೈಕ್ ಸ್ಟಾರ್ಟ್ ಮಾಡಲು ಯುವಕ ಹತ್ತಿರ ಹೋಗಿ ಬೈಕ್ ಕೀ (Key) ಆನ್ ಮಾಡಲು ಮುಂದಾಗಿದ್ದಾನೆ. ಆದರೆ, ಆ ಕ್ಷಣದಲ್ಲೇ ಅನಿರೀಕ್ಷಿತವಾಗಿ ಘಟನೆಯೊಂದು ನಡೆದುಹೋಗಿದೆ. ಯುವಕ ಹತ್ತಿರ ಬಂದು ಕುಳಿತಿದ್ದಕ್ಕೆ ಹೆದರಿದ ಮುಸಿಯ, ಹಠಾತ್ತಾಗಿ ಯುವಕನ ಕೈಗೆ ಬಾಯಿ ಹಾಕಿ ಕಡಿದು ಭೀಕರವಾಗಿ ದಾಳಿ ನಡೆಸಿದೆ.

ಕೈ ಮಾಂಸವೇ ಕಟ್!

ಯುವಕ ತಕ್ಷಣವೇ ತನ್ನ ಕೈಯನ್ನು ಮಂಗನ ಬಾಯಿಂದ ಬಿಡಿಸಿಕೊಳ್ಳಲು ಸಕಲ ಪ್ರಯತ್ನ ನಡೆಸಿದ್ದಾನೆ. ಆದರೆ, ಆತ ಕೈ ಬಿಡಿಸಿಕೊಳ್ಳುವಷ್ಟರಲ್ಲೇ ಮಂಗ ಕಡಿದ ರಭಸಕ್ಕೆ ಯುವಕನ ಕೈ ಮಾಂಸವೇ ತುಂಡಾಗಿ ಹೊರಬಂದಿತ್ತು! ಕೈಯಿಂದ ರಕ್ತ ಹರಿಯಲು ಪ್ರಾರಂಭಿಸಿದಾಗಷ್ಟೇ ಯುವಕನಿಗೆ ತಾನು ಮಾಡಿದ ಯಡವಟ್ಟಿನ ಗಂಭೀರತೆ ಮತ್ತು ಮಂಗನ ದಾಳಿಯ ಭಯಾನಕತೆ ಅರಿವಿಗೆ ಬಂದಿದೆ.

ದಾಳಿ ನಡೆಸಿದ ತಕ್ಷಣವೇ ಆ ಮಂಗ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ತೀವ್ರ ರಕ್ತಸ್ರಾವ ಹಾಗೂ ತೀವ್ರ ಗಾಯದಿಂದ ಬಳಲುತ್ತಿದ್ದ ಕುಮಾರ ನಾಯ್ಕ್‌ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.

ಸೋಶಿಯಲ್ ಮೀಡಿಯಾ ಲೈಕ್ಸ್ ಮತ್ತು ವೀವ್ಸ್‌ಗಾಗಿ ವನ್ಯಜೀವಿಗಳು ಹಾಗೂ ಪ್ರಾಣಿಗಳ ಹತ್ತಿರ ಹೋಗಿ ಸಾಹಸ ಮಾಡಲು ಹೊರಟರೆ ಜೀವಕ್ಕೇ ಕಂಟಕ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ಚಿಕ್ಕಮಗಳೂರಲ್ಲಿ ಲೋಕಾಯುಕ್ತ ಖೆಡ್ಡಾ; ಲಕ್ಷ ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸರ್ವೆ ಅಧಿಕಾರಿಗಳು
Bengaluru South: 54 ಕೋಟಿ ವೆಚ್ಚ, 6 ಎಕರೆ ಜಾಗದಲ್ಲಿ 888 ಮನೆಗಳ ನಿರ್ಮಾಣಕ್ಕೆ ಮೂಹರ್ತ