Shivamogga: ಮದುವೆಯಾದ ಏಳೇ ತಿಂಗಳಿಗೆ ಗಂಡನ ಮನೆಯವರ ಹಿಂಸೆ ತಾಳಲಾರದೆ ನಾಲೆಗೆ ಹಾರಿದ ಗೃಹಿಣಿ!

Published : Nov 25, 2025, 04:50 PM IST
Shivamogga Death Case

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ, ಗಂಡನ ಮನೆಯವರ ಕಿರುಕುಳದಿಂದ ನೊಂದ ಲತಾ ಎಂಬ ನವವಿವಾಹಿತೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತಿ ಗುರುರಾಜ್ ಸೇರಿದಂತೆ ಐದು ಮಂದಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಶಿವಮೊಗ್ಗ (ನ.25): ಗಂಡನ ಮನೆಯವರ ಅತಿಯಾದ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನಾಲೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲತಾ ಎನ್ನುವ ಮಹಿಳಾ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ಘಟನೆ ನಡೆದಿದೆ.

ಇದೇ ವರ್ಷದ ಏಪ್ರಿಲ್ ನಲ್ಲಿ ಶಿಕಾರಿಪುರ ತಾಲೂಕು ದಿಂಡದಹಳ್ಳಿ ಗ್ರಾಮದ ಗುರುರಾಜ್ ಎಂಬಾತನ ಲತಾ ಮದುವೆಯಾಗಿದ್ದರು. ಭದ್ರಾವತಿ ತಾಲೂಕಿನ ಡಿ ಬಿ ಹಳ್ಳಿಯ ದಿ. ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಗಳ ಪುತ್ರಿಯಾಗಿದ್ದ ಲತಾ, ಮದುವೆಯಾದ ಏಳು ತಿಂಗಳಲ್ಲಿ ಗಂಡನ ಮನೆಯವರಿಂದ ನಾನಾ ರೀತಿಯ ಹಿಂಸೆ ಎಂದು ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಕೆಪಿಸಿಎಲ್ ಎಇಇ ಆಗಿರುವ ಗುರುರಾಜ್ ಮತ್ತು ಅವರ ಪೋಷಕರಿಂದ ಕಿರುಕುಳ ಎಂದು ಡೆತ್ ನೋಟ್ ನಲ್ಲಿ ಲತಾ ವಿವರವಾಗಿ ಬರೆದಿದ್ದು, ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ತನ್ನ ಸಾವಿಗೆ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ, ಗುರುರಾಜ್‌ ಹಾಗೂ ಕೃಷ್ಣಪ್ಪ ಕಾರಣ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಈ ಐದೂ ಜನ ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನಾನು ಮದುವೆ ಆಗಿದ್ದ ಹುಡುಗ ಒಳ್ಳೆಯವರು ಎಂದುಕೊಂಡು ಮದುವೆ ಆದೆ. ಆದರೆ, ಅವರ ಅಕ್ಕ, ಅಮ್ಮ ಹಾಗೂ ಮಾವನ ಮಾತು ಕೇಳಿ ಇವರು ಕೂಡ ನನ್ನ ಜೊತೆ ನಾಟಕೀತವಾಗಿ ವರ್ತನೆ ಮಾಡಿದರು. ಇದರಿಂದ ಸಾಕಷ್ಟು ಅವಮಾನ ಮಾಡಿಸಿಕೊಂಡಿದ್ದೇನೆ. ಇದನ್ನು ಓದುತ್ತಿರುವವರು ನನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಲತಾ ಬರೆದುಕೊಂಡಿದ್ದಾರೆ.

ಒಳ್ಳೆಯದಾಗುತ್ತೆ ಅಂತಾ ಸಹಿಸಿಕೊಂಡೆ

ಯಾರು ಕೂಡು ಹುಟ್ತಾ ಕೆಟ್ಟವರಾಗಿ ಇರೋದಿಲ್ಲ. ಪ್ರತಿ ಹೆಣ್ಣು ಕೂಡ ಪುಣ್ಯ ಮಾಡಿಯೇ ಗಂಡನ ಮನೆಗೆ ಹೋಗುತ್ತಾಳೆ. ಒಂದೇ ದಿನಕ್ಕೆ, ಒಂದೇ ತಿಂಗಳಿಗೆ ಯಾರೂ ಕೂಡ ಅಲ್ಲಿನ ವಾತಾವರಣಕ್ಕೆ ಅಡ್ಜಸ್ಟ್‌ ಆಗೋದಿಲ್ಲ. ಈ ಸಮಯದಲ್ಲಿ ಯಾರೂ ಬೆಂಬಲ ಕೊಡದೆ ಇದ್ದರೂ, ಗಂಡ ಬೆಂಬಲ ಕೊಡಬೇಕು. ನನ್ನ ಹೆಂಡ್ತಿ ಹೊಸ ಮನೆಗೆ ಬಂದಿದ್ದಾಳೆ. ತಪ್ಪುಗಳು ಆಗುತ್ತದೆ. ಅದನ್ನು ಬಿಟ್ಟು ಮನೆಯ ಉಳಿದವರ ಜೊತೆ ಸೇರಿಕೊಂಡು ಗಂಡನೂ ಕೂಡ ದ್ವೇಷ ಮಾಡಿದಾಗ ಹೆಣ್ಣು ಬದುಕಿದ್ದೂ ಸತ್ತ ಥರ ಅನಿಸುತ್ತದೆ. ಒಳ್ಳೆಯದಾಗುತ್ತೆ ಅಂತಾ ತುಂಬಾ ಸಹಿಸಿಕೊಂಡೆ. ಆದರೆ, ದಿನೇ ದಿನೇ ಅವರು ಮಾಡುತ್ತಿರುವ ಸಂಚಿನ ವರ್ತನೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಲತಾ ಬರೆದುಕೊಂಡಿದ್ದಾರೆ.

ಶವಕ್ಕಾಗಿ ಶೋಧ ಕಾರ್ಯ

ಲತಾ ಭದ್ರಾ ನಾಲೆಗೆ ಹಾರಿರುವ ಹಿನ್ನೆಲೆಯಲ್ಲಿ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರಿಂದ ಶೋಧ ಕಾರ್ಯ ಸಾಗುತ್ತಿದೆ. ಹೊಳೆ ಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.

 

PREV
Read more Articles on
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!