ಶಿವಮೊಗ್ಗ (ಆ.02): ಆನ್‌ಲೈನ್ ಮೂಲಕ ಗೋಣಿ ಚೀಲ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರು. ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶಿಕಾರಿಪುರದ ಶಿಕ್ಷಕಿ ಖಾಲಿ ಗೋಣಿಚೀಲ ಖರೀದಿಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು. ಆಗ ಆನ್‌ಲೈನ್ ಟ್ರೇಡಿಂಗ್ ವೆಬ್‌ಸೈಟ್ ಸಿಕ್ಕಿದೆ. ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏ.11ರಂದು ಇ-ಮೇಲ್ ಐಡಿಯಿಂದ ಪ್ರತಿಕ್ರಿಯೆ ಬಂದಿತ್ತು. ಇ-ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ.
900 ರೂ. ಸಲ್ವಾರ್ ಖರೀದಿ ಮಾಡಲು ಹೋಗಿ ಲಕ್ಷ ರೂ. ಕಳಕೊಂಡಳು!
ಮೊಬೈಲ್ ವಾಟ್ಸಾಪ್ ನಂಬರ್ ಪಡೆದಿದ್ದು, ಇಬ್ಬರು ಪರಸ್ಪರ ವ್ಯವಹಾರದ ಬಗ್ಗೆ ಚರ್ಚಿಸಿದ್ದರು. 26 ಟನ್ ಖಾಲಿ ಗೋಣಿಚೀಲಕ್ಕೆ ಶಿಕ್ಷಕಿ ಬೇಡಿಕೆ ಇಟ್ಟಿದ್ದರು.
ಆಗ ಅರ್ಧ ಹಣ ಮುಂಗಡವಾಗಿ ಕಳುಹಿಸುವಂತೆ ವ್ಯಕ್ತಿ ಸೂಚಿಸಿದ್ದರು. ಅದರಂತೆ ದೆಹಲಿಯ ಬ್ಯಾಂಕ್ ಖಾತೆಯೊಂದಕ್ಕೆ 1.13 ಲಕ್ಷ ರು. ಹಣವನ್ನು ಆನ್‌ಲೈನ್ ಮೂಲಕ ಶಿಕ್ಷಕಿ ಹಣ ಜಮೆ ಮಾಡಿದ್ದರು. ನಂತರ ಆತ ವಾಹನದ ಸಾಗಣೆ ವೆಚ್ಚವಾಗಿ ಮತ್ತಷ್ಟುಹಣ ಸಂದಾಯ ಮಾಡುವಂತೆ ಸೂಚಿಸಿದ್ದಾರೆ. ಕೊಡದಿದ್ದಾಗ ಸಂಪರ್ಕ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ದೂರು ನೀಡಿದ್ದಾರೆ.