ದೇಶಕ್ಕೆ 0.5ರಷ್ಟಿದ್ದ ವಿದ್ಯುತ್‌ ಕೊರತೆ ನಿವಾರಣೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

By Kannadaprabha News  |  First Published Sep 4, 2022, 7:49 AM IST
  • ದೇಶಕ್ಕಿದ್ದ 0.5ರಷ್ಟಿದ್ದ ವಿದ್ಯುತ್‌ ಕೊರತೆ ನಿವಾರಣೆ
  • ಕೋವಿಡ್‌ ನಂತರ ಜಗತ್ತಿನಲ್ಲಿ ಹೆಚ್ಚು ಆರ್ಥಿಕ ಬೆಳವಣಿಗೆಯಿಂದ ಕೊರತೆ
  • ಹೆಬ್ಬಳ್ಳಿಯಲ್ಲಿ 110-11 ಕೆವಿ ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಜೋಶಿ ಶಿಲಾನ್ಯಾಸ

ಧಾರವಾಡ (ಸೆ.4) : ಕೋವಿಡ್‌ ನಂತರದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಇಡೀ ಜಗತ್ತಿನಲ್ಲಿಯೇ ಹೆಚ್ಚಾಗಿದ್ದರಿಂದ ವಿದ್ಯುತ್‌ ಬೇಡಿಕೆ ಹೆಚ್ಚಿತ್ತು. ಆ ಸಮಯದಲ್ಲಿ ದೇಶದಲ್ಲಿ ಶೇ. 0.5 ವಿದ್ಯುತ್‌ ಕೊರತೆ ಉಂಟಾಗಿತ್ತು. ಇದೀಗ ಅದನ್ನು ಸರಿದೂಗಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪ್ರಧಾನಿ ಮೋದಿ ಮನ್ ಕಿ ಬಾತ್: ಮುಗದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಜೋಶಿ

Tap to resize

Latest Videos

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(Karnataka Electricity Transmission Corporation)ದಿಂದ ತಾಲೂಕಿನ ಹೆಬ್ಬಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ 110-11 ಕೆವಿ ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಸಾಕಷ್ಟುವಿದ್ಯುತ್‌ ಉತ್ಪಾದನೆ ಇದ್ದರೂ ಕೋವಿಡ್‌(Covid)ನಂತರದಲ್ಲಿ ಉಕ್ರೇನ್‌-ರಷ್ಯಾ ಯುದ್ಧ(Ukrain-Russia war) ಹಾಗೂ ಜಾಗತಿಕ ಕಲ್ಲಿದ್ದಲು ಮಾರುಕಟ್ಟೆಸಮಸ್ಯೆಯಿಂದ ಶೇ. 0.5 ವಿದ್ಯುತ್‌ ಕೊರತೆಯಾಗಿತ್ತು. ಕಳೆದ ಮೇ ತಿಂಗಳಿಂದ ಸಾಕಷ್ಟುಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು ಬೇರೆ ದೇಶಕ್ಕೂ ಕಳುಹಿಸುವಷ್ಟುಸ್ವಾವಲಂಬಿಯಾಗಿದ್ದೇವೆ ಎಂದು ತಿಳಿಸಿದರು.

2014ರಲ್ಲಿ ಶೇ. 10ರಿಂದ 12ರಷ್ಟುವಿದ್ಯುತ್‌ ಕೊರತೆ ಇತ್ತು. ಆಗ 234 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಕೇವಲ ಎಂಟು ವರ್ಷಗಳಲ್ಲಿ 404 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. 2014ರಲ್ಲಿ ದೇಶದಲ್ಲಿ ಸರಾಸರಿ 12 ಗಂಟೆ ಮಾತ್ರ ವಿದ್ಯುತ್‌ ನೀಡಲಾಗುತ್ತಿತ್ತು. ಇದೀಗ ದೇಶದಲ್ಲಿ ಸರಾಸರಿ 22 ಗಂಟೆ ಕಾಲ ವಿದ್ಯುತ್‌ ನೀಡಲಾಗುತ್ತಿದೆ ಎಂದ ಜೋಶಿ, ಗ್ರಾಮೀಣ ಪ್ರದೇಶದಲ್ಲಿ ತ್ರಿಫೇಸ್‌ ವಿದ್ಯುತ್‌ನ್ನು ಏಳು ಗಂಟೆ ಕೊಡಬೇಕು. ಆದರೆ, ಈ ಪೈಕಿ 3-4 ಗಂಟೆ ಮಾತ್ರ ನೀಡಲಾಗುತ್ತಿದೆ. ಆದ್ದರಿಂದ ಹೆಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಈ ವಿತರಣಾ ಕೇಂದ್ರದಿಂದ ಏಳು ಗಂಟೆ ಕಾಲ ತ್ರಿಫೇಸ್‌ ವಿದ್ಯುತ್‌ ನೀಡಲು ಅನುಕೂಲವಾಗುತ್ತದೆ ಎಂದರು.

ಈಗಿನದ್ದು ಡೂಪ್ಲಿಕೇಟ್‌ ಕಾಂಗ್ರೆಸ್‌, ನಕಲಿ ಗಾಂಧಿಗಳು: ಸಚಿವ ಜೋಶಿ

ಶಾಸಕ ಅಮೃತ ದೇಸಾಯಿ(MLA Amrit desai), ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಶಾಸಕ ಸೀಮಾ ಮಸೂತಿ, ಹೆಸ್ಕಾಂ ನಿರ್ದೇಶಕರಾದ ಎಂ. ಸಾಸಲಟ್ಟಿ, ಮಾಧು ಅಳಗವಾಡಿ, ಗ್ರಾಪಂ ಪ್ರತಿನಿಧಿಗಳಿದ್ದರು. ಈ ಸಮಾರಂಭದ ಮುಂಚೆ ಸಚಿವ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಮತ್ತು ಮೇಯರ್‌ ಈರೇಶ ಅಂಚಟಗೇರಿ ಎತ್ತಿನಗುಡ್ಡ ರಸ್ತೆಯ ತುರಮರಿ ಗಾರ್ಡನ್‌ನಲ್ಲಿ . 90 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ತದನಂತರ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಪಿಡಬ್ಲ್ಯೂಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಅಲ್ಲದೇ ಗುಲಗಂಜಿಕೊಪ್ಪದಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಉಪ ಕಚೇರಿಯನ್ನೂ ಸಹ ಸಚಿವ ಜೋಶಿ ಉದ್ಘಾಟಿಸಿದರು.

click me!