Shivamogga: ಯೋಜಿತ ಶಿರಾಳಕೊಪ್ಪದ ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಿಸದಂತೆ ಆಗ್ರಹ

Published : Sep 29, 2026, 09:23 AM IST
Shiralakoppa

ಸಾರಾಂಶ

ಶಿರಾಳಕೊಪ್ಪದಲ್ಲಿ ಕಾಂಗ್ರೆಸ್ ಸರ್ಕಾರ ಉದ್ದೇಶಿಸಿರುವ ರಿಂಗ್ ರೋಡ್ ಯೋಜನೆಯನ್ನು ವಿರೋಧಿಸಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ರೈತ ಮೋರ್ಚಾ ಬೃಹತ್ ಪ್ರತಿಭಟನೆ ನಡೆಸಿತು. ರೈತರ ಜಮೀನು ಕಬಳಿಸುವ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಲಾಯಿತು.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬರಗಾಲ ಹೆಚ್ಚಾಗಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಒದ್ದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಪಟ್ಟಣದ ಸುತ್ತಮುತ್ತ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಿಸಲು ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ನಾಡ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ರಿಂಗ್ ರೋಡ್ ಯೋಜನೆಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಿಲ್ಲ

ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ, ಯೋಜನೆಗಳ ಸೌಲಭ್ಯಗಳನ್ನು ನೀಡಲು ಮೀನಮೇಷ ಎಣಿಸುತ್ತಿದೆ. ಕಳೆದ ಮೂರು ತಿಂಗಳಿನಿಂದ ನೀಡಬೇಕಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಿಲ್ಲ. ಅಧಿಕಾರದ ಮದ ಹೆಚ್ಚಾಗಿದ್ದು, ಬಡವರು ಕಣ್ಣಿಗೆ ಕಾಣುತ್ತಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ನಿಗಮಗಳ ಹಣವನ್ನೂ ಬಿಡುಗಡೆ ಮಾಡಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದ್ದು, ಆರ್ಥಿಕ ಇಲಾಖೆಯೇ ಪತ್ರ ಬರೆದಿರುವುದರಿಂದ ಈ ಸರ್ಕಾರ ದಿವಾಳಿಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಶಿರಾಳಕೊಪ್ಪ ಪಟ್ಟಣದ ಸುತ್ತಮುತ್ತ ರಿಂಗ್ ರೋಡ್ ಯೋಜನೆ ಜಾರಿಯಾದರೆ ರೈತರು ಸಾವಿರಾರು ಎಕರೆ ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರ ಈ ಕೂಡಲೇ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಶಾಸಕ ವಿಜಯೇಂದ್ರ ಅವರು ಈ ಯೋಜನೆ ಕೈಬಿಡುವಂತೆ ಪತ್ರ ಬರೆದಿದ್ದಾರೆ. ರೈತರ ಜಮೀನು ಕಬಳಿಸಿ ರಿಯಲ್ ಎಸ್ಟೇಟ್ ದಂಧೆಯನ್ನು ಉತ್ತೇಜಿಸಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಸಚಿವ ಮಧು ಬಂಗಾರಪ್ಪ ಕ್ಷಮೆಗೆ ಆಗ್ರಹ:

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ‘ಪುಕ್ಸಟ್ಟೆ ಕರೆಂಟ್’ ಎಂದು ಹೇಳುವ ಮೂಲಕ ಸ್ವಾಭಿಮಾನಿ ರೈತರಿಗೆ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರು ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರೈತ ಮೋರ್ಚಾ ಅಧ್ಯಕ್ಷ ಯೋಗೇಶಪ್ಪ ಮಾತನಾಡಿ, ರಿಂಗ್ ರೋಡ್ ನಿರ್ಮಾಣವಾದರೆ ಸೂಕ್ತ ಪರಿಹಾರ ಸಿಗುವುದಿಲ್ಲ. ಜನಸಂಪರ್ಕವೂ ಕಡಿಮೆಯಾಗಲಿದೆ. ಸೊರಬದಲ್ಲಿ ರಿಂಗ್ ರೋಡ್ ಮಾಡದೆ ಶಿರಾಳಕೊಪ್ಪವನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರು.

ರಿಂಗ್ ರಸ್ತೆ ನಿರ್ಮಿಸುವ ಅಗತ್ಯವಿರಲಿಲ್ಲ

ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಸಂಕಲಾಪುರ ಮಾತನಾಡಿ, ರಿಂಗ್ ರಸ್ತೆ ನಿರ್ಮಿಸುವ ಅಗತ್ಯವಿರಲಿಲ್ಲ. ಯಡಿಯೂರಪ್ಪ ಅವರು ಇಲ್ಲಿ ಉತ್ತಮ ರಸ್ತೆ ನಿರ್ಮಿಸಿದ್ದಾರೆ. ಏತ ನೀರಾವರಿ ಯೋಜನೆಯಿಂದ ಬರಗಾಲದಲ್ಲೂ ಕೆರೆಗಳು ನೀರಿನಿಂದ ತುಂಬಿವೆ. ದಿವಾಳಿ ಸರ್ಕಾರದ ಕುಬೇರ ಡಿ.ಕೆ. ಶಿವಕುಮಾರ್ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊಂದಿ ಸಿದ್ದಲಿಂಗಯ್ಯ, ತಾಲೂಕು ಉಪಾಧ್ಯಕ್ಷ ಸತೀಶ್ ತಾಳಗುಂದ, ತಾ.ಪಂ. ಮಾಜಿ ಅಧ್ಯಕ್ಷ ಶಂಬು, ಕೊಳಗಿ ರೇವಣಪ್ಪ, ಟೌನ್ ಅಧ್ಯಕ್ಷ ಚನ್ನವೀರ ಶೆಟ್ರು ಮಾತನಾಡಿದರು.

ಸಣ್ಣ ಹನುಮಂತಪ್ಪ, ನಿವೇದಿತಾ ರಾಜು, ಅಗಡಿ ಅಶೋಕ್, ಎಚ್.ಎಂ. ಚಂದ್ರಶೇಖರ್, ಇಂದೂಧರ ಟಿ., ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

PREV
Read more Articles on
click me!

Recommended Stories

Mysuru dasara: ಬೆಳಗ್ಗೆ ಅಸಮಾಧಾನ-ಸಂಜೆ ಸಮಾಧಾನ.. ಇದು ಯತೀಂದ್ರ- ತನ್ವೀರ್‌ ಕಥೆ ಅಷ್ಟಕ್ಕೂ ಆಗಿದ್ದೇನು?!
Gandhi Jayanti: ಗಾಂಧೀಜಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಆನಂದ್ ರಾವ್ ಸರ್ಕಲ್‌ನ ಈ ಮನೆಯಲ್ಲಿದ್ರು! ಆ ಘಟನೆ ಇಂದಿಗೂ ರೋಚಕ!