Chhatrapati Shivaji Maharaj: ಶಿವಾಜಿ ಶೌರ್ಯ ಯುವ ಪೀಳಿಗೆಗೆ ಆದರ್ಶ: ಶಶಿಕಲಾ ಜೊಲ್ಲೆ

By Kannadaprabha News  |  First Published Feb 20, 2023, 10:13 PM IST

 ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರ ಪ್ರೇಮ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದು ಮುಜರಾಯಿ ಇಲಾಖೆಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.


ಸಂಕೇಶ್ವರ (ಫೆ.20) : ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರ ಪ್ರೇಮ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದು ಮುಜರಾಯಿ ಇಲಾಖೆಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಭಾನುವಾರ ಪಟ್ಟಣದ ಶಿವಾಜಿ(Shivaji) ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ಇತಿಹಾಸದಲ್ಲಿ ಸಾಧನೆಗೈದ ಮಹಾನ ನಾಯಕರ ಚರಿತ್ರೆ ನಮ್ಮ ಮಕ್ಕಳಿಗೆ ಮುಟ್ಟಬೇಕಾಗಿದೆ. ಅದು ಸಂಕೇಶ್ವರದಲ್ಲಿ ನಡೆದಿದೆ. ಪಟ್ಟಣದಲ್ಲಿ ಸ್ಥಾಪನೆಯಾದ ಶಿವಾಜಿ ಮಹಾರಾಜರ ಪ್ರತಿಮೆ(Shivaji maharaj statue) ಯುವಕರಿಗೆ ಸ್ಫೂರ್ತಿಯಾಗಲಿದ್ದು, ಯಾವುದೇ ಮಹಾನ್‌ ಪುರುಷÜರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದರು.

Tap to resize

Latest Videos

Kukke subramanya Temple: ಶ್ರೀ ರವಿಶಂಕರ ಗುರೂಜಿ ನಾಗಪ್ರತಿಷ್ಠಾ ಸೇವೆ...

Read more at: https://kannada.asianetnews.com/latest-news

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಹಿಂದೂ ಸಮಾಜದ ಮೇಲೆ ನಡೆದ ದಾಳಿ ತಡೆಗಟ್ಟುವಲ್ಲಿ ಯಶಸ್ವಿಯಾದ ಶಿವಾಜಿ ಮಹಾರಾಜರು ಚರಿತ್ರೆ ಮಾತ್ರ ಬದಲಾಯಿಸಲಿಲ್ಲ. ಹೊಸ ಚರಿತ್ರೆಯನ್ನು ರಚಿಸಿದರು. ಅವರು ಧಾರ್ಮಿಕ ಸಹಿಷÜು್ಣಹಿಯಾಗಿದ್ದರು. ಎಲ್ಲ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು. ಮುಂಬರುವ ದಿನಗಳಲ್ಲಿ ಬಸವಣ್ಣ, ಅಂಬೇಡ್ಕರ್‌, ಚನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ ಎಂದು ತಿಳಿಸಿದರು.

ಮಾಜಿ ವಿಧಾನ ಪರಿಷÜತ್‌ ಸದಸ್ಯ ಮಹಾಂತೇಶ ಕವಟಗಿಮಠ(Mahantesh kavatagimath) ಮಾತನಾಡಿ, ಉಕದಲ್ಲಿ ಬಹುದೊಡ್ಡ ಕಾರ್ಯಕ್ರಮ ಇದಾಗಿದೆ. ಗಡಿಭಾಗವಾಗಿರುವ ಹೆಬ್ಬಾಗಿಲು ಆಗಿರುವ ಸಂಕೇಶ್ವರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಮುಂದಿನ ಜನಾಂಗಕ್ಕೆ ದಾರಿ ದೀಪವಾಗುವಂತೆ ಕಾರ್ಯ ಮಾಡಿದ್ದಾರೆ. ಶಿವಾಜಿ ಮಹಾರಾಜರ ಮರಾಠ ಸಮಾಜಕ್ಕೆ ಸೀಮಿತವಾಗಿರಲಿಲ್ಲ. ಹಿಂದೂಗಳ ಆರಾಧ್ಯದೈವ ಎಂದರು.

ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿದರು.ಶಿವಾಜಿ ಮಹಾರಾಜ ಸೇವಾ ಸಂಘದ ಉಪಾಧ್ಯಕ್ಷ ಅಮರ ನಲವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ವಿದ್ಯಾರನಸಿಂಹ ಭಾರತಿ ಸ್ವಾಮೀಜಿ, ಬೆಂಗಳೂರು ಗೋಸಾವಿ ಮಠದ ಮಂಜುನಾಥ ಶ್ರೀಗಳು, ಹತ್ತರಗಿ ಸಿದ್ದೇಶ್ವರ ಮಠದ ಸಿದ್ದೇಶ್ವರ ಸ್ವಾಮೀಜಿ, ನೂಲ ರಾಮನಾಥಗಿರಿ ಮಠದ ಭಗವಾನಗರಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ರಾಜೇಶ್‌ ಪಾಟೀಲ್‌, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಜಯವಂತ ಭಾಟಲೆ, ಬಾಳಕೃಷ್ಣ ಹತನೂರಿ, ಸಂಕೇಶ್ವರ ಪುರಸಭೆ ಅಧ್ಯಕ್ಷೆ ಸೀಮಾ ಹತನೂರಿ, ಉಪಾಧ್ಯಕ್ಷ ಅಜಿತ್‌ ಕರಜಗಿ, ಮುಖಂಡರಾದ ಶಿವಾನಂದ ಮುಡಶಿ, ಸಂಜಯ ಶಿರಕೋಳಿ, ರೋಹನ ನೇಸರಿ, ಪ್ರಮೋದ ಹೊಸಮನಿ, ಜಯಪ್ರಕಾಶ ಸಾವಂತ, ಅಭಿಜೀತ ಕುರಣಕರ, ಅವಿನಾಶ ನಲವಡೆ ಇದ್ದರು .

ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ವೇಳೆ ಅವಘಡ, ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ!

ರಾಜಕೀಯ ಜಟಾಪಟಿಯಾದ ವೇದಿಕೆ

ಶಿವಾಜಿ ಮಹಾರಾಜರು ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಮಾಜಿ ಶಾಸಕ ಎ.ಬಿ.ಪಾಟೀಲ ಅವರ ನಡುವೇ ರಾಜಕೀಯ ಜಟಾಪಟಿಗೆ ವೇದಿಕೆ ಬಳಕೆಯಾಯಿತು. ಎ.ಬಿ.ಪಾಟೀಲ ಮಾತನಾಡಿ, ತಾವು ಸಂಕೇಶ್ವರ ಪಟ್ಟಣಕ್ಕೆ ಕುಡಿಯುವ ನೀರು ಯೋಜನೆ ನಾನು ಮಾಡಿದ್ದು, ಕೇವಲ ಭಾಷÜಣ ಮಾಡಿದರೆ ಸಾಲದು ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು. ಇದಕ್ಕೆ ಪ್ರತ್ಯುತ್ತರವಾಗಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ದಿ.ಉಮೇಶ ಕತ್ತಿ ಹತ್ತಾರ ಅಭಿವೃದ್ಧಿ ಕಾರ್ಯ ಮಾಡಿದ್ದು, ರಸ್ತೆ ಅಭಿವೃದ್ಧಿ, ಕಣಗಲಾ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ ಎಂದು ಎ.ಬಿ.ಪಾಟೀಲ ಅವರನ್ನು ಕುಟುಕಿದರು. ಇದು ಪುತ್ಥಳಿ ಅನಾವರಣ ವೇದಿಕೆಯಲ್ಲಿ ರಾಜಕೀಯ ನಾಯಕರ ಜಟಾಪಟಿ ಎಷ್ಟುಸರಿ? ಎಂದು ನೆರೆದ ಜನರ ಪ್ರಶ್ನೆಯಾಗಿತ್ತು.

click me!