ಅಷ್ಟಮಠದಲ್ಲಿ ಮುಂಚಿನಿಂದಲೂ ಸೆಕ್ಸ್ ಇತ್ತು...?

Published : Jul 21, 2018, 07:12 PM ISTUpdated : Jul 21, 2018, 07:29 PM IST
ಅಷ್ಟಮಠದಲ್ಲಿ ಮುಂಚಿನಿಂದಲೂ ಸೆಕ್ಸ್ ಇತ್ತು...?

ಸಾರಾಂಶ

ಉಡುಪಿ ಅಷ್ಟಮಠಗಳಲ್ಲಿ ಮೊದಲಿನಿಂದಲೂ ಸೆಕ್ಸ್ ಇತ್ತಾ? ಹೀಗೊಂದು ಪ್ರಶ್ನೆ ಇದೀಗ ಉದ್ಘವವಾಗಿದೆ. ಸಾವಿಗೂ ಮುನ್ನ ಶಿರೂರು ಶ್ರೀ ಮಾತನಾಡಿರುವ ಆಡಿಯೋ ವೊಂದು ವೈರಲ್ ಆಗಿದ್ದು ಅಷ್ಟಮಠಗಳ ಹಳೆ ಇತಿಹಾಸದ ಕತೆ ಹೇಳುತ್ತಿದೆ.

ಉಡುಪಿ[ಜು.21]ಶಿರೂರು ಸ್ವಾಮೀಜಿ ಮಾತನಾಡಿರುವ ಮತ್ತೊಂದು ಆಡಿಯೋ ಬಹಿರಂಗವಾಗಿದ್ದು ಸ್ಫೋಟಕ ಅಂಶಗಳನ್ನು ಹೊರಹಾಕಿದೆ. ಶಿರೂರು ಸ್ವಾಮೀಜಿ ಭಕ್ತರೊಬ್ಬರೊಂದಿಗೆ ಮಾತನಾಡುತ್ತಿರುವ ಆಡಿಯೋ ಕ್ಲಿಪಿಂಗ್ ಇದಾಗಿದೆ. ಹಾಗಾದರೆ ಆಡಿಯೋ ಕ್ಲಿಪಿಂಗ್ ನಲ್ಲಿ ಏನಿದೆ?.... ಸ್ವಾಮೀಜಿ ಆಡಿಯೋ ಸಂಭಾಷಣೆಯ ಪೂರ್ಣ ವಿವರ ಇಲ್ಲಿದೆ...

ಭಕ್ತರೊಬ್ಬರೊಂದಿಗೆ ಶಿರೂರು ಶ್ರೀ ಮಾತನಾಡಿರುವ ಸಾರಾಂಶ... ಅಕ್ರಮ ಸಂಬಂಧ, ಕೊಲೆ , ಮರ್ಡರ್ ಹೀಗೆ ಹಲವಾರು ವಿಚಾರಗಳ ಬಗ್ಗೆ ಸ್ವಾಮೀಜಿ ಮಾತನಾಡಿದ್ದಾರೆ.

ಪುತ್ತಿಗೆ ಮಠದ ಶತಾಯುಷಿ ಸುದೀಂದ್ರ ತೀರ್ಥರ ಗುರುಗಳಿಗೆ ಅಕ್ರಮ ಸಂಬಂಧವಿತ್ತು. ಅಕ್ಕಯ್ಯ ಎಂಬ ಹೆಂಗಸಿನೊಂದಿಗೆ ಸಂಬಂಧವಿತ್ತು. ತನ್ನ ಮಗನಿಗೇ ಅವರು ದೀಕ್ಷೆ ಕೊಟ್ಟಿದ್ದರು. ಉಳಿದ ಏಳು ಮಠದ ಸ್ವಾಮಿಗಳು ಅದನ್ನು ಪ್ರಶ್ನಿಸಿ ಮದ್ರಾಸ್ ಕೋರ್ಟ್‍ಗೆ ಹೋಗಿದ್ದರು. ಆದರೆ ಸುಧೀಂದ್ರ ತೀರ್ಥರಿಗೆ ಕೋರ್ಟಿನಲ್ಲಿ ಜಯವಾಯಿತು. ಅವರ ಮಗ ಪರ್ಯಾಯವನ್ನೂ ಪೂರೈಸಿದರು. ಅಕ್ಕಯ್ಯನ ಮಗನ ವೃಂದಾವನ ಇಂದಿಗೂ ಉಡುಪಿಯಲ್ಲಿದೆ ಅದನ್ನು ಸಣ್ಣ ವೃಂದಾವನ ಅಂತ ಹೇಳುತ್ತಾರೆ.

ತೀವ್ರಗೊಂಡಿದೆ ಶಿರೂರು ಶ್ರೀ ಸಾವಿನ ತನಿಖೆ; ಮಹಿಳೆ ವಶಕ್ಕೆ

ಅವರೆಷ್ಟು ಜನರು ಸರಿ ಇದ್ದಾರೆ.? ಪ್ರಾಣದೇವರ ಮುಂದೆ ಬಂದು ಹೇಳಲಿ. ಅಜ್ಜನಿಗೂ ಮೂವರು ಮಕ್ಕಳಿದ್ದಾರೆ. ಅವರಿಗೆ ತಮಿಳುನಾಡಿನಲ್ಲಿ ಲವ್ ಇದೆ. ಆ ಮಹಿಳೆ ಮೂವರು ಮಕ್ಕಳನ್ನು ಹೆತ್ತು ತೀರಿದ್ದಾರೆ. ಓರ್ವ ಮಗಳು ಡಾ. ಉಷಾ ಅನ್ನುವವರು ಚೆನೈನಲ್ಲಿ ಇದ್ದಾರೆ. ಅವರಿಗೆಲ್ಲಾ ಮಠಕ್ಕೆ ಪ್ರವೇಶವಿಲ್ಲ. ಅವರು ನನಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದರು. ನಿಮಗೆ ಅವರು ಡ್ಯಾಮೇಜ್ ಮಾಡಿದರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ ಎಂದಿದ್ದರು. ಉಷಾ ಅವರು ಡಿ.ಎನ್.ಎ ಪರೀಕ್ಷೆಗೆ ಸಿದ್ಧ ಎಂದಿದ್ದಾರೆ. ಸ್ವಾಮಿಜಿಗಳು ಶಾಸ್ತ್ರ ಪ್ರಕಾರ ಕುದುರೆ ಹತ್ತುವಂತಿಲ್ಲ. ಆದರೆ ಕಿರಿಯ ಸ್ವಾಮಿಗಳು ಕುದುರೆ ಸವಾರಿ ಮಾಡುತ್ತಾರೆ

ಭೂ ಮಾಫಿಯಾಕ್ಕೆ ಸಿಲುಕಿದ್ದ ಶಿರೂರು ಶ್ರೀ..? ಕೊಟ್ಯಂತರ ಸಾಲದ ಒತ್ತಡ

ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣವಾಗುತ್ತಿದೆ. ನಾನು ಅವರನ್ನು ನಂಬಿ ನನ್ನ ಪಟ್ಟದ ದೇವರನ್ನು ಕೊಟ್ಟಿದ್ದೆ. ನಾನು ಸನ್ಯಾಸ ಬಿಡಬೇಕು ಎನ್ನಲು ಇವರು ಯಾರು..? ನಿರಂತರ 47 ವರ್ಷ ಕೃಷ್ಣನ ಪೂಜೆ ಮಾಡಿದ್ದು ನಾನು ಮಾತ್ರ. ವಿಶ್ವೇಶತೀರ್ಥರೂ ಮಾಡಿಲ್ಲ. ಎಲ್ಲಾ ಪರ್ಯಾಯದದಲ್ಲೂ ನಾನೇ ಪೂಜೆ ಮಾಡಿದ್ದು . ಆಗ ತಪ್ಪು ಸಿಗಲಿಲ್ಲ ಈಗ ನನ್ನನ್ನು ದೂರ ಮಾಡಿದ್ದಾರೆ. ಚುನಾವಣೆ ನಿಲ್ಲುತ್ತೇನೆ ಎಂದ ಮಾತ್ರಕ್ಕೆ ನಾನು ಬೇಡವಾಗಿ ಹೋದೆ. ಪೇಜಾವರ ಸ್ವಾಮಿಗಳಿಗೆ ಪ್ರತಿಯೊಂದಕ್ಕೂ ನಾನೇ ಬೇಕಾಗಿತ್ತು 

ಅನಾಥೋ ದೇವರಕ್ಷಕ ..ನಾವೆಲ್ಲಾ ಅನಾಥರು ಗೊತ್ತಾಯ್ತಲ್ಲಾ.. ಎಲ್ಲರೂ ಪ್ರೀತಿಯಿಂದ ಇರಬೇಕಿತ್ತು ಇವರು ಇಷ್ಟು ದ್ವೇಷ ಸಾಧನೆ ಮಾಡುವಾಗ ನಾನು ಏನು ಮಾಡಬೇಕು..? ಅಷ್ಟಮಠಗಳು ಇಷ್ಟಮಠಗಳಾಗಿ ಅಣ್ಣತಮ್ಮಂದಿರಂತೆ ಇರಬೇಕಿತ್ತು  ಆ ಮನೋಭಾವನೆಯೇ ಇಲ್ಲ. ಕೃಷ್ಣ ಮಠದ ಇತಿಹಾಸ ಕೇಳ್ತೇನೆ ಹೇಳಿ ಅದಮಾರು ಮಠದ ಗುರುಗಳಾಗಿದ್ದ ವಿಭುದೇಶ ತೀರ್ಥರಿಗೆ ಕೊಂಕಣಿ ಮಹಿಳೆಯೊಬ್ಬರ ಸಂಪರ್ಕವಿತ್ತು ಅದರಲ್ಲಿ ಎರಡು ಮಕ್ಕಳಿದ್ದರು. ಅವರ ಗುರುಗಳಾಗಿದ್ದ ವಿಭುದಪ್ರಿಯರಿಗೆ ರಾಜವಾಡೆ ಎಂಬ ಮಹಿಳೆಯ ಸಂಪರ್ಕವಿತ್ತು. ಅವರ ಹಿಂದಿನವರಾದ ವಿಭುದ ಮಾನ್ಯರನ್ನು ಮರ್ಡರ್ ಮಾಡಲಾಗಿದೆ. ಹೆಣ್ಣಿನ ವಿಚಾರದಲ್ಲಿ ಅವರ ಕೊಲೆ ನಡೆದಿದೆ 

ಪಲಿಮಾರು ಮಠದ ರಘುವಲ್ಲಭರು ನನ್ನ ಅಣ್ಣನ ಪತ್ನಿಯ ಸಹೋದರ. ಅವರನ್ನು 1970ಯಲ್ಲಿ ಐದು ಲಕ್ಷ ಕೊಟ್ಟು ಪೀಠದಿಂದ ಎಬ್ಬಿಸಲಾಯಿತು. ಬಳಿಕ ಅಜ್ಜ ತನ್ನ ಗುರುಗಳಾದ ಬಂಡಾರಕೇರಿ ಮಠದ ವಿದ್ಯಾಮಾನ್ಯರನ್ನು ಪಲಿಮಾರು ಪೀಠಕ್ಕೆ ತಂದು ಕೂರಿಸಿದರು. ಇದು ನನ್ನ ಗುರು ದಕ್ಷಿಣೆ ಎಂದು ಬೀಗಿದರು. ಇದು ಅಜ್ಜ ಮಾಡಿದ  ಮೊದಲ ಜೀವಂತ ಮರ್ಡರ್. ರಘುವಲ್ಲಭರು  ಬಳಿಕ ವಿದೇಶಕ್ಕೆ ಹೋಗಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ವಿಶ್ವವಿಜಯರನ್ನು ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಕಳುಹಿಸಿ ಬಂದ ಬಳಿಕ ವಿದೇಶ ಪ್ರಯಾಣ ಮಾಡಿದ್ದಾರೆ ಎಂದು ಪೀಠದಿಂದ ಹೊರಹಾಕಲಾಯಿತು. ಇದು ಸೆಕೆಂಡ್ ಜೀವಂತ ಮರ್ಡರ್

ಪುತ್ತಿಗೆಯವರದ್ದು ಅಜ್ಜ ಮಾಡಿದ ಮೂರನೇ ಜೀವಂತ ಮರ್ಡರ್. ಮಂತ್ರಾಲಯ ಸ್ವಾಮಿಯನ್ನು ಅತಂತ್ರ ಮಾಡಿದರು. ವ್ಯಾಸರಾಯ ಮಠದ ಸ್ವಾಮಿಯನ್ನು ತೆಗೆದರು. ಪುಷ್ಕರಾಚಾರ್ಯ ಅವರನ್ನು ತೆಗೆದರು. ಪ್ರಹ್ಲಾದಾಚಾರ್ಯ ಎಂಬವರಿಗೆ ಸಮಸ್ಯೆ ಮಾಡಿದರು. ಈಗ ನನ್ನನ್ನು ತೆಗೆಯಲು ನೋಡುತ್ತಿದ್ದಾರೆ. ಇವರ ಎಲ್ಲಾ ಕತೆ ಹೊರಗೆ ಹಾಕುತ್ತೇನೆ.......

ಶಿರೂರು ಶ್ರೀ ಹೀಗೆ ಮಾತನಾಡಿದ್ದ ಆಡಿಯೋವೊಂದು ಇದೀಗ ವೈರಲ್ ಆಗಿದ್ದು ಹಲವಾರು ಪ್ರಶ್ನೆಗಳನ್ನು ಎತ್ತಿದೆ.

 

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ