ಆಹಾರದಲ್ಲಿ ‘ವಿಷ’ವೋ? ‘ವಿಷ’ ಆಹಾರವೋ..? ಶ್ರೀಗಳ ಸಾವಿನ ಸಿಕ್ರೇಟ್

 |  First Published Jul 19, 2018, 11:04 AM IST

 ಶಿರೂರು ಸ್ವಾಮೀಜಿ ನಿಧನದ ಸುತ್ತ ಹಲವಾರು ಅನುಮಾನ ಎದ್ದಿದೆ. ಸಾಮಾಜಿಕ ತಾಣದಲ್ಲಿಯೂ ಶ್ರೀಗಳ ಸಾವು ಅಸಹಜ ಎಂದು ಹಲವಾರು ಭಕ್ತರು ಆರೋಪ ಮಾಡುತ್ತಿದ್ದಾರೆ.


ಉಡುಪಿ[ಜು.19] ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿ ನಿಧನದ ಹಿಂದೆ ವಿಷಪ್ರಾಶನ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ಮಣಿಪಾಲದ‌ ಕಸ್ತೂರ ಬಾ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ರಕ್ತ ವಾಂತಿ ಮಾಡಿಕೊಂಡಿದ್ದರು.

ಈ ಬಗ್ಗೆ ಪೇಜಾವರ ಮಠದ ಮಾಜಿ ಕಿರಿಯ ಶ್ರೀಗಳ ಶಂಕೆ ವ್ಯಕ್ತಪಡಿಸಿದ್ದು ಶಿರೂರು ಶ್ರೀಗಳ ಸಾವಿನ ಕುರಿತು ಸಿಬಿಐ ಅಥವಾ ಸಿಐಡಿ ತನಿಖೆಯಾಗಬೇಕು.ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿದ್ರೆ ಸತ್ಯ ಹೊರಬರುತ್ತೆ ಎಂದು ಹೇಳಿದ್ದಾರೆ. ವನಮಹೋತ್ಸವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಅಲ್ಲಿಯೇ ಊಟ ಮಾಡಿದ್ದರು.

Latest Videos

undefined

ಸುವರ್ಣನ್ಯೂಸ್‌.ಕಾಂ ಜತೆ ಮಾತನಾಡಿರುವ ವಿಶ್ವ ವಿಜಯ ಸ್ವಾಮೀಜಿಮ ‘ಶಿರೂರು ಶ್ರೀಗಳನ್ನು ರಥಬೀದಿಯಲ್ಲಿ ಮೆರವಣಿಗೆ ಮಾಡೋದು ಬೇಡ. ಉಡುಪಿಯ ಎಲ್ಲ ಶ್ರೀಗಳಿಗೂ ಒಂದೇ ಕಾನೂನು ಇದೆ. ಶ್ರೀಗಳ ಮಾತಾಡಿದ್ದ ಆಡಿಯೋ ನ್ಯಾಯಾಲಯಕ್ಕೆ ಕೊಟ್ಟಿದ್ದೆ. ಆಗ ಶ್ರೀಗಳು ಇತರ ಶ್ರೀಗಳ ವಿರುದ್ಧ ಮಾತನಾಡಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"

ಸ್ವಾಮೀಜಿ ದೇಹದಲ್ಲಿ ವಿಷಕಾರಿ ಅಂಶ ಇತ್ತು!
ಅಸ್ವಸ್ಥಗೊಂಡಿದ್ದ ಸ್ವಾಮೀಜಿ ರಕ್ತ ವಾಂತಿ ಮಾಡಿಕೊಂಡಿದ್ದಾರೆ. ಶ್ರೀಗಳ ಸಾವಿನ ವಿವರ ನೀಡಿದ ಮಣಿಪಾಲ್ ಆಸ್ಪತ್ರೆ ವೈದ್ಯರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ಆಸ್ಪತ್ರೆಗೆ ಸೇರಿಸುವಾಗಲೇ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೇಳಿದ್ದಾರೆ.

click me!