ದಿಕ್ಕು ಬದಲಿಸಿದ ಸಚಿವ ರೇವಣ್ಣ

By Kannadaprabha NewsFirst Published Jul 16, 2018, 9:30 AM IST
Highlights

ಸಚಿವ ಎಚ್.ಡಿ ರೇವಣ್ಣ ಅವರು ಇದೀಗ ತಮ್ಮ ದಿಕ್ಕನ್ನು ಬದಲಾಯಿಸಿದ ಘಟನೆಯೊಂದು ಇದೀಗ ನಡೆದಿದೆ. ಪದೇ  ಪದೇ ವಾಸ್ತು ಪಾಲನೆ ಮಾಡುವ ರೇವಣ್ಣ ಶಿರಾಡಿ ಘಾಟ್ ಉದ್ಘಾಟನೆ ವೇಳೆಯೂ ಕೂಡ ವಾಸ್ತು ಪಾಲನೆ ಮಾಡಿದರು. 

ಬೆಂಗಳೂರು :  ಕೆಲ ದಿನಗಳ ಹಿಂದೆ ಹಾಸನ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆ ವೇಳೆ ಅರ್ಚಕರಿಗೆ ಪೂಜಾ ವಿಧಿವಿಧಾನಗಳ ಬಗ್ಗೆ ಪಾಠ ಮಾಡಿದ್ದ ರೇವಣ್ಣ, ಶಿರಾಡಿಘಾಟ್ ರಸ್ತೆ ಉದ್ಘಾಟನೆ ವೇಳೆಯೂ ಇದೇ ರೀತಿ ವರ್ತನೆ ತೋರಿದರು. ’

ಅಧಿಕಾರಿಗಳ ಸಿದ್ಧತೆ ಪ್ರಕಾರ, ರೇವಣ್ಣ ಪಶ್ಚಿಮಾಭಿಮುಖವಾಗಿ ನಿಂತು ಟೇಪ್ ಕತ್ತರಿಸಬೇಕಿತ್ತು. ಆದರೆ, ಪೂಜೆಯಾದ ಬಳಿಕ ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ನಿಂತ ರೇವಣ್ಣ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಟೇಪ್ ಕಟ್ ಮಾಡಿಸುವ ಮೂಲಕ ಶಿರಾಡಿಘಾಟ್ ರಸ್ತೆಗೆ ಚಾಲನೆ ಕೊಡಿಸಿದರು. 

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಭಾನುವಾರ  ಕಾರ್ಪಣೆಗೊಳಿಸಲಾಯಿತು. ಸಕಲೇಶಪುರ ತಾಲೂಕಿನ ಕೆಂಪುಹೊಳೆ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ, ವಸತಿ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಮೊದಲಾದವರು ಶಿರಾಡಿ ರಸ್ತೆಯನ್ನು
ಸಂಚಾರಕ್ಕೆ ಮುಕ್ತಗೊಳಿಸಿದರು.  

click me!