ದ್ವೀಪದಂತಿರುವ ಶಿರಾಡಿಘಾಟ್ ಅಭಿವೃದ್ಧಿಗೆ ಕೋಟ್ಯಂತರ ಹಣ ಖರ್ಚು ಮಾಡಿದರೂ ಪ್ರತಿವರ್ಷದ ಮಳೆಗಾಲಕ್ಕೆ ಮಳೆ, ಭೂಕುಸಿತದಂಥ ಪ್ರಕೃತಿ ವಿಕೋಪ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ. ಹಾಸನದಲ್ಲಿ ಸುರಿದ ಭಾರಿ ಮಳೆ ಸುರಿದಿರುವ ಹಿನ್ನೆಲೆ ಭೂಕುಸಿತ ಉಂಟಾಗಿ ಸಂಚಾರ ಬಂದ್ ಆಗಿದೆ ವಾಹನಗಳು ಸಾಲುಗಟ್ಟಿ ನಿಂತಿವೆ
ಉಪ್ಪಿನಂಗಡಿ,(ಜು.17): ಸಕಲೇಶಪುರ ತಾಲೂಕಿನ ದೊಣಿಗಲ್ ಬಳಿ ಭೂಕುಸಿತದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಇದರ ಪರಿಣಾಮವಾಗಿ ಮಂಗಳೂರಿನಿಂದ ಬೆಂಗಳೂರಿನತ್ತ ಹೊರಟ ಸರಕು ವಾಹನಗಳು ಗುಂಡ್ಯದಲ್ಲಿ ಹೆದ್ದಾರಿಯ ಬದಿ ಕಿ.ಮೀ.ಗಟ್ಟಲೆ ಸಾಲುಗಟ್ಟಿನಿಂತಿವೆ.
ಶಿರಾಡಿ ಘಾಟ್(Shiradi ghat) ಬಂದ್ ಆಗಿದೆ ಎಂಬ ಆದೇಶದ ಬಗ್ಗೆ ಮಾಹಿತಿ ಇಲ್ಲದ ಟ್ಯಾಂಕರ್ ಮತ್ತಿತರ ಸರಕು ತುಂಬಿದ ವಾಹನಗಳು ಗುಂಡ್ಯವರೆಗೆ ಆಗಮಿಸಿದಾಗ ಸಂಚಾರ ನಿಷೇಧವಾಗಿರುವುದು ತಿಳಿದು, ವಾಪಸ್ ಬರಲೂ ಆಗದೆ ಮುಂದೆ ಹೋಗಲೂ ಆಗದೆ ಹೆದ್ದಾರಿ (Highway) ಬದಿಯಲ್ಲೇ ಠಿಕಾಣಿ ಹೂಡಿವೆ. ಇದರಿಂದಾಗಿ ಗುಂಡ್ಯದ ಮಂಗಳೂರು ಭಾಗದ ಹೆದ್ದಾರಿಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿದೆ. ಗುಂಡ್ಯದ ಹಾಸನದ ಭಾಗದಲ್ಲಿ ಯಾವುದೇ ವಾಹನಗಳು ಸಂಚರಿಸದ ಕಾರಣ ಘಾಟಿ ರಸ್ತೆಯುದ್ದಕ್ಕೂ ಬಿಕೋ ಎನ್ನುವಂತಿದೆ. ಈ ನಡುವೆ ಶಿರಾಡಿಘಾಟ್ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನ ಚಾಲಕರು ಮಳೆ ಗಾಳಿಗೆ ಅನ್ನ ನೀರು ಇಲ್ಲದೇ ಹಸಿವಿನಿಂದ ಪರಿತಪಿಸುವಂತಾಗಿದೆ. ಮತ್ತಷ್ಟು ಮಳೆಯಾಗುವ ಸಂಭವವಿದ್ದು ವಾಹನ ಚಾಲಕರು, ಪ್ರಯಾಣಿಕರು ಗುಡ್ಡ ಕುಸಿತದ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಕೋರ್ಟ್ ಬಗ್ಗೆ ಅಸಮಾಧಾನ, ಪೊಲೀಸರಿಗೂ ಎಚ್ಚರಿಕೆ: ಹಿಜಾಬ್ ಪರ PFI ಶಕ್ತಿ ಪ್ರದರ್ಶನದಲ್ಲಿ ವಿವಾದ
ಮಡಿಕೇರಿ ರಸ್ತೆಯಲ್ಲೂ ಮಣ್ಣು ಕುಸಿತ ಆಗುವ ಭೀತಿ: ಮಡಿಕೇರಿ: ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ಬಂದ್ ಆದ ಬೆನ್ನಲ್ಲೇ ಮತ್ತೊಂದು ಮಾರ್ಗವಾದ ಮಡಿಕೇರಿ ಘಾಟ್‌ನಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯ ಕೆಳಭಾಗದಲ್ಲಿ ತಡೆಗೋಡೆ ಕುಸಿಯುವ ಆತಂಕ ಇರುವುದರಿಂದ ಜ
ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಅಥವಾ ಆ ಭಾಗದಿಂದ ಮಡಿಕೇರಿಗೆ ಆಗಮಿಸುವ ವಾಹನಗಳು ಮೇಕೇರಿ- ತಾಳತ್ತಮನೆ- ಅಪ್ಪಂಗಳ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.ಇದನ್ನೂ ಓದಿ: ಮಂಗಳೂರಿನಲ್ಲಿ ಸಿಎಫ್‌ಐ ಗರ್ಲ್ಸ್ ಕಾನ್ಫರೆನ್ಸ್; ಕಾರ್ಯಕರ್ತರಿಗೆ ಕಮಿಷನರ್ ತರಾಟೆ
ಪಣಂಬೂರು ಬೀಚ್‌ಗೆ ಪ್ರವೇಶ ನಿರ್ಬಂಧ: ಮಂಗಳೂರು: ಮಳೆ- ಗಾಳಿಯ ಅಬ್ಬರದಿಂದ ಸಮುದ್ರ ಭೋರ್ಗರೆಯುತ್ತಿದ್ದು, ಪಣಂಬೂರು ಬೀಚ್‌ನ ವಿಹಾರ ತಾಣಗಳಿಗೆ ಕಡಲಲೆಗಳು ಅಪ್ಪಳಿಸಿ, ಅಪಾಯಕ್ಕೆ ಆಹ್ವಾನಿಸುತ್ತಿವೆ. ಪಣಂಬೂರು ಬೀಚ್ ವೀಕ್ಷಣೆಗೆಂದು ಕಡಲ ತಟದಲ್ಲಿ ಅನೇಕ ವಿಹಾರ ತಾಣಗಳನ್ನು ನಿರ್ಮಿಸಲಾಗಿದೆ. ಭಾರೀ ಗಾತ್ರದ ಅಲೆಗಳು ಈ ವಿಹಾರ ತಾಣಗಳಿಗೆ ಅಪ್ಪಳಿಸುತ್ತಿದ್ದು, ಕಡಲುಪಾಲಾಗುವ ಸಾಧ್ಯತೆ ಕಂಡುಬಂದಿದೆ. ಈ ಬೀಚ್‌ನಲ್ಲಿರುವ ಲೈಟ್ ಹೌಸ್‌ಗೂ ಅಪಾಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೀಚ್‌ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.