ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ತೀವ್ರ ಹೋರಾಟ:  ಶಂಕರಮಠದ  ಚಂದ್ರಶೇಖರ ಸ್ವಾಮೀಜಿ ಎಚ್ಚರಿಕೆ

By Ravi Janekal  |  First Published Jun 26, 2023, 8:40 PM IST

ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತನಗೆ ಮತ ನೀಡಿದ ಹಿಂದೂ ಸಮಾಜಕ್ಕೆ ದ್ರೋಹ ಬಗೆದಿದೆ ಎಂದು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆ ಆರೋಪಿಸಿದೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.26): ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತನಗೆ ಮತ ನೀಡಿದ ಹಿಂದೂ ಸಮಾಜಕ್ಕೆ ದ್ರೋಹ ಬಗೆದಿದೆ ಎಂದು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆ ಆರೋಪಿಸಿದೆ. 

Tap to resize

Latest Videos

undefined

ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎರಡೂ ಕಾಯ್ದೆಯನ್ನು ರದ್ದುಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮೂಲಕ ಸಂಘಟಕರು  ಹಾಗೂ ಸ್ವಾಮೀಜಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. 

'ಬ್ಯಾನ್‌ಗೆಲ್ಲಾ ನಾವು ಹೆದ್ರೋದಿಲ್ಲ..' ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ವಿಎಚ್‌ಪಿ ನಾಯಕನ ಪ್ರತಿಕ್ರಿಯೆ!

ಮತಾಂತರ ನಿಷೇಧ ಕಾಯ್ದೆ ವಾಪಸ್ಸು ಪಡೆಯದಂತೆ ಮನವಿ : 

ಭಾರತ ಹಿಂದೂ ರಾಷ್ಟ್ರವಾಗಿದೆ. ಅನ್ಯ ಧರ್ಮೀಯರು ಸಹ ಇಲ್ಲಿ ಸಹಬಾಳ್ವೆಗೆ ಅವಕಾಶವಿದೆ. ನಾವು ಒಪ್ಪುತ್ತೇವೆ. ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ, ಹಿಂದೂಗಳಿಗೆ ಆಮಿಷ ತೋರಿಸಿ, ಹೆದರಿಸಿ, ಮರಳು ಮಾಡಿ, ಬಲವಂತವಾಗಿ ಮತಾಂತರಗೊಳಿಸುವುದನ್ನು ಖಂಡಿಸುತ್ತೇವೆ ಎಂದರು. ಹಿಂದುಗಳನ್ನು ಮತಾಂತರದಿಂದ ರಕ್ಷಿಸಿ, ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾಂಗ್ರೆಸ್ ಸರ್ಕಾರ(Congress government Karnataka)ಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಸಹ ಮತ ಹಾಕಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇವಲ ಅಲ್ಪಸಂಖ್ಯಾತರ ಮತದಿಂದಷ್ಟೇ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿಲ್ಲ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ಎರಡೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಹಿಂದೂ ಧರ್ಮಕ್ಕೆ ದ್ರೋಹ ಬಗೆದಿದೆ. ಕೂಡಲೇ  ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. 

ಬಜರಂಗಳ ಮತ್ತು ವಿಶ್ವಹಿಂದೂ ಪರಿಷತ್(Bajrangadal and VHP) ಸಂಘಟನೆ ಮುಖಂಡರಿಗೆ ಸ್ವಾಮೀಜಿಗಳು ಕೂಡ ಸಾಥ್ ನೀಡಿದರು. ಶಂಕರ ದೇವರ ಮಠ(Shankara devar mutt)ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ(Chandrashekhar shivacharya swamiji) ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಮಾತಾಡಿದ ಅವರು ಗೋಹತ್ಯೆ ನಿಷೇಧ(Prohibition of Cow Slaughter)ಮತ್ತು ಮತಾಂತರ ನಿಷೇಧ ಕಾಯ್ದೆ(Prohibition of Conversion Act) ಯನ್ನು ರದ್ದು ಪಡಿಸುವ ನಿರ್ಧಾರವು ಈ ರಾಜ್ಯಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎರಡೂ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.

ಶಾಂತಿ ಕದಡುವ ಪ್ರಯತ್ನ : 

ಶಾಲಾ ಪಠ್ಯದಲ್ಲೂ ಸಹ ರಾಷ್ಟ್ರ ಪುರುಷರ ಪರಿಚಯವಿದ್ದ ಪಾಠಗಳನ್ನು ಸಂಕುಚಿತ ಮನೋಭಾವನೆಯಿಂದ, ಅಲ್ಪಸಂಖ್ಯಾತರನ್ನು ತುಷ್ಟಿಕರಿಸುವ ಸಲುವಾಗಿ ತೆಗೆದು ಹಾಕಿರುವುದನ್ನು ಸಹ ಖಂಡಿಸುತ್ತೇವೆ ಇದು ಶಾಂತಿ ಕದಡುವ ಪ್ರಯತ್ನವಾಗಿದ್ದು, ಧರ್ಮವಿರೋಧಿ ನೀತಿಯು ಆಗಿರುತ್ತದೆ ಎಂದು  ಹಿಂದೂ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕುವೆಂಪು ಅವರ ಮಾತಿನಂತೆ ಈ ರಾಜ್ಯ ಶಾಂತಿಯ ತೋಟ, ಇಲ್ಲಿ ಬಹು ಸಂಖ್ಯಾತ ಹಿಂದೂಗಳು ಸುಂದರ ಮಾನವೀಯ ಗುಣಗಳನ್ನು ಹೊಂದಿದವರು. ಎಲ್ಲ ದೇವರು ಸಿದ್ಧಾಂತವನ್ನು ಒಪ್ಪಿಕೊಳ್ಳುವವರು, ಆದರೆ ಸ್ವಾಭಿಮಾನಕ್ಕೆ ಧಕ್ಕೆ ತರುವುದನ್ನು ಅವರೆಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಉತ್ಪನ್ನಕ್ಕೆ ಆಧುನಿಕ ಆನ್‌ಲೈನ್ ಮಾರುಕಟ್ಟೆ ಒದಗಿಸುವ ಪ್ರಯತ್ನವಾಗಬೇಕು : ಆರ್ಥಿಕ ತಜ್ಞ ಅನಂತ್

ವ್ಯವಸ್ಥೆಯನ್ನು ಪಲ್ಲಟಗೊಳಿಸುವುದು, ವಿನಾಕಾರಣ ಮತ್ತೊಬ್ಬರನ್ನು ದೂಷಿಸುವುದು, ಕಳ್ಳತನ, ವ್ಯಭಿಚಾರ, ಅತ್ಯಾಚಾರಿಗಳನ್ನು ಒಪ್ಪದಿರುವ  ಸಮಾಜವಿದ್ದರೆ ಅದು ಹಿಂದೂ ಸಮಾಜ ಎಂದು ಹೇಳಿದರು. ಗೋ ಹತ್ಯೆ ನಿಷೇಧ, ಮತಾಂತರ ಕಾಯ್ದೆ ನಿಷೇಧ ರದ್ದುಪಡಿಸುವುದನ್ನು ಮಠಾಧಿಪತಿಗಳು, ಹಿಂದೂ ಸಮಾಜ ಉಗ್ರವಾಗಿ ಪ್ರತಿಭಟಿಸಲಿದೆ. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಗನಾಥ್, ಶ್ಯಾಮ್ ವಿ ಗೌಡ ಸೇರಿದಂತೆ ಇತರು ಉಪಸ್ಥಿತರದ್ದರು.

click me!