Tumakuru: ಮಕ್ಕಳಲ್ಲಿ ಕಾಣಿಸಿಕೊಂಡ ಚರ್ಮದ ಫಂಗಸ್ ಸೋಂಕು: ಶಾಲೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೇಟಿ

By Govindaraj S  |  First Published Jun 26, 2023, 1:41 PM IST

ಮಕ್ಕಳ ಅಂಗೈ ಮತ್ತು ಅಂಗಾಲಿನಲ್ಲಿ ದಿಢೀರನೆ  ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಮೂಡಿಸಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿ ಹಾಗೂ ಕೊರಟಗೆರೆ ಯಲಚೇಗೆ ಗ್ರಾಮ ಮಕ್ಕಳಲ್ಲಿ ಚರ್ಮದ ಫಂಗಸ್ ಕಾಣಿಸಿಕೊಂಡಿದೆ.


ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು.

ತುಮಕೂರು (ಜೂ.26): ಮಕ್ಕಳ ಅಂಗೈ ಮತ್ತು ಅಂಗಾಲಿನಲ್ಲಿ ದಿಢೀರನೆ  ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಮೂಡಿಸಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿ ಹಾಗೂ ಕೊರಟಗೆರೆ ಯಲಚೇಗೆ ಗ್ರಾಮ ಮಕ್ಕಳಲ್ಲಿ ಚರ್ಮದ ಫಂಗಸ್ ಕಾಣಿಸಿಕೊಂಡಿದೆ. ಕೊರಟಗೆರೆ ತಾಲ್ಲೂಕಿನ ಯಲಚೇಗೆರೆ, ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳಲ್ಲಿ ಯಲಚೇನಹಳ್ಳಿ ಗ್ರಾಮದ 5 ಮಕ್ಕಳಲ್ಲಿ ಕಾಣಿಸಿಕೊಂಡ ಮಚ್ಚೆಗಳು ಚರ್ಮದ ಫಂಗಸ್ ಕಾಣಿಸಿಕೊಂಡಿದೆ. 

Latest Videos

undefined

ಶನಿವಾರ ಶಾಲೆಯಿಂದ ಮನೆಗೆ ಮಕ್ಕಳು ವಾಪಸ್ ಬಂದ ಬಳಿಕ ಮಕ್ಕಳ ಕಾಲಿನಲ್ಲಿ ಆಗಿದ್ದ ಕಪ್ಪು ಮಚ್ಚೆಗಳನ್ನು ನೋಡಿ ಪೋಷಕರು ಆತಂಕಗೊಂಡಿದ್ದಾರೆ. ಎರಡು ಶಾಲೆಗೆ ಈಗಾಗಲೇ ಬಿಇಒ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಕ್ಕಳನ್ನು ಪರೀಕ್ಷೆ ನಡೆಸಿ ವೈದ್ಯರು ಇದು ಚರ್ಮದ ಫಂಗಸ್ ಸೋಂಕು ಎಂದು ಶಂಕಿಸಿದ್ದಾರೆ ಹಾಗೂ ಈ ಸೋಂಕಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಶಾಲೆಗೆ ಭೇಟಿ ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಮಕ್ಕಳ ಜೊತೆಗೆ ಹಾಗೂ ಶಿಕ್ಷಕರ ಜೊತೆಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಮಕ್ಕಳಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.

ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು 12 ದಿನಗಳಿಂದ ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು!

ಮಕ್ಕಳಿಗೆ ವಾರಕ್ಕೆ ಕನಿಷ್ಠ 3 ಮೊಟ್ಟೆ ನೀಡಬೇಕು: ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಯ 8ನೇ ತರಗತಿ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆಮಾತ್ರ ನೀಡುತ್ತಿದ್ದು, ಇದನ್ನು ಹೆಚ್ಚಿಸುವ ಮೂಲಕ ಮಕ್ಕಳಿಗೆ ವಾರಕ್ಕೆ ಕನಿಷ್ಠ 3 ಮೊಟ್ಟೆಗಳನ್ನು ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಒತ್ತಾಯಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೈಸ್ಕೂಲ್‌ ವಿಭಾಗ, ಸರ್ವೋದಯ ಪ್ರೌಢಶಾಲೆ, ಎಂಪ್ರೆಸ್‌ ಶಾಲೆ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿದರು.

ಪ್ರಸ್ತುತ 8ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. 9 ಮತ್ತು 10ನೇ ತರಗತಿ ಮಕ್ಕಳು 8ನೇ ತರಗತಿ ಮಕ್ಕಳು ಮೊಟ್ಟೆತಿನ್ನುವುದನ್ನು ನೋಡಿಕೊಂಡು ಓಡಾಡುವಂತಾಗಿದೆ. ಹಾಗಾಗಿ 9 ಮತ್ತು 10ನೇ ತರಗತಿ ಮಕ್ಕಳಿಗೂ ಸಹ ಮೊಟ್ಟೆನೀಡುವ ಕಾರ್ಯಕ್ರಮವನ್ನು ವಿಸ್ತರಿಸಬೇಕು. ನಾನು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆಮಾತ್ರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಾರಕ್ಕೆ 2 ಮೊಟ್ಟೆಗಳನ್ನು ನೀಡುತ್ತಿದ್ದೆವು. ಈಗ 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆಕೊಡುವ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ವಾರಕ್ಕೆ 3 ಮೊಟ್ಟೆಗಳನ್ನು ನೀಡಬೇಕು ಎಂದು ಹೇಳಿದರು.

ಕಿಟಕಿಯಿಂದ ಬಸ್‌ ಹತ್ತುವಾಗ ಮಹಿಳೆ ಕೈ ತುಂಡು ಶುದ್ಧಸುಳ್ಳು: ಕೆಎಸ್‌ಆರ್‌ಟಿಸಿ ಸ್ಪಷ್ಟನೆ

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 7ನೇ ವೇತನ ಆಯೋಗ ರಚನೆ ಮಾಡಿದ್ದು, ಸರ್ಕಾರಿ ನೌಕರರಿಗೆ ಶೇ. 17 ರಷ್ಟುಮಧ್ಯಂತರ ಪರಿಹಾರ ಕೊಟ್ಟಿದ್ದೆವು. ಹೊಸ ಸರ್ಕಾರ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿ ತರಿಸಿಕೊಂಡು ನೌಕರರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ನೌಕರರ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್‌)ಯನ್ನು ಮತ್ತೆ ಜಾರಿಗೆ ತಂದು ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌)ಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್‌ನವರು ಹೇಳಿದ್ದಾರೆ. ಆದಷ್ಟುಬೇಗ ಈ ಸಮಿತಿಯ ವರದಿಯನ್ನು ತರಿಸಿಕೊಂಡು ಒಪಿಎಸ್‌ನ್ನು ಜಾರಿಗೊಳಿಸಬೇಕು ಎಂದರು.

click me!