ಮಕ್ಕಳಿಗೆ ಆಹಾರ ಮತ್ತು ವಸತಿ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಶಾಸಕ ಟಿ.ಡಿ. ರಾಜೇಗೌಡರ ಬಳಿ ಮನವಿ ಮಾಡಲು ಬಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಲ್ ಸಸ್ಪೆಂಡ್ ಆಗಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.26): ಮಕ್ಕಳಿಗೆ ಆಹಾರ ಮತ್ತು ವಸತಿ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಶಾಸಕ ಟಿ.ಡಿ. ರಾಜೇಗೌಡರ ಬಳಿ ಮನವಿ ಮಾಡಲು ಬಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಲ್ ಕಂ ವಾರ್ಡನ್ ಆಗಿರುವ ಲೋಕನಾಯಕ್ ಸಸ್ಪೆಂಡ್ ಆಗಿದ್ದಾರೆ. ಆದರೆ, ಸಸ್ಪೆಂಡ್ ಮಾಡುವುದಕ್ಕೂ ಮೊದಲು ನಡೆದ ಘಟನೆಯೇ ರೋಚಕವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಸಂಸೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕ ನಾಯಕ್ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಶಾಸಕ ಟಿ.ಡಿ. ರಾಜೇಗೌಡರಿಗೆ ಮನವಿ ನೀಡಲು ಆಗಮಿಸಿದ್ದರು. ಈ ವೇಳೆ, ಪ್ರಿನ್ಸಿಪಾಲ್ ಲೋಕನಾಯಕ್ ಮದ್ಯ ಸೇವನೆ ಮಾಡಿ ಅಮಲೇರಿಸಿಕೊಂಡು (ಫುಲ್ ಟೈಟ್) ಬಂದಿರುವುದನ್ನು ಕಂಡ ಶಾಸಕರು ರಸ್ತೆ ಮಧ್ಯೆಯೇ ಫುಲ್ ಗರಂ ಆಗಿ ವಾರ್ನಿಂಗ್ ಮಾಡಿದ್ದಾರೆ. ಜೊತೆಗೆ, ನಿಂತ ಸ್ಥಳದಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಪ್ರಿನ್ಸಿಪಾಲರನ್ನು ಅಮಾನತು ಮಾಡಿಸಿದ್ದಾರೆ.
BENGALURU: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ
ಮದ್ಯದ ಅಮಲಿನಲ್ಲಿ ತೇಲುತ್ತಾ ಬಂದ ಪ್ರಿನ್ಸಿಪಾಲ್: ಹೌದು, ಬರೋಬ್ಬರು 300 ಹೆಣ್ಣೂಮಕ್ಕಳಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಪ್ರಿನ್ಸಿಪಲ್ ಕಂ ವಾರ್ಡನ್ ಆಗಿರುವ ಲೋಕನಾಯಕ್ ಅವರು, ಹಾಡ ಹಗಲೇ ಕುಡಿದುಕೊಂಡು ಓಡಾಡುತ್ತಿದ್ದಾರೆ. ಇನ್ನು ಶಾಸಕರ ಬಳಿ ಶಾಲೆಗೆ ಮೂಲಸೌಕರ್ಯ ಒದಗಿಸುವಂತೆ ಮಾಡಲು ಬಂದಾಗಲೇ ಇಷ್ಟು ಅಸ್ತವ್ಯಸ್ತವಾಗಿ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಬಂದ ಪ್ರಿನ್ಸಿಪಾಲರಿಗೆ ಮೊದಲು ಕುಡಿದಿದ್ದೀರಾ ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸದೇ ತನ್ನ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಿದ್ದಾರೆ. ಕೂಡಲೇ, ಸ್ಥಳಕ್ಕೆ ಪೊಲೀಸರನ್ನು ಲರೆಸಿದ ಶಾಸಕ ಟಿ.ಡಿ. ರಾಜೇಗೌಡ ಅವರು, ಬ್ರೀಥಿಂಗ್ ಸೆನ್ಸಾರ್ ಅನ್ನು ಪ್ರಿನ್ಸಿಪಾಲನ ಬಾಯಿಗಿಟ್ಟು ಪರೀಕ್ಷೆ ಮಾಡಲು ಹೇಳಿದ್ದಾರೆ. ಆಗ ಕುಡಿದಿರುವುದು ಬಹಿರಂಗವಾಗಿದೆ.
ಆಸ್ಪತ್ರೆಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿದ ಶಾಸಕ: ಇನ್ನು ಇಷ್ಟಕ್ಕೇ ಸಾಲದೆಂಬಂತೆ, ಪ್ರಿನ್ಸಿಪಾಲರು ಇನ್ನುಮುಂದೆ ಯಾವತ್ತೂ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳಬಾರದು ಎಂಬಂತೆ ಪಾಠ ಕಲಿಸಲು ಸಿದ್ಧವಾಗಿದ್ದಾರೆ. ಪೊಲೀಸರ ಬ್ರೀಥಿಂಗ್ ಸೆನ್ಸಾರ್‌ನಲ್ಲಿ ಕುಡಿದಿರುವುದು ಖಚಿತವಾದ ಕೂಡಲೇ, ಆಂಬುಲೆನ್ಸ್ ಕರೆಸಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಜೊತೆಗೆ, ಅಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ನಂತರ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದಾರೆ. ನಂತರ, ಸರ್ಕಾರಿ ಸೇವಾ ಅವಧಿಯಲ್ಲಿ ಕಚೇರಿಯಿಂದ ಹೊರ ಬಂದಿದ್ದೂ ಅಲ್ಲದೆ, ಮದ್ಯಪಾನ ಮಾಡಿ ಕರ್ತವ್ಯ ಲೋಪ ಎಸಗಿರುವ ಅಪರಾಧದಲ್ಲಿ ಅವರನ್ನು ಅಮಾನತು ಕೂಡ ಮಾಡಿಸಿದ್ದಾರೆ.
ಹೊಯ್ಸಳ ರಾಜವಂಶ ಹುಟ್ಟಿದ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷದ ಬಳಿಕ ಬಸ್ ಸಂಚಾರ
ಪ್ರಿನ್ಸಿಪಾಲನಿಗೆ ಬುದ್ಧಿಪಾಠ ಮಾಡಿದ ರಾಜೇಗೌಡ: ಮಕ್ಕಳಿಗೆ ಭವಿಷ್ಯ ರೂಪಿಸುವ ಶಿಕ್ಷಕರೇ ಹೀಗೆ ವರ್ತಿಸಿದರೆ ಮಕ್ಕಳ ಪಾಡೇನು ಎಂದು ಶಾಸಕ ಟಿ.ಡಿ. ರಾಜೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಸಂಸೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಪ್ರಸ್ತುತ 240 ಜನ ಹೆಣ್ಣು ಮಕ್ಕಳಿದ್ದಾರೆ. ಈಗ ಮತ್ತೆ ಹೊಸದಾಗಿ 40 ಜನ ಬರುವವರು ಇದ್ದಾರೆ. ಹಾಸ್ಟೆಲ್ ನಲ್ಲಿ ವಾರ್ಡನ್ ಯಾರು ಇಲ್ಲ. ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಎರಡು ಹುದ್ದೆಯನ್ನು ಲೋಕ ನಾಯಕ್ ಅವರೇ ನಿರ್ವಹಿಸುತ್ತಿದ್ದಾರೆ. ಸುಮಾರು 300 ಜನ ಹೆಣ್ಣು ಮಕ್ಕಳಿರುವ ವಸತಿ ಶಾಲೆಯಲ್ಲಿ ಇಂತಹ ಪ್ರಿನ್ಸಿಪಾಲ್ ಇದ್ದರೆ ಹೆಣ್ಣು ಮಕ್ಕಳ ಗತಿಯೆಂದು ಶಾಸಕ ರಾಜೇಗೌಡ ಪ್ರಿನ್ಸಿಪಾಲ್ ವಿರುದ್ಧ ಬುದ್ಧಿಪಾಠ ಹೇಳಿದ್ದಾರೆ.