Shakti Scheme ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬಸ್ಸುಗಳು

By Gowthami K  |  First Published Jun 13, 2023, 8:59 PM IST

ಸರ್ಕಾರವೇನೋ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲ ಮಾಡಿದೆ ನಿಜ. ಆದರೆ ಕೊಡಗು ಜಿಲ್ಲೆಯ 135 ಖಾಸಗಿ ಬಸ್ಸುಗಳಿಗೆ ನಿತ್ಯ ಸಾವಿರಾರು ರೂಪಾಯಿ ನಷ್ಟ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.13): ಸರ್ಕಾರವೇನೋ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲ ಮಾಡಿದೆ ನಿಜ. ಆದರೆ ಈ ಶಕ್ತಿ ಯೋಜನೆಯಿಂದಲೇ ನೂರಾರು ಕುಟುಂಬಗಳು ಬೀದಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆಯಲ್ಲಿ 135  ಕ್ಕೂ ಹೆಚ್ಚು ಖಾಸಗಿ ಬಸ್ಸುಗಳಿದ್ದು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ವಿವಿಧೆಡೆ ಸಂಚರಿಸುತ್ತವೆ. ಅದರಲ್ಲೂ ಗ್ರಾಮೀಣ ಭಾಗದಲ್ಲೇ ಹೆಚ್ಚು ಖಾಸಗಿ ಬಸ್ಸುಗಳು ಓಡಾಡುತ್ತವೆ. ಆದರೆ ಈಗ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇ ತಡ ಮಹಿಳೆಯರು ಖಾಸಗಿ ಬಸ್ಸುಗಳನ್ನು ಹತ್ತುವುದನ್ನು ಬಿಟ್ಟಿದ್ದಾರೆ. ಖಾಸಗಿ ಬಸ್ಸುಗಳು ಮಾರ್ಗದಲ್ಲಿ ಬಂದು ಹೋದ ಒಂದು ಗಂಟೆಯ ಬಳಿಕ ಸರ್ಕಾರ ಬಸ್ಸು ಬರುತ್ತವೆ. ಇಷ್ಟು ದಿನ ಖಾಸಗಿ ಬಸ್ಸಿನಲ್ಲೇ ಓಡಾಡುತ್ತಿದ್ದ ಮಹಿಳೆಯರು ಇದೀಗ ಸರ್ಕಾರಿ ಬಸ್ಸುಗಳತ್ತ ಮುಖ ಮಾಡಿದ್ದಾರೆ.

Tap to resize

Latest Videos

undefined

ಖಾಸಗಿ ಬಸ್ಸುಗಳು ಬಂದರೂ ಅದರಲ್ಲಿ ಹಣ ನೀಡಿ ಪ್ರಯಾಣ ಮಾಡಬೇಕಲ್ಲ ಎನ್ನುವ ದೃಷ್ಠಿಯಿಂದ ಖಾಸಗಿ ಬಸ್ಸುಗಳನ್ನು ಏರದೆ, ಒಂದು ಗಂಟೆ ತಡವಾದರೂ ಕಾದು ಸರ್ಕಾರಿ ಬಸ್ಸುಗಳನ್ನು ಏರುತ್ತಿದ್ದಾರೆ. ಇದರಿಂದ ಖಾಸಗಿ ಬಸ್ಸುಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ.

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ 6 ಕಂಡೀಷನ್ ಹಾಕಿ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಕೊಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ಮಡಿಕೇರಿ ಬಂದು ಹೋಗುವ ಬಸ್ಸುಗಳು ಒಂದು ಕಡೆಯಿಂದ 70 ಕಿಲೋ ಮೀಟರ್ ಸಂಚರಿಸುತ್ತವೆ. ಶಕ್ತಿಯೋಜನೆಗೂ ಮೊದಲು 3500 ರಿಂದ 4 ಸಾವಿರ ಕಲೆಕ್ಷನ್ ಮಾಡುತ್ತಿದ್ದ ಬಸ್ಸುಗಳು ಇದೀಗ ಕೇವಲ ಒಂದುವರೆ ಸಾವಿರ ಕಲೆಕ್ಷನ್ ಮಾಡುತ್ತಿವೆ. ಡೀಸೆಲ್ಗೆ ಕನಿಷ್ಠ ಎರಡು ಸಾವಿರ ರೂಪಾಯಿ ಬೇಕಾಗುತ್ತದೆ. ಹೀಗಾಗಿ ಬಸ್ಸುಗಳಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಬಸ್ಸು ಮಾಲೀಕ ನಯನ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಇನ್ನು ಕಳೆದ ಒಂದು ಶತಮಾನದಿಂದ ನಾವು ಜಿಲ್ಲೆಯ ಗ್ರಾಮೀಣ ಭಾಗಗಳ ಜನರಿಗೆ ಸೇವೆ ನೀಡುತ್ತಿದ್ದೇವೆ. ನಿತ್ಯ ಓಡಾಡುತ್ತಿದ್ದ ಜನರಿಗೆ ಶೇ 35 ರಷ್ಟು ರಿಯಾಯ್ತಿ ನೀಡುತ್ತಿದ್ದೆವು. ವಿದ್ಯಾರ್ಥಿಗಳಿಗೆ 50 ರಷ್ಟು ರಿಯಾಯ್ತಿ ನೀಡುತ್ತಿದ್ದೆವು. ಇದಕ್ಕೆ ಸರ್ಕಾರದಿಂದ ಯಾವುದೇ ಮರು ಅನುದಾನ ಪಡೆಯುತ್ತಿರಲಿಲ್ಲ.

ಮುರುಡೇಶ್ವರ ತೀರದ ಅಲೆಗೆ ಸಿಲುಕಿ Bengaluru ವಿದ್ಯಾರ್ಥಿ ಸಾವು, ಲೈಫ್ ಗಾರ್ಡ್‌ ಎಚ್ಚರಕ್ಕೆ ಪ್ರವಾಸಿಗರ ಹಲ್ಲೆ!

ಈಗ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದರೂ ಸರ್ಕಾರ ಅವರಿಗೆ ಯಾವುದೇ ನಷ್ಟ ಆಗದಂತೆ ಅನುದಾನ ತುಂಬಿಕೊಡುತ್ತದೆ. ಹಾಗೆ ಖಾಸಗಿ ಬಸ್ಸುಗಳಿಗೂ ಕೊಡಲಿ. ನಾವು ಕೂಡ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ. ವರ್ಷಕ್ಕೆ ಒಂದು ಬಸ್ಸಿಗೆ 2 ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇವೆ. ಈ ತೆರಿಗೆಯನ್ನಾದರೂ ವಿನಾಯಿತಿ ಮಾಡಲಿ. ಅಥವಾ ಬಸ್ಸುಗಳಿಗೆ ಬೇಕಾಗುವಷ್ಟು ಡೀಸೆಲ್ ಅನ್ನು ರಿಯಾಯ್ತಿ ದರದಲ್ಲಿ ನೀಡಲಿ. ಇಲ್ಲದಿದ್ದರೆ ಖಾಸಗಿ ಬಸ್ಸುಗಳ ದುಡಿಮೆಯನ್ನೇ ಅವಲಂಬಿಸಿ 650 ಕ್ಕೂ ಹೆಚ್ಚು ಕುಟುಂಬಗಳು ಬದುಕುತ್ತಿವೆ ಎಂದು ಖಾಸಗಿ ಬಸ್ಸುಗಳ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅಸಮಾಧಾನ ಹೊರಹಾಕಿದ್ದಾರೆ.

ಆದರೆ ತಮ್ಮ ಊರುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಸುಗಳು ಇಲ್ಲದೆ ಇರುವುದರಿಂದ ನಾವು ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲೇ ಓಡಾಡುತ್ತಿದ್ದೇವೆ. ನಮಗೆ ಸರ್ಕಾರದ ಶಕ್ತಿ ಯೋಜನೆ ಲಾಭವಾಗುತ್ತಿಲ್ಲ ಎನ್ನುವುದು ಇನ್ನಷ್ಟು ಮಹಿಳೆಯರ ಅಸಮಾಧಾನ ಒಟ್ಟಿನಲ್ಲಿ ಸರ್ಕಾರ ತನ್ನ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಯನ್ನು ಜಾರಿ ಮಾಡಿರುವುದು ಖಾಸಗಿ ಬಸ್ಸುಗಳ ಮಾಲೀಕರು ಮತ್ತು ಚಾಲಕರು, ನಿರ್ವಾಹಕರು ಹಾಗೂ ಅದನ್ನು ಅವಲಂಬಿಸಿದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗಿದೆ.

click me!