ಎಪಿಎಂಸಿ ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಕೆಕಿಸಾನ್ ತಂತ್ರಾಂಶದಲ್ಲಿ ಸಮರ್ಪಕ ಸರ್ವರ್ ಇಲ್ಲದೆ ಆನ್ ಲೈನ್ ನೊಂದಣಿ ವಿಳಂಬವಾಗುತ್ತಿದ್ದು ಬೀಜ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂ13): ಪಟ್ಟಣದ ಎಪಿಎಂಸಿ ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಕೆಕಿಸಾನ್ ತಂತ್ರಾಂಶದಲ್ಲಿ ಸಮರ್ಪಕ ಸರ್ವರ್ ಇಲ್ಲದೆ ಆನ್ ಲೈನ್ ನೊಂದಣಿ ವಿಳಂಬವಾಗುತ್ತಿದ್ದು ಬೀಜ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ. ಸರಕಾರ ಬಿತ್ತನೆ ಬೀಜ ಖರೀದಿಸಲು ಪ್ರಥಮಬಾರಿ ಆನ್ ಲೈನ್ ನೊಂದಣಿ ಅಲ್ಲದೆ ಬಾರ್ ಕೋಡಿಂಗ್ ಸ್ಕ್ಯಾನ್ ಮಾಡಬೇಕಾಗಿ ರುತ್ತದೆ. ಆದರೆ ಕಳೆದ ಮೂರು ದಿನಗಳಿಂದ ಇಂಟರ್ ನೆಟ್, ಸರ್ವರ್ ಸಿಗದೆ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವಲ್ಲಿ ಹರಸಾಹಸ ಪಡುವಂತಾಗಿದೆ ಇದರಿಂದ ರೈತರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಸಿಬ್ಬಂದಿಗಳ ಕೊರತೆ ಮಧ್ಯೆಯೂ ಎರಡು ಕಂಪ್ಯೂಟರ್ ಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಆನ್ ಲೈನ್ ನಲ್ಲಿ ದಾಖಲು ಮಾಡಲಾಗು ತ್ತಿದೆ.ಬಾರ್ ಸ್ಕ್ಯಾನಿಂಗ್ ನೊಂದಿಗೆ ಪಾರದರ್ಶಕವಾಗಿ ರೈತರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ ದಾಸ್ತಾನು ಪೂರೈಕೆಗೆ ಕೊರತೆ ಯಿಲ್ಲ ಮೆಕ್ಕೆಜೋಳ, ತೊಗರಿ, ಸೋಯಾಬೀನ್, ಸೂರ್ಯಕಾಂತಿ ಬೀಜಗಳ ಸಂಗ್ರಹವಿದೆ.
ರೈತರು ಅವಸರ ಪಡದೆ ಸಹಕರಿಸಬೇಕು. ಒಂದು ಪಾಕೀಟ್ ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದವರಿಗೆ 80ರೂ ಸಬ್ಸಿಡಿ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 120 ರೂ ಸಬ್ಸಿ ಡಿ ಹಣ ನೀಡಲಾಗುವುದು. ದಾಖಲೆಗಳು ಆಧಾರ ಕಾರ್ಡ್,ಜಾತಿ ಪ್ರಮಾಣ ಪತ್ರ,ಪಹಣಿ. ದಾಖಲೆ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ.
ಮುರುಡೇಶ್ವರ ತೀರದ ಅಲೆಗೆ ಸಿಲುಕಿ Bengaluru ವಿದ್ಯಾರ್ಥಿ ಸಾವು, ಲೈಫ್ ಗಾರ್ಡ್ ಎಚ್ಚರಕ್ಕೆ ಪ್ರವಾಸಿಗರ ಹಲ್ಲೆ!
ಕೈಕೊಟ್ಟ ಮುಂಗಾರು: ಬಿತ್ತನೆ ಕಾರ್ಯ ಕುಂಠಿತ:
ರಾಜ್ಯದಲ್ಲಿ ಮುಂಗಾರು ಹಿನ್ನಡೆಯಾಗುತ್ತಿದ್ದಂತೆ ಇತ್ತ ವಿಜಯನಗರ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ಈವರೆಗೆ ಕೇವಲ ಶೇ. 1ರಷ್ಟುಮಾತ್ರ ಬಿತ್ತನೆಯಾಗಿದೆ.
ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 289453 ಹೆಕ್ಟೇರ್ ಕೃಷಿ ಭೂಮಿಯಲ್ಲಿ 225038 ಹೆ. ಮಳೆಯಾಶ್ರಿತ ಪ್ರದೇಶವಿದ್ದರೆ 64415 ಹೆಕ್ಟೇರ್ ನೀರಾವರಿ ಕೃಷಿ ಭೂಮಿಯಿದೆ. ಪೈಕಿ 3325 ಬಿತ್ತನೆಯಾಗಿ ಶೇ. 1.1ರಷ್ಟುಮಾತ್ರ ಬಿತ್ತನೆಯಾಗಿದೆ.
ಹೊಸಪೇಟೆ 10187 ಹೆಕ್ಟೇರ್‌ಗೆ ಶೂನ್ಯ ಬಿತ್ತನೆಯಾಗಿದೆ, ಕೂಡ್ಲಿಗಿ 59410 ಹೆಕ್ಟೇರ್‌ಗೆ 568 ಹೆಕ್ಟೇರ್, ಕೊಟ್ಟೂರು 32343 ಹೆಕ್ಟೇರ್‌ಗೆ 221 ಹೆಕ್ಟೇರ್, ಹಗರಿಬೊಮ್ಮನಹಳ್ಳಿ 41823 ಹೆಕ್ಟೇರ್‌ಗೆ 995 ಹೆಕ್ಟೇರ್, ಹಡಗಲಿ 50994 ಹೆಕ್ಟೇರ್‌ಗೆ 726 ಹೆಕ್ಟೇರ್ ಹಾಗೂ ಹರಪನಹಳ್ಳಿ 85696 ಹೆಕ್ಟೇರ್‌ಗೆ 815 ಹೆಕ್ಟೇರ್, ಸೇರಿ ಒಟ್ಟು 289453 ಹೆಕ್ಟೇರ್ 3325 ಹೆಕ್ಟೇರ್ ಬಿತ್ತನೆಯಾಗಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ ದಿಟ್ಟ ಹೆಜ್ಜೆ, ವಿಮಾನ ನಿಲ್ದಾಣಗಳು ಇನ್ಮುಂದೆ ರಾಜ್ಯ
ಮಳೆ ಕೊರತೆ:
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸರಾಸರಿ 123.2 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. 67.9 ಮಿಮೀ ಮಳೆಯಾಗಿದೆ. 45 ಮಿಮೀ ಮಳೆ ಕೊರತೆ ಇದೆ. ಈ ಬಾರಿ ಶೇ. 1ರಷ್ಟುಗುರಿ ಸಾಧನೆ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ರೈತರು ರಂಟೆ, ಕುಂಟೆ ಹೊಡೆಯುವುದಕ್ಕೆ ಟೊಂಕ ಕಟ್ಟಿನಿಂತಿದ್ದಾರೆ. ಆದರೆ ಮಳೆ ಇಲ್ಲದೇ ಭೂಮಿ ಒಣಗಿದೆ.
ಕೃಷಿ ಇಲಾಖೆ ಸಜ್ಜು:
ಈ ನಡುವೆ ಕೃಷಿ ಇಲಾಖೆ, ಬಿತ್ತನೆ ಬೀಜ, ರಸಗೊಬ್ಬರ ಇತ್ಯಾದಿ ಸಂಗ್ರಹ ಮಾಡಿಕೊಂಡಿದೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬೀಜ ದಾಸ್ತಾನು ಮಾಡಿಕೊಂಡಿದೆ.
ತೇವಾಂಶದ ಕೊರತೆ:
ಅಲ್ಪಸ್ವಲ್ಪ ಬಿತ್ತನೆಗೊಂಡ ಬೆಳೆಗಳು ಕೂಡ ತೇವಾಂಶ ಕೊರತೆಯಿಂದ ಬಾಡಿ ಬಾಗಿವೆ. ಇದರ ನಡುವೆಯೂ ಕೆಲವೆಡೆ ರೈತರು ವರುಣನ ಮೇಲಿನ ನಂಬಿಕೆಯಿಂದ ಭೂಮಿ ಹದ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.