ಶಿವಮೊಗ್ಗ: ಸೊರಬ ಪಟ್ಟಣ ಪಂಚಾಯತಿನಲ್ಲಿ ಹಲವು ಕೊಠಡಿಗಳಿಗೆ ಬೀಗ

By Kannadaprabha News  |  First Published Aug 25, 2019, 12:04 PM IST

ಸೊರಬ ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿಗಳಿಲ್ಲದೆ ಹಲವು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಇಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳ ಅಧಿಕೃತ ಅಧಿಕಾರ ಪ್ರಕ್ರಿಯೆಯೂ ನಡೆದಿಲ್ಲ, ಪಟ್ಟಣ ಅಭಿವೃದ್ಧಿಯಿರಲಿ, ಸಾಮಾನ್ಯ ಜನಾವಶ್ಯಕ ಕೆಲಸ ಕಾರ್ಯಗಳೂ ಕೂಡ ಕುಂಠಿತಗೊಂಡಿವೆ.


ಶಿವಮೊಗ್ಗ(ಆ.25): ಸೊರಬ ಪಟ್ಟಣ ಪಂಚಾಯಿತಿಯಲ್ಲಿ ಬಹಳಷ್ಟುಕೊಠಡಿಗಳಿಗೆ ಬೀಗ ಹಾಕಲಾಗಿದೆ. ಈ ಕೊಠಡಿಗಳು ಬಹಳಷ್ಟುದಿನಗಳಿಂದ ಅಧಿಕಾರಿಗಳನ್ನೇ ಕಂಡಿಲ್ಲ.

ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ದ್ವಿತೀಯ ದರ್ಜೆ ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು ಹೀಗೆ ಹತ್ತು ಹಲವಾರು ಹುದ್ದೆಗಳು ಖಾಲಿ ಇದ್ದು, ಇಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳ ಅಧಿಕೃತ ಅಧಿಕಾರ ಪ್ರಕ್ರಿಯೆಯೂ ನಡೆದಿಲ್ಲ, ಪಟ್ಟಣ ಅಭಿವೃದ್ಧಿಯಿರಲಿ, ಸಾಮಾನ್ಯ ಜನಾವಶ್ಯಕ ಕೆಲಸ ಕಾರ್ಯಗಳೂ ಕೂಡ ಕುಂಠಿತಗೊಂಡಿವೆ.

Tap to resize

Latest Videos

‘ಸೇವ್‌ VISL; ಸೆಕ್ಯೂರ್‌ ಭದ್ರಾವತಿ’, ಹೋರಾಟಕ್ಕೆ ಜನಪ್ರತಿನಿಧಿಗಳಿಂದ ಶೂನ್ಯ ಸ್ಪಂದನೆ

ಮೇಲಿಂದ ಮೇಲೆ ಒಂದೇ ಕೆಲಸಕ್ಕೆ ಹಲವು ಬಾರಿ ಅಲೆದಾಡುವಂತಹ ಪರಿಸ್ಥಿತಿ ಜನತೆಯದ್ದಾಗಿದೆ. ಈಗಿರುವ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್‌ ಅವರು ಒತ್ತಡದ ಮೇಲೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ ಎಂದು ಪಪಂ ಸದಸ್ಯ ಪ್ರಸನ್ನಕುಮಾರ್‌ ದೊಡ್ಮನೆ ಹತಾಶೆ ವ್ಯಕ್ತಪಡಿಸಿದ್ದಾರೆ.

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗ್ತಿದ್ದ ಪ್ರವಾಸಿಗನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಯುವಕರು

ಶಾಸಕ ಕುಮಾರಬಂಗಾರಪ್ಪ ಈ ಕೊರತೆ ಬಗ್ಗೆ ಗಮನಹರಿಸಲಿ, ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಜನರಿಗೆ ನ್ಯಾಯ ಒದಗಿಸಿಕೊಡಲಿ ಎಂದು ಅವರು ಕೋರಿದ್ದಾರೆ.

click me!