ಮಂಡ್ಯ ಜಿಲ್ಲೆಯಲ್ಲಿ ವಿ.ಸಿ ನಾಲೆಗೆ ಬಸ್ ಉರುಳಿ 30 ಜನರು ದಾರುಣವಾಗಿ ಸಾವನ್ನಪ್ಪಿದ್ದ ಕಹಿ ನೆನಪು ಮಾಸುವ ಮುನ್ನವೇ ಬೇರೆ-ಬೇರೆ ಕಡೆಗಳಲ್ಲಿ ಎರಡು ಬಸ್ ಗಳು ಉರುಳಿಬಿದ್ದಿವೆ.
ಕೊಡಗು/ಉತ್ತರ ಕನ್ನಡ, (ನ.26) : ಮಂಡ್ಯ ಜಿಲ್ಲೆಯಲ್ಲಿ ವಿ.ಸಿ ನಾಲೆಗೆ ಬಸ್ ಉರುಳಿ 30 ಜನರು ಸಾವನ್ನಪ್ಪಿದ್ದ ಕಹಿ ನೆನಪು ಮಾಸುವ ಮುನ್ನವೇ ಬೇರೆ-ಬೇರೆ ಕಡೆಗಳಲ್ಲಿ ಎರಡು ಬಸ್ ಗಳು ಉರುಳಿಬಿದ್ದಿವೆ.
ಕೊಡಗಿನ ಕುಶಾಲನಗರದ ಹಾರಂಗಿ ಬಳಿಯ ಹೇರೂರಿನಿಂದ ಅರಕಲಗೂಡು ಸಮೀಪದ ಅತ್ನಿಗೆ ಹೋಗುತ್ತಿದ್ದ ಬಸ್ ಕೊಣನೂರಿನ ಬಳಿ ಗದ್ದೆಗೆ ಉರುಳಿ ಬಿದ್ದಿದೆ.
ಅಷ್ಟಕ್ಕೂ 25ಕ್ಕೂ ಹೆಚ್ಚು ಬಲಿ ಪಡೆದ 'ರಾಜಕುಮಾರ' ಬಸ್ ಯಾರದ್ದು?
ಬೀಗರ ಔತಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಉರುಳಿದ್ದು, ಬಸ್ ನಲ್ಲಿದ್ದ ಸುಮಾರು 50 ಜನರ ಪೈಕಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಉಳಿದವರನ್ನು ಚಿಕಿತ್ಸೆಗೆ ಹಾಸನ ಅಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದೆಡೆ ಯಲ್ಲಾಪುರ-ಶಿರಸಿ ರಸ್ತೆಯ ಬೇಡ್ತಿ ನದಿಗೆ ಬಸ್ ಉರುಳಿ 8 ಜನರಿಗೆ ಗಂಭೀರ ಗಾಯಗಳಾಗಿದ್ದರೆ, 10 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.