ಕೊಡಗುನಲ್ಲಿ ಭೂಮಿಯೊಳಗಿನ ಶಬ್ಧಕ್ಕೆ ಕಾರಣವೇನು ಗೊತ್ತಾ..?

By Web Desk  |  First Published Aug 29, 2018, 12:19 PM IST

ಇಲ್ಲಿನ ಭೂಮಿಯಲ್ಲಿ ವಿಚಿತ್ರ ಶಬ್ದ ಬರುತ್ತಿದೆ ಎಂದು ಸೋಮವಾರವಷ್ಟೇ ಗ್ರಾಮಸ್ಥರು ತಹಸೀಲ್ದಾರ್‌ ಅವರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ನೈಸರ್ಗಿಕ ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ತಂಡ ಹಾಗೂ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದರು.

ಮಡಿಕೇರಿ(ಆ.29): ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಭೂಮಿಯೊಳಗೆ ಬರುತ್ತಿದ್ದ ವಿಚಿತ್ರ ಶಬ್ದ ಮೇಲ್ಪದರದಲ್ಲಿ ಹರಿಯುವ ಅಂತರ್ಜಲದ್ದಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಭೂ ವಿಜ್ಞಾನಿಗಳು ತಿಳಿಸಿದ್ದಾರೆ.

ಇಲ್ಲಿನ ಭೂಮಿಯಲ್ಲಿ ವಿಚಿತ್ರ ಶಬ್ದ ಬರುತ್ತಿದೆ ಎಂದು ಸೋಮವಾರವಷ್ಟೇ ಗ್ರಾಮಸ್ಥರು ತಹಸೀಲ್ದಾರ್‌ ಅವರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ನೈಸರ್ಗಿಕ ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ತಂಡ ಹಾಗೂ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದರು.

Tap to resize

Latest Videos

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೂವಿಜ್ಞಾನಿ ಡಾ.ರಮೇಶ್‌, ಇಲ್ಲಿ ಕೇಳಿಸುತ್ತಿರುವುದು ನೀರು ಹರಿಯುವ ಶಬ್ದವಾಗಿದೆ ಎಂದು ಸ್ಪಷ್ಟಪಡಿಸಿದರು. ಹೆಚ್ಚು ಮಳೆಯಾಗಿರುವುದರಿಂದ ಅಂತರ್ಜಲ ಮೇಲ್ಭಾಗದಲ್ಲಿ ಹರಿಯುತ್ತಿರಬಹುದು. ಜೊತೆಗೆ ಇದು ಇಳಿಜಾರು ಪ್ರದೇಶವಾಗಿದ್ದು ಇದಕ್ಕೆ soil piping ಎನ್ನುತ್ತಾರೆ ಎಂದರು. 

ಸದ್ಯಕ್ಕೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಮನೆಯಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. 

click me!