ಮಾರಮ್ಮನ ಪ್ರಸಾದ ದುರಂತ: ಜನರು ಮಾತ್ರವಲ್ಲ, ಪಕ್ಷಿಗಳ ಮಾರಣ ಹೋಮ

By Web DeskFirst Published Dec 14, 2018, 9:01 PM IST
Highlights

ಸುಳ್ವಾಡಿ ಗ್ರಾಮ ಮಾರಮ್ಮನ ಪ್ರಸಾದ ಸೇವಿಸಿದ ದರಂತದಲ್ಲಿ ಭಕ್ತರು ಮಾತ್ರವಲ್ಲದೇ ಕಾಗೆಗಳು ಸಹ ದೇವಸ್ಥಾನದ ಸುತ್ತ ಮುತ್ತ ಸತ್ತು ಬಿದ್ದಿದ್ದಾವೆ.

ಚಾಮರಾಜನಗರ,[ಡಿ.14]: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮ ಮಾರಮ್ಮನ ಪ್ರಸಾದ ಸೇವಿಸಿದ ಸುಮಾರು 65ಕ್ಕೂ ಹೆಚ್ಚು ಭಕ್ತರು ಆಸ್ಪತ್ರೆ ಸೇರಿದ್ದು,  ಸಧ್ಯದ ವರದಿ ಬಂದ ಪ್ರಕಾರ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಇದ್ರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ನೀಡಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಘೋಷಿಸಿದ್ದಾರೆ.

ಮಾರಮ್ಮನ ಪ್ರಸಾದಕ್ಕೆ 10 ಮಂದಿ ಬಲಿ: ವಿಷವಿಕ್ಕಿದ ಇಬ್ಬರ ಬಂಧನ

ಕೇವಲ ಜನರು ಮಾತ್ರವಲ್ಲದೇ ಜನರು ಸೇವಿಸಿ ಬಿಟ್ಟಿದ್ದ ವಿಷಾ ಆಹಾರ ಪಲಾವ್ ಅನ್ನು ಕಾಗೆಗಳು ತಿಂದಿದ್ದು, ಸುಮಾರು 40ಕ್ಕೂ ಹೆಚ್ಚು ಕಾಗೆಗಳು ಸುಳ್ವಾಡಿ ಗ್ರಾಮ ಮಾರಮ್ಮ ದೇವಸ್ಥಾನದ ಸುತ್ತಮುತ್ತ ಸತ್ತು ಬಿದ್ದಿದ್ದಾವೆ.

 ದೇವಸ್ಥಾನದ ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇವಸ್ಥಾನದ ಕಮಿಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸಿದ್ದಾರೆ.

click me!