ಚಾಮರಾಜನಗರ: ಏರುತ್ತಿರುವ ಸಾವಿನ ಸರಣಿ, ಪ್ರಸಾದದಲ್ಲಿ ವಿಷ ಹಾಕಿದ್ರಾ ಪಾಪಿಗಳು..?

By Web DeskFirst Published Dec 14, 2018, 7:27 PM IST
Highlights

ದೇವರ ಪ್ರಸಾದ ಸೇವಿಸಿದ ಸ್ವೀಕರಿಸಿ ಅಸ್ವಥಗೊಂಡವರ ಪೈಕಿ ಈಗಾಗಲೇ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಇದ್ರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಮರಾಜನಗರ, [ಡಿ.14]: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ. ಅಮ್ಮನ ನಮ್ಮ ಮೇಲೆ ಇರಲಿ ಎಂದು ಗ್ರಾಮದ ಕಿಚ್ಚುಕುತ್ತಿ ಮಾರಮ್ಮನ ಪ್ರಸಾದ ಸೇವಿಸಿದ ಭಕ್ತರ ಪಾಲಿಗೆ ಎರವಾಗಿದೆ.

ಮಾರಮ್ಮ ದೇವಾಲಯದಲ್ಲಿ ಟಮೋಟೋ ಬಾತ್​, ಬಾಳೆಹಣ್ಣು, ಅವಲಕ್ಕಿ ಮಿಶ್ರಿತ ಪಂಚಾಮೃತ ಪ್ರಸಾದ ಸ್ವೀಕರಿಸಿ ಮಗು ಸೇರಿಸಿ 8 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ದುಘರ್ಘಟನೆಗೆ ವಿಷ ಪ್ರಾಶನವೇ ಕಾರಣ ಎಂದು ಹೇಳಲಾಗುತ್ತಿದೆ.

ಚಾಮರಾಜನಗರ: ದೇವರ ಪ್ರಸಾದ ಸೇವಿಸಿ 6 ಜನರ ಸಾವು, ಹಲವರ ಸ್ಥಿತಿ ಗಂಭೀರ

ಘಟನೆ ಸಂಬಂಧ ಡಿಹೆಚ್​ಒ ಪ್ರಸಾದ್​ ಮಾತನಾಡಿ, ಅಸ್ವಸ್ಥರಾದವರ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆ. ಹಾಗಾಗಿ ಘಟನೆಗೆ ವಿಷ ಪ್ರಾಶನವೇ ಕಾರಣ ಎಂದು ಶಂಕೆ ವ್ಯಕ್ತ ಪಡಿಸಿದರು. ಮೊದಲೇ ಪ್ರಸಾದದಲ್ಲಿ ಸೀಮೆ ಎಣ್ಣೆ ವಾಸನೆ ಬರುತ್ತಿತ್ತು, ಪ್ರಸಾದ ಎಂದು ಸ್ವೀಕರಿಸಿದೆವು ಎನ್ನುವುದು ಭಕ್ತರ ಮಾತು.

 ಪ್ರಸಾದದಲ್ಲಿ ವಿಷ ಹಾಕಿದ್ರಾ ಪಾಪಿಗಳು..?
ಈ ಹಿಂದೆ ಆ ಸ್ಥಳದಲ್ಲಿ ಒಂದು ಚಿಕ್ಕ ಕಲ್ಲಿನ ಗುಡಿ ಇತ್ತಂತೆ. ಬಳಿಕ ಅಲ್ಲಿ ದೇವಾಲಯ ನಿರ್ಮಾಣ ಮಾಡಲಾಯ್ತಂತೆ.  ಇಂದು [ಶುಕ್ರವಾರ] ಬೆಳಗ್ಗೆ 10;30ಕ್ಕೆ ದೇವಸ್ಥಾನದ ಶಂಕುಸ್ಥಾಪನೆಯ ಪೂಜಾ ಕಾರ್ಯಕ್ರಮ ಬಳಿಕ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಪ್ರಸಾದ ಸೇವಿಸಿದ ಬಳಿಕ 65ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. 

ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ಯಾರೋ ಕಿಡಿಗೇಡಿಗಳು ಪ್ರಸಾದಕ್ಕೆ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

"

click me!