Mandya : ಜೆಡಿಎಸ್‌ಗೆ 2ನೇ ಹಂತದ ಸೇರ್ಪಡೆ ಸಿದ್ಧತೆ : ಧನಂಜಯ

By Kannadaprabha NewsFirst Published Feb 18, 2023, 6:06 AM IST
Highlights

  ಜೆಡಿಎಸ್‌ ಪಂಚರತ್ನ ಯೋಜನೆಯನ್ನು ಮೆಚ್ಚಿ ತಾಲೂಕಿನ ಮತ್ತಷ್ಟುವೀರಶೈವ ಸಮುದಾಯದ ಮುಖಂಡರು ಮತ್ತು ಇತರೆ ಸಮಾಜದ ಮುಖಂಡರು ಎರಡನೇ ಹಂತದ ಸೇರ್ಪಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಕೀಲ ವಿ.ಎಸ್‌.ಧನಂಜಯ ಕುಮಾರ್‌ ತಿಳಿಸಿದರು.

 ಕೆ.ಆರ್‌.ಪೇಟೆ:  ಜೆಡಿಎಸ್‌ ಪಂಚರತ್ನ ಯೋಜನೆಯನ್ನು ಮೆಚ್ಚಿ ತಾಲೂಕಿನ ಮತ್ತಷ್ಟುವೀರಶೈವ ಸಮುದಾಯದ ಮುಖಂಡರು ಮತ್ತು ಇತರೆ ಸಮಾಜದ ಮುಖಂಡರು ಎರಡನೇ ಹಂತದ ಸೇರ್ಪಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಕೀಲ ವಿ.ಎಸ್‌.ಧನಂಜಯ ಕುಮಾರ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ವಕೀಲನಾಗಿದ್ದ ನಾನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ರೈತಪರ ಹೋರಾಟಗಳಿಂದ ಆಕರ್ಷಿತನಾಗಿ ರಾಜಕೀಯ ಪ್ರವೇಶಿಸಿದ್ದೇನೆ. ದೇವೇಗೌಡರ ಹೋರಾಟದ ಹೆಜ್ಜೆಗಳಲ್ಲಿ ಸಾಗುವುದು ನನ್ನ ಗುರಿ ಎಂದರು.

Latest Videos

ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ನನಗೆ ಅತೀವ ಸಂತಸ ತಂದಿದೆ. ನಾನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದ ನಂತರ ಕೆಲವರು ನನ್ನ ತೇಜೋವಧೆ ಮಾಡುವ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ಅವರ ವಿರುದ್ಧ ಮಾನಷ್ಟಮೊಕ್ಕದ್ದೊಮ್ಮೆ ದಾಖಲಿಸುವುದಾಗಿ ಎಚ್ಚರಿಸಿದರು.

ಪಕ್ಷಕ್ಕಾಗಿ ಕಿಂಚಿತ್ತೂ ಸೇವೆ ಸಲ್ಲಿಸದ ಸಚಿವ ಕೆ.ಸಿ.ನಾರಾಯಣಗೌಡರಿಗೆ ಈ ಹಿಂದೆ ಜೆಡಿಎಸ್‌ ಟಿಕೆಟ್‌ ನೀಡಿತ್ತು. ಪಕ್ಷಕ್ಕಾಗಿ ದುಡಿದ ಮಾಜಿ ಸ್ಪೀಕರ್‌ ಕೃಷ್ಣ ಅವರಿಗೆ ಟಿಕೆಟ್‌ ಕೊಡಬೇಕಾಗಿತ್ತು ಎನ್ನುವ ನನ್ನ ಅಂದಿನ ಅಭಿಪ್ರಾಯವನ್ನು ಈಗ ಕೆಲವರು ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಚಿವ ನಾರಾಯಣಗೌಡರಂತೆ ನಾನು ಹಣ ಮತ್ತು ಅಧಿಕಾರಕ್ಕಾಗಿ ಎಂದಿಗೂ ಪಕ್ಷದಿಂದ ಪಕ್ಷ ಬದಲಾಯಿಸುವುದಿಲ್ಲ. ನನ್ನ ಜೀವನದ ಕಡೆ ಉಸಿರಿರುವವರೆಗೂ ಜೆಡಿಎಸ್‌ ಪಕ್ಷದಲ್ಲಿಯೇ ಉಳಿಯುತ್ತೇನೆ. ನನ್ನ ತೇಜೋವಧೆಯ ಉದ್ದೇಶದಿಂದ ನಾನು ಆಡಿದ ಕೆಲವು ಮಾತುಗಳ ವೀಡಿಯೋ ತುಣಕನ್ನು ಈಗ ಟ್ರೋಲ… ಮಾಡುತ್ತಿರುವುದನ್ನು ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್‌ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್‌, ಹೋಬಳಿ ಘಟಕಗಳ ಅಧ್ಯಕ್ಷರಾದ ಬಸವಲಿಂಗಪ್ಪ, ಮಾಕವಳ್ಳಿ ವಸಂತಕುಮಾರ್‌, ಮುಖಂಡರಾದ ರುದ್ರಪ್ಪ, ವಸಂತಪ್ಪ, ಈರೇಗೌಡ, ಗಣೇಶ್‌, ಪಟ್ಟಣದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಬಸವೇಗೌಡ, ಕರ್ನಾಟಕ ರಕ್ಷನಾ ಸೇನೆಯ ಸುಕುಮಾರ್‌ ಇದ್ದರು.

 ಚುನಾವಣೆಯ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ

ಚಿಕ್ಕಮಗಳೂರು : ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಚಿಕ್ಕಮಗಳೂರು‌ ಬಿಜೆಪಿಯಲ್ಲಿ ಗೊಂದಲ‌ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ನಿನ್ನೆಯಷ್ಟೇ ಸಿ.ಟಿ.ರವಿ ಅಪ್ತ ತಮ್ಮಯ್ಯ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ತಮ್ಮ ಬೆಂಬಲಿಗರು, ಬಿಜೆಪಿಯಲ್ಲಿರುವ ಅತೃಪ್ತ ಆಪ್ತರೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು.

ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದ ತಮ್ಮಯ್ಯ: ನಾನು 17 ವರ್ಷದಿಂದ ಬಿಜೆಪಿ ಬಾವುಟ ಹಿಡಿದು, ಕಟ್ಟಿ, ಬ್ಯಾನರ್ ಕಟ್ಟಿ ವಿವಿಧ ಹುದ್ಧೆಗಳನ್ನ ನಿರ್ವಹಿಸಿದ್ದೇನೆ. ನನಗೂ ಚಿಕ್ಕಮಗಳೂರು ತಾಲೂಕಿನ ಬಿಜೆಪಿ ಟಿಕೆಟ್ ಬೇಕೆಂದು ಹಾಲಿ ಶಾಸಕ ಸಿ.ಟಿ.ರವಿ ವಿರುದ್ಧ ತೊಡೆ ತಟ್ಟಿ ಟಿಕೆಟ್ ಕೇಳಿದ್ದ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಬಿಜೆಪಿಗೆ ಗುಡ್‍ಬೈ ಹೇಳಿ ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಅತೃಪ್ತ ಆಪ್ತರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಹೆಚ್.ಡಿ.ತಮ್ಮಯ್ಯ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಲಿಂಗಾಯುತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. 

ಬಿಜೆಪಿಗೆ ಗುಡ್ ಬೈ ಹೇಳಿದ ಶಾಸಕ ಸಿ.ಟಿ ರವಿ ಅಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ. ತಮ್ಮಯ್ಯ

ಬದಲಾವಣೆಯ ಸಂಕಲ್ಪ ಯಾತ್ರೆ ಆರಂಭಿಸಿರೋ ಹೆಚ್.ಡಿ.ತಮ್ಮಯ್ಯ: ಸಿ.ಟಿ.ರವಿ ವಿರುದ್ಧ ಬದಲಾವಣೆಯ ಸಂಕಲ್ಪ ಯಾತ್ರೆ ಆರಂಭಿಸಿರೋ ಹೆಚ್.ಡಿ.ತಮ್ಮಯ್ಯ ಇದೇ 19ರಂದು ಬೆಂಗಳೂರಿನ ಕೆ.ಪಿ.ಸಿ.ಸಿ.ಕಚೇರಿಯಲ್ಲಿ ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಲಿದ್ದಾರೆ. ನಿನ್ನೆ ತಾನೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸಿ.ಟಿ.ರವಿ ಆಪ್ತ ಹೆಚ್.ಡಿ ತಮ್ಮಯ್ಯ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್‍ಗೆ ನಾನು ಯಾವುದೇ ಬೇಡಿಕೆ ಇಲ್ಲದೆ ಸೇರುತ್ತೇನೆ. ಈಗಾಗಲೇ 6 ಜನ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ. ಗಾಯತ್ರಿ ಶಾಂತೇಗೌಡ ಹಾಕಿಲ್ಲ. ಅವರು ಹಾಗೂ ನನ್ನನ್ನ ಸೇರಿಸಿ ಸರ್ವೇ ಮಾಡಿಸಲಿ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲ ನೀಡಲು ಸಿದ್ಧ. ನನಗೆ ಸಿಕ್ಕರೆ ಎಲ್ಲರೂ ಬೆಂಬಲ ನೀಡಲಿ ಎಂದು ಕೇಳಿಕೊಂಡಿದ್ದಾರೆ.

click me!