Karnataka Election : ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ರಮ್ಯ ?

By Kannadaprabha News  |  First Published Feb 18, 2023, 6:00 AM IST

ಜೆಡಿಎಸ್‌ನವರು ಒಂದೂವರೆ ವರ್ಷದ ಅಧಿಕಾರದಲ್ಲಿದ್ದು ಏನೂ ಮಾಡಲಿಲ್ಲ. ಬಿಜೆಪಿಯವರು ಅಧಿಕಾರ ನಡೆಸಿದಾಗಲೂ ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡಲಿಲ್ಲ. ಅಧಿಕಾರವಿದ್ದಾಗಲೇ ಮಾಡದವರು ಈಗ ಮಾಡುವರೆಂಬ ನಿರೀಕ್ಷೆಯಲ್ಲೂ ನಾವಿರಲಿಲ್ಲ. ಚುನಾವಣೆ ಬಂದಿದೆ. ಈಗ ಜನರೇ ಉತ್ತರ ಕೊಡಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿಳಿಸಿದರು.


  ಮದ್ದೂರು :  ಜೆಡಿಎಸ್‌ನವರು ಒಂದೂವರೆ ವರ್ಷದ ಅಧಿಕಾರದಲ್ಲಿದ್ದು ಏನೂ ಮಾಡಲಿಲ್ಲ. ಬಿಜೆಪಿಯವರು ಅಧಿಕಾರ ನಡೆಸಿದಾಗಲೂ ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡಲಿಲ್ಲ. ಅಧಿಕಾರವಿದ್ದಾಗಲೇ ಮಾಡದವರು ಈಗ ಮಾಡುವರೆಂಬ ನಿರೀಕ್ಷೆಯಲ್ಲೂ ನಾವಿರಲಿಲ್ಲ. ಚುನಾವಣೆ ಬಂದಿದೆ. ಈಗ ಜನರೇ ಉತ್ತರ ಕೊಡಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊಪ್ಪ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.

Tap to resize

Latest Videos

ನನಗೆ ಮಾಹಿತಿ ಸಿಕ್ಕಿಲ್ಲ

ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಗುರುಚರಣ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿರುವ ಉದಯ್‌ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ ಎಂದು ಗೊತ್ತಾಗಿದೆ. ಅದರ ಬಗ್ಗೆ ಸ್ಪಷ್ಟಮಾಹಿತಿ ನನಗಿನ್ನೂ ಸಿಕ್ಕಿಲ್ಲ. ಊಹೆ ಮಾಡಿ ಮಾತನಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಅಧ್ಯಕ್ಷರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಪಕ್ಷ ತೀರ್ಮಾನ ಮಾಡುತ್ತೆ:

ಚನ್ನಪಟ್ಟಣ ಕ್ಷೇತ್ರದಿಂದ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ನಟಿ ರಮ್ಯ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ಪ್ರಯತ್ನ ನಡೆಸಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಬಹಳಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಕುಮಾರಸ್ವಾಮಿ ಅವರನ್ನು ಎದುರಿಸಲು ಸಾಕಷ್ಟು ಸಮರ್ಥರು ಕಾಂಗ್ರೆಸ್‌ನಲ್ಲೂ ಇದ್ದಾರೆ ಎಂದರು.

ಈ ವೇಳೆ ಡಿಡಿಸಿ ಬ್ಯಾಂಕ್‌ ನಿರ್ದೇಶಕ ಕೆ.ಸಿ.ಜೋಗಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ದಿವಾಕರ್‌ , ತಾಪಂ ಮಾಜಿ ಅಧ್ಯಕ್ಷ ಕೌಡ್ಲೆ ಶ್ರೀನಿವಾಸ್‌, ಮಾಜಿ ಉಪಾಧ್ಯಕ್ಷ ಬಿ.ಎಂ.ರಘು, ಯುವ ಮುಖಂಡ ಸಚ್ಚಿನ್‌ ಚಲುವರಾಯಸ್ವಾಮಿ, ಗಟ್ಟಹಳ್ಳಿ ಹರೀಶ್‌, ಹೊಸಗಾವಿ ರಮೇಶ್‌, ಚೆನ್ನಪ್ಪ, ಕಂಠಿ, ಪುರುಷೋತ್ತಮ್‌, ಯೋಗೇಶ್‌ ಇದ್ದರು.

ಚುನಾವಣೆಯ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ

ಚಿಕ್ಕಮಗಳೂರು (ಫೆ.18): ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಚಿಕ್ಕಮಗಳೂರು‌ ಬಿಜೆಪಿಯಲ್ಲಿ ಗೊಂದಲ‌ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ನಿನ್ನೆಯಷ್ಟೇ ಸಿ.ಟಿ.ರವಿ ಅಪ್ತ ತಮ್ಮಯ್ಯ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ತಮ್ಮ ಬೆಂಬಲಿಗರು, ಬಿಜೆಪಿಯಲ್ಲಿರುವ ಅತೃಪ್ತ ಆಪ್ತರೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು.

ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದ ತಮ್ಮಯ್ಯ: ನಾನು 17 ವರ್ಷದಿಂದ ಬಿಜೆಪಿ ಬಾವುಟ ಹಿಡಿದು, ಕಟ್ಟಿ, ಬ್ಯಾನರ್ ಕಟ್ಟಿ ವಿವಿಧ ಹುದ್ಧೆಗಳನ್ನ ನಿರ್ವಹಿಸಿದ್ದೇನೆ. ನನಗೂ ಚಿಕ್ಕಮಗಳೂರು ತಾಲೂಕಿನ ಬಿಜೆಪಿ ಟಿಕೆಟ್ ಬೇಕೆಂದು ಹಾಲಿ ಶಾಸಕ ಸಿ.ಟಿ.ರವಿ ವಿರುದ್ಧ ತೊಡೆ ತಟ್ಟಿ ಟಿಕೆಟ್ ಕೇಳಿದ್ದ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಬಿಜೆಪಿಗೆ ಗುಡ್‍ಬೈ ಹೇಳಿ ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಅತೃಪ್ತ ಆಪ್ತರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಹೆಚ್.ಡಿ.ತಮ್ಮಯ್ಯ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಲಿಂಗಾಯುತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. 

ಬಿಜೆಪಿಗೆ ಗುಡ್ ಬೈ ಹೇಳಿದ ಶಾಸಕ ಸಿ.ಟಿ ರವಿ ಅಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ. ತಮ್ಮಯ್ಯ

ಬದಲಾವಣೆಯ ಸಂಕಲ್ಪ ಯಾತ್ರೆ ಆರಂಭಿಸಿರೋ ಹೆಚ್.ಡಿ.ತಮ್ಮಯ್ಯ: ಸಿ.ಟಿ.ರವಿ ವಿರುದ್ಧ ಬದಲಾವಣೆಯ ಸಂಕಲ್ಪ ಯಾತ್ರೆ ಆರಂಭಿಸಿರೋ ಹೆಚ್.ಡಿ.ತಮ್ಮಯ್ಯ ಇದೇ 19ರಂದು ಬೆಂಗಳೂರಿನ ಕೆ.ಪಿ.ಸಿ.ಸಿ.ಕಚೇರಿಯಲ್ಲಿ ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಲಿದ್ದಾರೆ. ನಿನ್ನೆ ತಾನೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸಿ.ಟಿ.ರವಿ ಆಪ್ತ ಹೆಚ್.ಡಿ ತಮ್ಮಯ್ಯ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್‍ಗೆ ನಾನು ಯಾವುದೇ ಬೇಡಿಕೆ ಇಲ್ಲದೆ ಸೇರುತ್ತೇನೆ. ಈಗಾಗಲೇ 6 ಜನ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ. ಗಾಯತ್ರಿ ಶಾಂತೇಗೌಡ ಹಾಕಿಲ್ಲ. ಅವರು ಹಾಗೂ ನನ್ನನ್ನ ಸೇರಿಸಿ ಸರ್ವೇ ಮಾಡಿಸಲಿ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲ ನೀಡಲು ಸಿದ್ಧ. ನನಗೆ ಸಿಕ್ಕರೆ ಎಲ್ಲರೂ ಬೆಂಬಲ ನೀಡಲಿ ಎಂದು ಕೇಳಿಕೊಂಡಿದ್ದಾರೆ.

click me!