
ಮೈಸೂರು : 6 ಅಂಗಡಿಗಳ ಬಾಗಿಲು ಮೀಟಿ . 35 ಸಾವಿರ ಮೌಲ್ಯದ ಪದಾರ್ಥಗಳನ್ನು ಕಳ್ಳತನ ಮಾಡಿರುವ ಘಟನೆ ಮೈಸೂರಿನ ಹಳೆಯ ಮಾನಂದವಾಡಿ ರಸ್ತೆ ಮತ್ತು ದೇವಯ್ಯನಹುಂಡಿ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಬಾಡಿಗೆಗೆ ಇದೆ ಎಂದು ಫಲಕ ಹಾಕಿರುವ 2 ಖಾಲಿ ಮಳಿಗೆಗಳು, ಒಂದು ಟೀ ಶಾಪ್, ಒಂದು ಬೇಕರಿ, ಒಂದು ಬಟ್ಟೆಅಂಗಡಿ ಮತ್ತು ಆದ್ಯಾ ಸೂಪರ್ ಮಾರ್ಕೆಟ್‌ನಲ್ಲಿ ಸುಮಾರು . 35 ಸಾವಿರ ಮೌಲ್ಯದ ಪದಾರ್ಥಗಳನ್ನು ಕಳವು ಮಾಡಿದ್ದಾರೆ. ಸೆಂಟ್ರಲ್ ಲಾಕ್ ಇಲ್ಲದ ಅಂಗಡಿಗಳನ್ನೆ ಗುರುಯಾಗಿಸಿಕೊಂಡು ಕಳವಿಗೆ ಯತ್ನಿಸಿದ್ದಾರೆ. ಆದರೆ, ಅಂಗಡಿಗಳಲ್ಲಿ ಯಾರೂ ಹಣ ಇರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅಶೋಕಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.
ಕುಖ್ಯಾತ ಕಳ್ಳಿಯರ ಬಂಧನ
ಉಡುಪಿ (ಮಾ.15): ಕಳ್ಳತನ ನಡೆದ ಕೇವಲ 8 ಗಂಟೆಯೊಳಗೆ ಇಬ್ಬರು ಕುಖ್ಯಾತ ಕಳ್ಳಿಯರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪೋಲಿಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲೂಕಿನ ಸರ್ಕಾರಿ ಕೃಷ್ಣ ಸ್ಕೂಲ್ ಹತ್ತಿರ ಹನುಮಂತ ನಗರ, ಹೊಸಮನೆಯ ಲಲಿತಾ ಬೋವಿ (41), ಸುಶೀಲಮ್ಮ ಬೋವಿ (64) ಬಂಧಿತ ಆರೋಪಿಗಳು.
ಮಾ. 14ರಂದು ಕಾಪು ತಾಲೂಕಿನ ಕುತ್ಯಾರು ಗ್ರಾಮದ ಕೇಂಜಾ ನಿವಾಸಿ ಪುನೀತಾ ವಸಂತ್ ಹೆಗ್ಡೆ ( 69) ತಮ್ಮ ಕುಟುಂಬದೊಂದಿಗೆ ಮುಂಬಿಯಿಗೆ ಹೋಗಲು ಮಂಗಳೂರು-ಮುಂಬಯಿ ಎಕ್ಸ್‌ಪ್ರೆಸ್ ರೈಲು ನಂಬ್ರ 12134ರಲ್ಲಿ S -3 ಕೋಚ್‌ನಲ್ಲಿ ಸೀಟ್ ನಂಬ್ರ 33, 36 ಮತ್ತು 21 ನೇ ಟಿಕೆಟ್ ಬುಕ್ ಮಾಡಿದ್ದು, ಅದರಂತೆ ಮಧ್ಯಾಹ್ನ 03:35 ಗಂಟೆಗೆ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತಿದ್ದು, ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದರು.
Udupi: ಚುನಾವಣೆ ಸಂದರ್ಭ ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡ ರಚನೆ
ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಿದ್ದು ಸೀಟ್‌ನಲ್ಲಿ ಕುಳಿತಾಗ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್‌ನ ಒಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಕಾಣಿಯಾಗಿರುವುದು ಗಮನಕ್ಕೆ ಬಂದಿದೆ. ಮಾ.14ರಂದು ಮಧ್ಯಾಹ್ನ 03:35 ಗಂಟೆಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್ ಜಿಪ್‌ನ್ನು ತೆರೆದು ಬ್ಯಾಗ್್‌ನಲ್ಲಿದ್ದ ಬಂಗಾರದ ಒಡವೆಗಳನ್ನು ಹಾಗೂ ವ್ಯಾಚನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕಳವಾದ ಚಿನ್ನಾಭರಣಗಳು: ಒಟ್ಟು 4,03,000/- ರೂ ಮೌಲ್ಯದ 100 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗು 3000/- ರೂ ಮೌಲ್ಯದ ವಾಚ್ ಕಳವಾಗಿದೆ. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಮತ್ತು ಡಿವೈಎಸ್ಪಿ ದಿನಕರ್ ಅವರ ನೇತೃತ್ವದಲ್ಲಿ, ಮಣಿಪಾಲ ಠಾಣಾ ನಿರೀಕ್ಷಕ ದೇವರಾಜ್, ಪಿ.ಎಸ್.ಐ ನವೀನ್ ನಾಯ್ಕ್, ಎ.ಎಸ್.ಐ ಶೈಲೇಶ್, ಸಿಬ್ಬಂದಿಯವರಾದ ಇಮ್ರಾನ್, ಶುಭ, ಅರುಣಾ ಚಾಳೇಕರ್ ತಂಡ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ
ಮಾ. 15 ರಂದು ಬೆಳಿಗ್ಗೆ 6:30 ಗಂಟೆಗೆ ಟೈಗರ್ ಸರ್ಕಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆರೋಪಿತರಿಂದ ಕಳುವಾದ 4,03,000/- ರೂ ಮೌಲ್ಯದ 100 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಭದ್ರಾವತಿ ಮೂಲದವರಾಗಿದ್ದು, ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದು, ಪಿಕ್ ಪಾಕೇಟ್ ಹಾಗೂ ಜನಸಂದಣಿಯಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಚಾಳಿ ಉಳ್ಳವರಾಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಇವರ ವಿರುದ್ಧ ಈ ಹಿಂದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿರುತ್ತದೆ. ಆರೋಪಿತರನ್ನು ವಶಕ್ಕೆ ಪಡೆದು ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.