ಅನೈತಿಕ ಸಂಬಂಧಕ್ಕೆ ತನ್ನ ಮಗಳು ಅಡ್ಡಿಯಾಗಿದ್ದಾಳೆಂದು ತಿಳಿದು ತಾಯಿಯೋರ್ವಳು ತನ್ನ ಐದು ವರ್ಷದ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ
ಧಾರವಾಡ (ಫೆ.9): ಅನೈತಿಕ ಸಂಬಂಧಕ್ಕೆ ತನ್ನ ಮಗಳು ಅಡ್ಡಿಯಾಗಿದ್ದಾಳೆಂದು ತಿಳಿದು ತಾಯಿಯೋರ್ವಳು ತನ್ನ ಐದು ವರ್ಷದ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ
ಕಮಲಾಪುರದ ಹೂಗಾರ ಓಣಿಯಲ್ಲಿ ಈ ಘಟನೆ ನಡೆದಿದೆ. ಜ್ಯೋತಿ ಅನಾಡ ಎಂಬಾಕೆ ರಾಹುಲ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಈ ಸಂಬಂಧಕ್ಕೆ ತನ್ನ ಐದು ವರ್ಷದ ಅಂಗವಿಕಲ ಹೆಣ್ಣು ಮಗು ಅಡ್ಡಿಯಾಗುತ್ತಿದೆ ಎಂದು ಜ್ಯೋತಿ ತಾನು ಹೆತ್ತ ಮಗುವನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಇಂದು ಸಂಜೆ ರಾಹುಲ್ ಎಂಬಾತ ಜ್ಯೋತಿ ಮನೆಗೆ ಬಂದಾಗ ಐದು ವರ್ಷದ ಹೆಣ್ಣು ಮಗು ಕಿರಿಕಿರಿಯುಂಟು ಮಾಡಿತೆಂದು ಜ್ಯೋತಿ ತಾನು ಹೆತ್ತ ಮಗುವನ್ನೇ ಹಿಸುಕಿ ಕೊಲೆ ಮಾಡಿದ್ದಾಳೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಜ್ಯೋತಿ ಹಾಗೂ ರಾಹುಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ಧಾರವಾಡ ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ವಯಕ್ತಿಕ ಕಾರಣಕ್ಕಾಗಿ ಐದು ಕೊಲೆಗಳು ನಡೆದಿವೆ..ಇನ್ನು ಹುಬ್ಬಳ್ಳಿ_ಧಾರವಾಡದಲ್ಲಿ ಕ್ರೈಂ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ..ಆದರೆ ಪೋಲಿಸ್ ಇಲಾಖೆ ಎಲ್ಲೋ ಒಂದು ಕ್ರೈಂ ಪ್ರಕರಣಗಳನ್ನ ತಡೆಗಟ್ಟುವಲ್ಲಿ ವಿಫಲವಾದೆ ಎಂದರೆ ತಪ್ಪಾಗಲಾರದು..ಆದರೆ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಕೊಲೆಗಳು ಆಗುತ್ತಿವೆ..ರೌಡಿ ಶಿಟರಗಳಿಗೆ ಯಾರ ಭಯ ವಿಲ್ಲದಂತಾಗಿದೆ..
ನಗರ ಪೊಲೀಸ್ ಆಯುಕ್ತರು ಹೇಳೋದೇನು?
ಸರಣಿ ಕೊಲೆ ಪ್ರಕರಣಗಳು ಕುರಿತಂತೆ ಮಾತನಾಡಿದ ಅವಳಿ ನಗರದ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಮಾತನಾಡಿ ಧಾರವಾಡದಲ್ಲಿ ದಿನಕ್ಕೊಂದು ಕೊಲೆ ನಡೆದಿವೆ, ಕಳೆದ ಐದು ದಿನದಲ್ಲಿ ಐದು ಕೊಲೆ ಬಳಿಕ ಎಚ್ಚೆತ್ತುಕ್ಕೊಂಡ ಕಮಿಷನರ್ ಅವರು ಸದ್ಯ ಧಾರವಾಡ ನಗರದಲ್ಲಿಯೇ ನಡೆಯುತ್ತಿರುವ ಕೊಲೆ ಈ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದಾರೆ. ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದೇವೆ ಬೀಟ್ ವ್ಯವಸ್ಥೆ ಮೂಲಕ ಜಾಗೃತಿಗೆ ಮುಂದಾಗಿದ್ದೇವೆ ಜನರಿಗೆ ಪ್ರಾಣ ಬೆದರಿಕೆ ಇದ್ದಲ್ಲಿ ಗಮನಕ್ಕೆ ತರಲು ಕೇಳುತ್ತಿದ್ದೇವೆ ಯಾವುದಕ್ಕೂ ಹಿಂಜರಿಯದೇ ಪೊಲೀಸರನ್ನು ಸಂಪರ್ಕಿಸಬೇಕು ಇದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಸಂಬಂಧಿಸಿದವರನ್ನು ಕರೆಯಿಸಿ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತೇವೆ. ಸಿವಿಲ್ ಕೇಸ್‌ಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಲು ಬರುವುದಿಲ್ಲ ಆದರೆ ಇದರಲ್ಲಿ ಗಲಾಟೆ ಸಾಧ್ಯತೆ ಇದ್ದಲ್ಲಿ ಇಬ್ಬರ ಮೇಲೂ ಕೇಸ್ ಹಾಕುತ್ತೇವೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬಹುದು ಪೊಲೀಸರ ಭಯ ಕಡಿಮೆಯಾಗಿದೆಯೆಂಬ ಮಾಧ್ಯಮಗಳ ಪ್ರಶ್ನೆಗೆ ಈಗ ನಗರದಲ್ಲಿ ಪೊಲೀಸರ ಓಡಾಟ ಹೆಚ್ಚಾಗಿದೆ ನಿಗಾ ವಹಿಸಿ ಓಡಾಡುತ್ತಿದ್ದಾರೆ ಇದರಿಂದ ಜನರಲ್ಲಿ ಧೈರ್ಯ ಬರುತ್ತದೆ ಅಪರಾಧ ಚಟುಚಟಿಕೆವುಳ್ಳವರಿಗೂ ಭಯ ಇದ್ದಂತೆ ಅಗುತ್ತದೆ ಸುಮ್ಮನೆ ಓಡಾಡುವುದಿಲ್ಲ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ.
ಪ್ರೇಯಸಿ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!
ಒಟ್ಟಿನಲ್ಲಿ ಕೆಟ್ಟ ಮೆಲೆ ಬುದ್ದಿ ಬಂದಂತೆ ಸದ್ಯ ಪೋಲಿಸ್ ಕಮಿಷನರ್ ಅವರು ಎಚ್ಚೆತ್ತುಕೊಂಡು ಎಲ್ಲ ಫೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೆಚ್ಚೆಚ್ಚು ಗಸ್ತು ತಿಗುಗಾಡಬೇಕು ಎಂದು ಠಾಣೆಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಕ್ರೈಂ ಗಳನ್ನ ಕಂಟ್ರೋಲ್ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕು.