ಕೊರೋನಾ ಭೀತಿ: 'ಕೋವಿಡ್‌ ಸೋಂಕಿತ ಮಕ್ಕಳ ಚಿಕಿ​ತ್ಸೆಗೆ ಪ್ರತ್ಯೇಕ ವಾರ್ಡ್‌'

By Kannadaprabha News  |  First Published May 26, 2021, 7:30 AM IST

* ಮಕ್ಕ​ಳಿಗೆ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್‌ ವತಿಯಿಂದ ಒಳ್ಳೆಯ ಆರೋಗ್ಯ ಚಿಕಿತ್ಸೆ 
* ವೈದ್ಯಕೀಯ ಸಿಬ್ಬಂದಿಗೆ ತಾತ್ಕಾಲಿಕ ಸೇವೆಗಾಗಿ ತರಬೇತಿ ನೀಡಿ, ಸಿದ್ಧಗೊಳ್ಳಿಸಲು ಯೋಜನೆ 
* 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವ ಸಂಭವ


ಧಾರವಾಡ(ಮೇ.26): ಜಿಲ್ಲೆಯ ಮಕ್ಕಳಲ್ಲಿಯೂ ಕೋವಿಡ್‌ ಸೋಂಕು ಕಂಡುಬರು​ತ್ತಿದ್ದು ಇಲ್ಲಿ​ಯ​ವ​ರೆ​ಗೆ ಯಾವುದೇ ತುರ್ತು ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಇಷ್ಟಾ​ಗಿಯೂ ಮಕ್ಕಳ ಮೇಲೆ ಈ ವೈರಸ್‌ ಪ್ರಭಾವ ಬೀರ​ದಂತೆ ಜಿಲ್ಲಾ​ಡ​ಳಿತ ಸಿದ್ಧ​ವಾ​ಗಿದೆ ಎಂದು ಜಿಲ್ಲಾ​ಧಿ​ಕಾರಿ ನಿತೇಶ ಪಾಟೀಲ ಹೇಳಿ​ದ್ದಾರೆ. 

Latest Videos

undefined

ಮಕ್ಕ​ಳಿಗೆ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್‌ ವತಿಯಿಂದ ಒಳ್ಳೆಯ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದ್ದು ಯಾವುದೇ ರೀತಿಯ ಪ್ರಾಣಹಾನಿ ಉಂಟಾಗಿಲ್ಲ. ಈಗಾಗಲೇ ಹುಬ್ಬಳ್ಳಿ-ಧಾರವಾಡ ಎಲ್ಲ ನುರಿತ ಮಕ್ಕಳ ವೈದ್ಯರ ಜೊತೆ ಚರ್ಚೆ ಮಾಡಿದ್ದು ಸೋಂಕು ಎದುರಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಂಗ​ಳ​ವಾರ ಪತ್ರಿಕಾ ಪ್ರಕ​ಟ​ಣೆ​ಯಲ್ಲಿ ತಿಳಿ​ಸಿ​ದ್ದಾ​ರೆ.

"

ನವಲಗುಂದ: ಕೊರೋನಾ ಬಾರದಂತೆ ಊರಿಗೆ ದಿಗ್ಬಂಧನ..!

ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌:

ಕೋವಿಡ್‌ ಸೋಂಕಿನ 3ನೇ ಅಲೆ ಎದುರಿಸಲು ಜಿಲ್ಲೆಯ ಜನಸಂಖ್ಯೆಯ ಅನುಗುಣವಾಗಿ ಎಷ್ಟುಬೆಡ್‌ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಹಾಗೂ ಎಲ್ಲ ಪ್ರಮುಖ ವೈದ್ಯರ ಸಮ್ಮುಖದಲ್ಲಿ ವಿಚಾರ ಸಂಕಿರಣ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಿವಿಧ ಕೈಗಾರಿಕೆ ಹಾಗೂ ಸಂಸ್ಥೆಗಳ ಸಿಎಸ್‌ಆರ್‌ ಯೋಜನೆಯಡಿ ಸುಮಾರು ರು. 2.5 ಕೋಟಿಯಲ್ಲಿ ಮಕ್ಕಳಿಗೆ ಬೇಕಾಗುವ ಐಸಿಯು, ವೆಂಟಿಲೇಟರ್‌ ಖರೀದಿಸಿ ಕಿಮ್ಸ್‌ ಆಸ್ಪತ್ರೆಗೆ ನೀಡಿದ್ದಾರೆ. ಮಕ್ಕಳಿಗೆ ಎಂಸಿಎಚ್‌ ಆಸ್ಪತ್ರೆಯಲ್ಲಿ 250 ಆಕ್ಸಿಜನ್‌ ಬೆಡ್‌ಗಳು ಸಿದ್ಧವಾಗಿದ್ದು, ಸಂಭಾವ್ಯ 3ನೇ ಅಲೆ ಎದುರಿಸಲು ಇನ್ನೂ 400 ಆಕ್ಸಿಜನ್‌ ಬೆಡ್‌ಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.

ಆಸ್ಪತ್ರೆಗಳಿಗೆ ಅಗತ್ಯವಿರುವ ಅರೆ ವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕ ಸೇವೆಗಾಗಿ ತರಬೇತಿ ನೀಡಿ, ಸಿದ್ಧಗೊಳ್ಳಿಸಲು ಯೋಜನೆ ರೂಪಿಸಲಾಗಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವ ಸಂಭವಿರುತ್ತದೆ. ಆದರಿಂದ ಪಾಲಕರು ಹೆಚ್ಚು ಕಾಳಜಿಯಿಂದ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳು ಬಂದ ತಕ್ಷಣ ಎಲ್ಲ ಮಕ್ಕಳ ಪೋಷಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿ​ದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!