ಪ್ರತ್ಯೇಕ ಅಪಘಾತ: ಇಬ್ಬರು ಅಪ್ರಾಪ್ತರು ಸೇರಿ ಮೂವರು ಸಾವು

Published : May 20, 2023, 09:05 AM ISTUpdated : May 20, 2023, 09:06 AM IST
ಪ್ರತ್ಯೇಕ ಅಪಘಾತ: ಇಬ್ಬರು ಅಪ್ರಾಪ್ತರು ಸೇರಿ ಮೂವರು ಸಾವು

ಸಾರಾಂಶ

ಟಾಟಾ ಏಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟಘಟನೆ ತಾಲೂಕಿನ ಹಳ್ಳಿಕೇರಿ ಸಮೀಪ ಗುರುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ಬಸವರಾಜ ಗಂಗಪ್ಪ ಲಕ್ಕುಂಡಿ (38) ಮೃತ ಬೈಕ್‌ ಸವಾರ. 9 ವರ್ಷದ ಪ್ರಜ್ವಲ ಬಸವರಾಜ ಲಕ್ಕುಂಡಿ ಹಾಗೂ ಅನ್ನಪೂರ್ಣಾ ಬಸವರಾಜ ಲಕ್ಕುಂಡಿ ಗಾಯಗೊಂಡಿದ್ದಾರೆ.

ಡಂಬಳ  (ಮೇ.20) :ಟಾಟಾ ಏಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟಘಟನೆ ತಾಲೂಕಿನ ಹಳ್ಳಿಕೇರಿ ಸಮೀಪ ಗುರುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ಬಸವರಾಜ ಗಂಗಪ್ಪ ಲಕ್ಕುಂಡಿ (38) ಮೃತ ಬೈಕ್‌ ಸವಾರ. 9 ವರ್ಷದ ಪ್ರಜ್ವಲ ಬಸವರಾಜ ಲಕ್ಕುಂಡಿ ಹಾಗೂ ಅನ್ನಪೂರ್ಣಾ ಬಸವರಾಜ ಲಕ್ಕುಂಡಿ ಗಾಯಗೊಂಡಿದ್ದಾರೆ.

ಬಸವರಾಜ ಅವರು ಮೇವುಂಡಿ ಗ್ರಾಮದಿಂದ ಬೈಕ್‌ನಲ್ಲಿ ಕೊಪ್ಪಳಕ್ಕೆ ತೆರಳಿ ಅಲ್ಲಿ ಬೈಕ್‌ ಇಟ್ಟು ಬಸ್‌ ಮುಖಾಂತರ ರಾಯಚೂರು ಜಿಲ್ಲೆಯ ಮಸ್ಕಿಗೆ ಮದುವೆಗೆಂದು ತೆರಳಿದ್ದರು. ಮಸ್ಕಿಯಲ್ಲಿ ಮದುವೆ ಮುಗಿಸಿಕೊಂಡು ಮತ್ತೆ ಕೊಪ್ಪಳಕ್ಕೆ ಬಂದು ಅಲ್ಲಿಂದ ಬೈಕ್‌ನಲ್ಲಿ ಪುನಃ ಗ್ರಾಮಕ್ಕೆ ತೆರಳುವಾಗ ಹಳ್ಳಿಕೇರಿ ಸಮೀಪದಲ್ಲಿ ಎದುರಿಗೆ ಅತಿ ವೇಗವಾಗಿ ಬಂದ ಟಾಟಾ ಏಸ್‌ ಡಿಕ್ಕಿಯಾಗಿದೆ. ವಾಹನ ನಿಲ್ಲಿಸದೆ ಟಾಟಾ ಏಸ್‌ ಚಾಲಕ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಬಸವರಾಜ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಪತ್ನಿ ಅನ್ನಪೂರ್ಣಾ, ಮಗ ಪ್ರಜ್ವಲ ಸಹ ಗಾಯಗೊಂಡಿದ್ದರು.

ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಕ್ರೂಸರ್‌: ಯಲ್ಲಮ್ಮನ ದರ್ಶನಕ್ಕೆ ಹೋದವರು ಮಸಣ ಸೇರಿದರು

ತಕ್ಷಣ ಸ್ಥಳೀಯರ ಸಹಕಾರದಿಂದ ಮೂವರನ್ನು ಗದಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಸವರಾಜ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅನ್ನಪೂರ್ಣಾ ಸ್ವಲ್ಪ ಚೇತರಿಸಿಕೊಂಡಿದ್ದು, ಪ್ರಜ್ವಲ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಅಪ್ರಾಪ್ತರಿಬ್ಬರ ಸಾವು

ರೋಣ(ಗದಗ: ಬೈಕೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಅಪ್ರಾಪ್ತರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ರೋಣ-ಅಬ್ಬಿಗೇರ ರಸ್ತೆ ಮಧ್ಯೆ ಶುಕ್ರವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಒಂದೇ ಬೈಕ್‌ನಲ್ಲಿ ಮೂವರು ಬರುತ್ತಿದ್ದ ವೇಳೆ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಸ್ಥಳದಲ್ಲೇ ಅನುಪ ಇಟಗಿ(16), ಶ್ರೀಕಾಂತ ಗಡಗಿ (15) ಮರಣ ಹೊಂದಿದ್ದಾರೆ. ಇನ್ನೊಬ್ಬ ಅಪ್ರಾಪ್ತ ಮನೋಜ್‌ ಕಂಬಾರ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ಮೂವರೂ ರೋಣ ಪಟ್ಟಣದವರು.

Road Accident: ಗೂಡ್ಸ್-ಕಾರು ನಡುವೆ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!

ಗಾಯಾಳು ಮನೋಜ್‌ನನ್ನು ರೋಣ ಪಟ್ಟಣದ ಡಾ.ಭೀಮಸೇನ್‌ ಜೋಶಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಸ್ಥಳಕ್ಕೆ ಸಿಪಿಐ ಶಿವಾನಂದ ಓಲೇಕಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC