ಬಿಜೆಪಿ ಹಿರಿಯ ಮುಖಂಡ ಎಚ್.ಬಿ. ದಿವಾಕರ್ ನಿಧನ

By Kannadaprabha News  |  First Published Dec 21, 2023, 10:02 AM IST

ಬಿಜೆಪಿ ಮುಖಂಡ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದ ಹೊಗವನಘಟ್ಟ ಎಚ್.ಬಿ. ದಿವಾಕರ್ (70) ಅವರು ಮಂಗಳವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.


ತಿಪಟೂರು: ಬಿಜೆಪಿ ಮುಖಂಡ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದ ಹೊಗವನಘಟ್ಟ ಎಚ್.ಬಿ. ದಿವಾಕರ್ (70) ಅವರು ಮಂಗಳವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರು ಹಲವಾರು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯಂತ ಸರಳ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದವರು. ಹಿಂದೆ ಜನತಾದಳ (ಎಸ್) ಹಾಗೂ ಜನತಾದಳ (ಯು) ಪಕ್ಷಗಳಲ್ಲಿ ನಿಷ್ಠೆಯಿಂದ ಕೆಲಸಮಾಡಿ ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ಮತ್ತು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಹಿರಿಯ ರಾಜಕಾರಣಿಗಳ ಒಡನಾಟದಲ್ಲಿದ್ದರು.

Tap to resize

Latest Videos

undefined

ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಯಾಗಿ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿ, ರಂಗಾಪುರ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರ ಅಂತ್ಯಕ್ರಿಯೆ ತಮ್ಮ ಸ್ವಗ್ರಾಮವಾದ ಹೊಗವನಘಟ್ಟ ಗ್ರಾಮದ ಅವರ ತೋಟದಲ್ಲಿ ಮಂಗಳವಾರ ನಡೆಯಿತು.

ಸಂತಾಪ: ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ, ಶಾಸಕ ಕೆ. ಷಡಕ್ಷರಿ, ಮಾಜಿ ಶಾಸಕ ಬಿ. ನಂಜಾಮರಿ, ಕಾಂಗ್ರೆಸ್ ಮುಖಂಡ ಲೋಕೇಶ್ವರ, ಜನಸ್ಪಂದನ ಶಶಿಧರ್, ವರ್ತಕರ ಸಂಘ, ರಂಗಾಪುರ ಶ್ರೀಮಠದ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳ ಸಂಘ, ಜೆಡಿಎಸ್ ಮುಖಂಡರಾದ ಕೆ.ಟಿ. ಶಾಂತಕುಮಾರ್, ತಡಸೂರು ಗುರುಮೂರ್ತಿ, ಅಭಾವೀ ಸಮಾಜದ ತಾ. ಅಧ್ಯಕ್ಷ ಎಂ.ಆರ್. ಸಂಗಮೇಶ್, ಕಸಾಪ ಅಧ್ಯಕ್ಷ ಕೆ.ಎಂ. ಪರಮೇಶ್ವರಪ್ಪ, ಕೆ.ಆರ್. ಅರುಣ್‌ಕುಮಾರ್, ಕೆ.ಎನ್. ರೇಣುಕಯ್ಯ, ಬಿಜೆಪಿ ಮುಖಂಡರಾದ ಕರಡಿ ದೇವರಾಜು, ಬಿಸಲೇಹಳ್ಳಿ ಜಗದೀಶ್, ಶಂಕರಪ್ಪ ಆಯರಹಳ್ಳಿ, ಗಂಗರಾಜು, ಎಪಿಎಂಸಿ ಕಾರ್ಯದರ್ಶಿ ಸಿದ್ದನಾಮನಗೌಡ, ಜಿ.ಎಲ್. ನಟರಾಜು ಸೇರಿದಂತೆ ಕೌಟು ವ್ಯಾಪಾರಿಗಳು, ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ, ಶಾಸಕ ಜ್ಯೋತಿಗಣೇಶ್, ಸೊಗಡುಶಿವಣ್ಣ, ಲೋಕೇಶ್ವರ ಮತ್ತಿತರ ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಅಭಿಮಾನಿಗಳು, ಜನರು ಭಾಗವಹಿಸಿದ್ದರು.

click me!