ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ನವೋದಯ ಸ್ವ-ಸಹಾಯ ಸಂಘ ನೆರವಾಗುತ್ತಿದೆ. ಸಮಾಜದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳು ಬಹಳ ಉತ್ತಮವಾಗಿ ಕಾರ್ಯನಿರ್ವಸುತ್ತಿರುವುದರಿಂದ ಸರ್ಕಾರ ಸಂಘಗಳ ಮೇಲೆ ಸರ್ಕಾರ ಸಾಕಷ್ಟು ವಿಶ್ವಾಸ ಇಟ್ಟಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ (ಅ.31): ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ನವೋದಯ ಸ್ವ-ಸಹಾಯ ಸಂಘ ನೆರವಾಗುತ್ತಿದೆ. ಸಮಾಜದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳು ಬಹಳ ಉತ್ತಮವಾಗಿ ಕಾರ್ಯನಿರ್ವಸುತ್ತಿರುವುದರಿಂದ ಸರ್ಕಾರ ಸಂಘಗಳ ಮೇಲೆ ಸರ್ಕಾರ ಸಾಕಷ್ಟು ವಿಶ್ವಾಸ ಇಟ್ಟಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಇಲ್ಲಿನ ನವನಗರದ ನವೋದಯ ಕಾಲನಿಯಲ್ಲಿ ಮಂಗಳೂರಿನ ನವೋದಯ ಗ್ರಾಮೀಣ ವಿಕಾಸ ಚಾರಿಟೇಬಲ್ ಟ್ರಸ್ಟ್ ಹಾಗೂ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಆಯೋಜಿಸಲಾದ ನವೋದಯ ಸ್ವ-ಸಹಾಯ ಸಂಘಗಳ ಬೃಹತ್ ಸಮಾವೇಶ ಮತ್ತು ಸಾಲ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೂತನ ಸ್ವ-ಸಹಾಯ ಸಂಘಗಳನ್ನು ಉದ್ಘಾಟಿಸಿ, ಸಹಕಾರಿ ರಂಗ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ರೈತರಿಗೆ ನೆರವಾಗಿದೆ. ಆರ್ಥಿಕ ಸ್ವಾವಲಂಬನೆ, ಮಹಿಳಾ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಹೆಚ್ಚು ಒತ್ತು ನೀಡುತ್ತಿದೆ. ಸಮಾಜದಲ್ಲಿ ಸ್ತ್ರೀಯರ ಶಕ್ತಿ ಏನೆಂದು ತಿಳಿಯಲು ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಸಾಲ ಪತ್ರ ವಿತರಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉತ್ತರ ಕರ್ನಾಟಕ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ದ.ಕ. ಸಹಕಾರ ಬ್ಯಾಂಕ್ ಸಾಲ ನೀಡುವ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ಕಬ್ಬು ಬೆಳೆಗಾರರಿಗೆ ನೆರವಾಗಿದೆ. ಅಪೆಕ್ಸ್ ಬ್ಯಾಂಕ್‌ನಿಂದ ಬೆಳಗಾವಿ, ವಿಜಯಪುರ, ಧಾರವಾಡದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜೇಂದ್ರಕುಮಾರ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಧಾರವಾಡದಲ್ಲಿ ದಕ್ಷಿಣ ಭಾರತದ ಮೊದಲ ಎಫ್‌ಎಂಸಿಜಿ ಕಾರಿಡಾರ್
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ ಅಧ್ಯಕ್ಷತೆ ವಹಿಸಿ, ಮಹಿಳೆಯರು ಮನೆಯಿಂದ ಹೊರಬರುತ್ತಿರಲಿಲ್ಲ. ಇಂದು ಕಾಲ ಬದಲಾಗುತ್ತಿದೆ. ಅದಕ್ಕೆ ಸ್ವ-ಸಹಾಯ ಸಂಘ ಕಾರಣವಾಗಿದೆ. ನವೋದಯ ಸ್ವ-ಸಹಾಯ ಸಂಘದಲ್ಲಿ ಸುಮಾರು ಶೇ.85ರಷ್ಟುಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು. ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಬೇರೆಯಲ್ಲ. ಕರ್ನಾಟಕ ಒಂದೇ ಆಗಿದೆ. ಹಾಗಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ರೈತರು ತಯಾರಿಸುವ ಸಾವಯವ ಬೆಲ್ಲ ಸೂಕ್ತ ಬೆಲೆ, ಮಾರುಕಟ್ಟೆಒದಗಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಾಮಂಡಳದ ನಿರ್ದೇಶಕ ದೇವಿಪ್ರಸಾದ ಶೆಟ್ಟಿ ಪ್ರಾಸ್ತಾವಿಕವಗಿ ಮಾತನಾಡಿದರು. ಡಾ. ಎಂ.ಎನ್. ರಾಜೇಂದ್ರಕುಮಾರ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ಪ್ರಮುಖರಾದ ಮುತ್ತಣ್ಣ ಯಲಿಗಾರ, ಎಸ್.ವೈ. ಪಾಟೀಲ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕರು ಇದ್ದರು. ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಸ್ವಾಗತಿಸಿದರು. ಉಮಾ ಮಠದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಇದಕ್ಕೂ ಮುನ್ನ ನವನಗರದ ಈಶ್ವರ ದೇವಸ್ಥಾನದಿಂದ ಅಮರಗೋಳದ ಹಾಗೂ ವಿವಿಧೆಡೆ ಮೆರವಣಿಗೆ ನಡೆಯಿತು. ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು.
ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ
ಕೇಂದ್ರ ಸರ್ಕಾರ ಸಹಕಾರ ರಂಗಕ್ಕೆ ಮಹತ್ವ ನೀಡಿದೆ. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹಕಾರ ಇಲಾಖೆ ಸ್ಥಾಪಿಸಿ ಅದರ ಹೊಣೆಯನ್ನು ಗೃಹ ಸಚಿವರಿಗೆ ವಹಿಸಿದ್ದಾರೆ. ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಸಹಕಾರ ರಂಗಗಳ ಉದ್ಯಮ ಬಂದರೆ ಹೆಚ್ಚಿನ ಅನುಕೂಲವಾಗಲಿದೆ. ಮಹಿಳೆಯರು ಬೆಳೆದರೆ ಸಮಾಜ, ದೇಶದ ಪ್ರಗತಿ ಸಾಧ್ಯ.
ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ