ನ.3ಕ್ಕೆ ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನೆ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

By Govindaraj S  |  First Published Oct 31, 2022, 9:59 PM IST

ಭಗವದ್ಗೀತೆ ಅಭಿಯಾನ ಕಳೆದ 15 ವರ್ಷದಿಂದ ನಡೆಸುತ್ತಾ ಬರಲಾಗಿದ್ದು, ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ದೃಷ್ಟಿಯಿಂದ ಅಭಿಯಾನ ಈ ಪ್ರಾರಂಭವಾಯಿತು. ರಾಜ್ಯದಲ್ಲಿ ಏಕಕಾಲದಲ್ಲಿ ಅಭಿಯಾನ ನಡೆಯುತ್ತಿದೆ. 


ವರದಿ: ವರದರಾಜ್ ಏಷ್ಯಾನೆಟ್, ಸುವರ್ಣನ್ಯೂಸ್, ದಾವಣಗೆರೆ

ದಾವಣಗೆರೆ (ಅ.31): ಭಗವದ್ಗೀತೆ ಅಭಿಯಾನ ಕಳೆದ 15 ವರ್ಷದಿಂದ ನಡೆಸುತ್ತಾ ಬರಲಾಗಿದ್ದು, ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ದೃಷ್ಟಿಯಿಂದ ಅಭಿಯಾನ ಈ ಪ್ರಾರಂಭವಾಯಿತು. ರಾಜ್ಯದಲ್ಲಿ ಏಕಕಾಲದಲ್ಲಿ ಅಭಿಯಾನ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ನ.3ರಂದು ಮಧ್ಯಾಹ್ನ 3ಕ್ಕೆ ನಗರದ ಮಾಗನೂರು ಬಸಪ್ಪ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು. 

Latest Videos

undefined

ರಾಷ್ಟ್ರೋತ್ಥಾನ ಶಾಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನ, ಚಾರಿಟೇಬಲ್‌ ಟ್ರಸ್ಟ್ (ರಿ), ಕಡ್ಲೇಬಾಳು ಇವರ ಸಹಯೋಗದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2022 ದಾವಣಗೆರೆ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನೆ ನಡೆಯಲಿದೆ. 

ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಅಭಿಯಾನದಲ್ಲಿ ಶ್ರೀ ಶ್ರೀಮದ್‌ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು,ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.  ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಮುಖ್ಯ ಸಚೇತಕರಾದ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮೇಯರ್ ಜಯಮ್ಮ ಗೋಪಿ ನಾಯಕ್, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌, ಡಿಡಿಪಿಐ ತಿಪ್ಪೇಶಪ್ಪ ಜಿ.ಆರ್ ಆಗಮಿಸಲಿದ್ದಾರೆಂದರು.

ದಾವಣಗೆರೆ: 'ಮದುವೆ ವಯಸ್ಸು ಮುಂದೂಡಿಕೆಯಿಂದ ಸಮಾಜದಲ್ಲಿ ಮಹಿಳಾ ಸಬಲೀಕರಣ'

ಅಭಿಯಾನದ ಅಂಗವಾಗಿ ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ನ.4ರಂದು ದಾವಣಗೆರೆಯಲ್ಲಿ ಬೆಳಗ್ಗೆ 11ಕ್ಕೆ ರಾಜ್ಯ ಮಟ್ಟದ ಮಹಾಸಮರ್ಪಣೆ ಜರುಗಲಿದೆ ಎಂದರು. ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಭಗವದ್ಗೀತೆ ಅಭಿಯಾನ ಕೈಗೊಳ್ಳಲಾಗಿದೆ‌ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಎಸ್.ಆರ್ ಹೆಗಡೆ, ಕುಸುಮ ಶ್ರೇಷ್ಠಿ, ಡಾ.ಬಿ.ಟಿ ಅಚ್ಯುತ್, ಹೆಚ್.ಜಯಣ್ಣ, ವಿನಾಯಕ ರಾನಡೆ, ನಳಿನಿ ಅಚ್ಯುತ್, ವೈ ಶಂಭುಲಿಂಗಪ್ಪ ಉಪಸ್ಥಿತರಿದ್ದರು.

click me!