ಮತ ಚಲಾಯಿಸುವಂತೆ ಪೋಷಕರಿಗೆ ಪತ್ರ ಬರೆದ ಶಾಲಾ ವಿದ್ಯಾರ್ಥಿಗಳು!

By Kannadaprabha News  |  First Published Apr 10, 2023, 7:55 AM IST

ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ಘೋಷಣೆಯಾಗಿದೆ. ಈ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅಂಚೆ ಪತ್ರದ ಮೂಲಕ ಮನವಿ ಮಾಡಿದರು.


  ಮೈಸೂರು :  ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ಘೋಷಣೆಯಾಗಿದೆ. ಈ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅಂಚೆ ಪತ್ರದ ಮೂಲಕ ಮನವಿ ಮಾಡಿದರು.

ಹೌದು, ತಾಲೂಕು ಪಂಚಾಯತ್‌ ಹಾಗೂಲಾಖೆಯ ಸಹಯೋಗದಲ್ಲಿ ಸ್ವೀಪ್‌ ಚಟುವಟಿಕೆಯಡಿ ವಿಭಿನ್ನ ಕಾರ್ಯಕ್ರಮವಾಗಿ ನಡೆಸಲಾದ ಅಂಚೆ ಚೀಟಿ ಅಭಿಯಾನದಲ್ಲಿ ಶಾಲಾ ಮಕ್ಕಳು ಭಾಗವಹಿಸಿ, ಪತ್ರ ಬರೆಯುವ ಮೂಲಕ ತಮ್ಮ ಪೋಷಕರಿಗೆ ವಿನಂತಿಸಿಕೊಂಡರು.

Latest Videos

undefined

ಪತ್ರದಲ್ಲಿ ಪ್ರೀತಿಯ ಅಪ್ಪ, ಅಮ್ಮನಿಗೆ ಸಮಸ್ಕಾರಗಳು. ನಾವೀಗ ಕರ್ನಾಟಕ ವಿಧಾನಸಭಾ ಚುನಾವಣಾ ಹಬ್ಬಕ್ಕೆ ಸಜ್ಜಾಗುತ್ತಿದ್ದೇವೆ. ಸದೃಢ ದೇಶದ ನಿರ್ಮಾಣಕ್ಕಾಗಿ ಇದೇ ಮೇ 10 ರಂದು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಂವಿಧಾನದ ಆಶಯವನ್ನು ಸಾಕಾರಗೊಳಿಸಿ ಎಂದು ವಿದ್ಯಾರ್ಥಿಗಳು ಕೋರಿದ್ದಾರೆ.

ಮೈಸೂರು ತಾಲೂಕಿನ ಜಯಪುರ, ನಾಗವಾಲ, ಆಲನಹಳ್ಳಿ, ಹಾರೋಹಳ್ಳಿ, ಎಂಬಿ ಹಳ್ಳಿ, ದೊಡ್ಡಮಾರಗೌಡನಹಳ್ಳಿ, ವರುಣ, ಹಾರೋಹಳ್ಳಿ (ಮೆ) ಸೇರಿದಂತೆ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗಿದೆ.

ತಾಪಂ ಇಒ ಎಚ್‌.ಡಿ. ಗಿರೀಶ್‌ ಅವರ ನೇತೃತ್ವದಲ್ಲಿ ಅಭಿಯಾನವನ್ನು ನಡೆಸಲಾಗಿದ್ದು, ಪಿಡಿಒಗಳು ಮತ್ತು ಶಾಲಾ ಶಿಕ್ಷಕರರು ಮತದಾನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಸ್ಥಳೀಯ ಮುಖಂಡರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ರಾಯಚೂರು (ಏ.10): ರಾಜ್ಯದ ಪ್ರತಿಯೊಂದು ಹಳ್ಳಿ- ಹಳ್ಳಿಯಲ್ಲಿ ಈಗ ಚುನಾವಣೆ ಗಾಳಿ ಬೀಸಲು ಶುರುವಾಗಿದೆ. ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕೆಲ ಪಕ್ಷದ ನಾಯಕರು ಅಂತು ಈ ಬಾರಿ ಗೆಲುವು ಸಾಧಿಸಲ್ಲೇ ಬೇಕು ಎಂದು ಪಣತೊಟ್ಟು ಮನೆ- ಮನೆಗೆ ಹೋಗಿ ಮತಯಾಚನೆ ನಡೆಸಿದ್ದಾರೆ. ಕೆಲ ನಾಯಕರು ನಾಮಪತ್ರ ಸಲ್ಲಿಕೆ ವೇಳೆಯೇ ಶಕ್ತಿ ಪ್ರದರ್ಶನ ‌ಮಾಡಬೇಕು. ಎದುರಾಳಿಗೆ ನಡುಕ ಹುಟ್ಟುವಂತೆ ಮಾಡಬೇಕು ‌ಎಂಬ ಕಾರಣಕ್ಕೆ ಹಳ್ಳಿ- ಹಳ್ಳಿಗೆ ತೆರಳಿ ನಾಮಪತ್ರಕ್ಕೆ ಬನ್ನಿ ಎಂದು ಆಹ್ವಾನ ನೀಡಲು ಮುಂದಾಗಿದ್ದಾರೆ. ಹೀಗಾಗಿ ಗ್ರಾಮ ಮಟ್ಟದ ಮುಖಂಡರಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಹಳ್ಳಿಯ ಮತಬ್ಯಾಂಕ್ ಗಟ್ಟಿಯಾಗಲು ಗ್ರಾಮದ ಮುಖಂಡರೇ ಆಧಾರ: ಇಷ್ಟು ದಿನಗಳ ಕಾಲ ರಾಜಧಾನಿ, ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಿಗೆ ಸೀಮಿತವಾದ ನಾಯಕರು ಈಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರು ಯಾರು, ಮುಖಂಡರು ಯಾರು ಎಂಬುವುದು ತಿಳಿದುಕೊಂಡು ಅವರನ್ನು ಭೇಟಿ ‌ಮಾಡುವುದು ಶುರು ಮಾಡಿದ್ದಾರೆ. ಅಲ್ಲದೇ ಗ್ರಾಮ ಮಟ್ಟದ ಮುಖಂಡರ ಸಮಸ್ಯೆ ಆಲಿಸಿದಂತೆ ಮಾಡಿ ಅವರಿಗೆ ಜವಾಬ್ದಾರಿ ನೀಡುತ್ತಿದ್ದಾರೆ. ಕೆಲ ನಾಯಕರು ಊರಿಗೆ ಬಂದ್ರೂ ಹಳೆಯ ಕಾರ್ಯಕರ್ತರನ್ನ ಭೇಟಿ ‌ಮಾಡದೇ ಹೋಗಿದ್ರೆ, ಅಂತಹ ಮುಖಂಡರು ಮುನಿಸಿಕೊಂಡು ಬೇರೆ ಪಕ್ಷಗಳಿಗೆ ಸೇರ್ಪಡೆ ಆಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಈಗ ಸರ್ವೇ ಸಾಮಾನ್ಯ ಕಾಣಬಹುದಾಗಿದೆ. 

ಕೋಲಾರದಲ್ಲಿ ಇಂದು ಬೃಹತ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಎಚ್.ಡಿ.ಕುಮಾರಸ್ವಾಮಿ ಭಾಗಿ

ಗ್ರಾಮದ ಮುಖಂಡರೇ ರಾಜಕೀಯ ನಾಯಕರ ಟಾರ್ಗೆಟ್: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಸ್ಪರ್ಧಿಗಳ ಕಣ್ಣು ಈಗ ಗ್ರಾಮಗಳ ಮುಖಂಡ ಮೇಲೆ ಬಿದ್ದಿದೆ. ಇದರಿಂದಾಗಿ ರಾಜಕೀಯ ನಾಯಕರು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿ ಅವರ ನೇತೃತ್ವದಲ್ಲಿ ಪ್ರಚಾರಕ್ಕೆ ಹೋಗುವುದು ಕಾಣಬಹುದಾಗಿದೆ. ಪ್ರತಿ ಗ್ರಾಮಗಳಲ್ಲೂ ಪಕ್ಷಕ್ಕೊಬ್ಬರು ಮುಖಂಡರು ಇರುತ್ತಾರೆ. ಅವರು ತಮ್ಮದೇ ಆದ ಮತದಾರರನ್ನ ಗ್ರಾಮದಲ್ಲಿ ಹೊಂದಿರುತ್ತಾರೆ. ಇದನ್ನ ಅರಿತ ಆಕಾಂಕ್ಷಿಗಳು ಅವರನ್ನೇ ಟಾರ್ಗೆಟ್ ಮಾಡಿ ಅವರ ಜೊತೆಗೆ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

click me!