ದಲಿತರು ಮತ್ತು ಹಿಂದುಳಿದವರ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಕೆ.ಆರ್. ನಗರ : ದಲಿತರು ಮತ್ತು ಹಿಂದುಳಿದವರ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಬೆಂಬಲಿತ ಆದಿ ಜಾಂಬವ ಸಮಾಜದ ಮುಖಂಡರು ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ದಲಿತರು ಸ್ವಾತಂತ್ರ್ಯವಾಗಿ ಬದುಕಿ ಉತ್ತಮ ಜೀವನ ನಡೆಸಲು ಕಾರಣವಾಗಿರುವ ಪಕ್ಷವನ್ನು ನಾವು ನಿರಂತರವಾಗಿ ಬೆಂಬಲಿಸಬೇಕು ಎಂದರು.
undefined
ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಡಿ. ರವಿಶಂಕರ್ ಅವರ ಗೆಲುವು ನಿಶ್ಚಿತವಾಗಿದ್ದು ಅವರು ಹೆಚ್ಚಿನ ಬಹುಮತದಿಂದ ಆಯ್ಕೆಯಾಗುವಂತೆ ನಾವೆಲ್ಲರೂ ಕೆಲಸ ಮಾಡಿ ಗೆಲುವಿನ ದಡ ಸೇರಿಸಬೇಕು ಎಂದು ಕರೆ ನೀಡಿದರು.
ಸಮಸ್ತ ಆದಿ ಜಾಂಬವ ಸಮಾಜದ ಬಾಂಧವರು ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಹಿಂದುಳಿದವರ ಪರವಾದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ತಿಳಿಸಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಬೇಕು ಎಂದರು.
ನಮಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ತುಂಬಿದ ಪಕ್ಷದ ಹಿಂದೆ ನಿಲ್ಲಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಈ ವಿಚಾರವನ್ನು ಅರಿತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಪಕ್ಷದ ಗೆಲುವಿಗೆ ಕಂಕಣಬದ್ಧರಾಗಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ತೆರಳಿ ಪಕ್ಷದ ಪರವಾಗಿ ಮತ ಯಾಚಿಸುವುದಾಗಿ ಹೇಳಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಮುಂದಿನ 30 ದಿನಗಳಲ್ಲಿ ಎಲ್ಲರೂ ಯೋಧರಂತೆ ಕೆಲಸ ಮಾಡಿ ಪ್ರತಿ ಮತದಾರರ ಮನ ಮುಟ್ಟುವಂತೆ ಪಕ್ಷದ ಯೋಚನೆ ಮತ್ತು ಯೋಜನೆಗಳನ್ನು ತಿಳಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಈ ಬಾರಿ ಜನತೆ ಬದಲಾವಣೆ ಬಯಸಿದ್ದು ಅದು ನಾವು ಪ್ರಚಾರಕ್ಕೆ ಹೋದಾಗ ಕಂಡುಬರುತ್ತಿದ್ದು ಕಾಂಗ್ರೆಸ್ ಗೆಲುವು ನಿಶ್ಚಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ತ್ಯಜಿಸಿ 30ಕ್ಕೂ ಅಧಿಕ ಮಂದಿ ಆದಿ ಜಾಂಬವ ಸಮಾಜದ ಮುಖಂಡರು ಕಾಂಗ್ರೆಸ್‌ಗೆ ಸೇರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್ ಸೇರಿದಂತೆ ಸಮಾಜದ ಇತರ ಮುಖಂಡರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುಣಸೂರು ಬಸವಣ್ಣ, ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ. ಲೋಕೇಶ್, ¨ಸಂಸ ಅಧ್ಯಕ್ಷ ಮಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಗ್ರಾಪಂ ಸದಸ್ಯರಾದ ಹರೀಶ್, ಅಣ್ಣಯ್ಯ, ರಾಜೇಶ್, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಪ.ಜಾತಿ ಘಟಕದ ಅಧ್ಯಕ್ಷ ಕಂಠಿ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್ ಮೊದಲಾದವರು ಇದ್ದರು.