ಮುರುಘಾ ಮಠಕ್ಕೆ ಸರ್ಕಾರದ ನೂತನ ಆಡಳಿತಾಧಿಕಾರಿ ಎಸ್.ಬಿ ವಸ್ತ್ರದ್ ಆಗಮನ

By Ravi JanekalFirst Published Dec 15, 2022, 8:19 PM IST
Highlights

ಮುರುಘಾ ಮಠಕ್ಕೆ ಮೊದಲ ಬಾರಿಗೆ ಆಗಮಿಸಿದ ಸರ್ಕಾರದಿಂದ ನೇಮಕವಾದ ನೂತನ ಆಡಳಿತಾಧಿಕಾರಿ ಎಸ್.ಬಿ ವಸ್ತ್ರದ್ ಮೊದಲು ಮುರುಘಾ ಮಠದ ಕರ್ತೃ ಗದ್ದುಗೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಮರುಘಾ ಮಠದ ಪ್ರಸ್ತುತ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳನ್ನು ಭೇಟಿ ಮಾಡಿ ಕೆಲಕಾಲ ಕುಶಲೋಪರಿ ವಿಚಾರಿಸಿದರು.‌

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

 

ಚಿತ್ರದುರ್ಗ (ಡಿ.15) : ಕಳೆದ ಮೂರು ತಿಂಗಳುಗಳಿಂದ‌ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅಂದಿನಿಂದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಒತ್ತಾಯ ಒಂದೇ ಆಗಿತ್ತು. ಮುರುಘಾ ಮಠಕ್ಕೆ ಸರ್ಕಾರ ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು, ಅವರ ಆಸೆ ಕೊನೆಗೂ ಈಡೇರಿದ್ದು ಇಂದು ನಿವೃತ್ತ IAS ಅಧಿಕಾರಿ ಎಸ್. ಬಿ ವಸ್ತ್ರದ್ ಅಧಿಕಾರ ಸ್ವೀಕರಿಸಿಕೊಂಡರು. ಈ ಕುರಿತು ಒಂದು ವರದಿ ಇಲ್ಲಿದೆ

ಚಿತ್ರದುರ್ಗದ‌ ಪ್ರತಿಷ್ಠಿತ ಮುರುಘಾ ಮಠದ ಮುರುಘಾ ಶ್ರೀ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿ ಮೂರು ತಿಂಗಳುಗಳು ಕಳೆಯುತ್ತ ಬಂತು. ಈ ಹಿನ್ನೆಲೆಯಲ್ಲಿ ಮುರುಘಾ ಮಠದಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿ ಆಗ್ತಿಲ್ಲ. ಕೂಡಲೇ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಸರ್ಕಾರದಿಂದಲೇ ನೂತನವಾಗಿ ಮುರುಘ ಮಠಕ್ಕೆ ಆಡಳಿತಾಧಿಕಾರಿ ನೇಮಕ‌ ಮಾಡಬೇಕು ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖ ಮುಖಂಡರು ಹಾಗೂ ಮಾಜಿ ಸಚಿವ ಹೆಚ್ ಏಕಾಂತಯ್ಯ ನೇತೃತ್ವದಲ್ಲಿ ಎರಡು ಸರಣಿ ಸಭೆಗಳು ನಡೆದಿದ್ದವು. ಇಷ್ಟೇ ಅಲ್ಲದೇ ಸಮದಾಯದ ಮುಖಂಡರು ಖುದ್ದು ಬೆಂಗಳೂರಿಗೆ ತೆರಳಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದೆಲ್ಲದರ ಪರಿಣಾಮವಾಗಿ ಸದ್ಯ ಮುರುಘಾ ಮಠಕ್ಕೆ ಸರ್ಕಾರದ ಆದೇಶದಂತೆಯೇ ನೂತನವಾಗಿ ಆಡಳಿತಾಧಿಕಾರಿ ನೇಮಕವನ್ನು ಮಾಡಿದ್ದಾರೆ. ನಿವೃತ್ತ IAS ಅಧಿಕಾರಿ ಆಗಿರುವ ಎಸ್. ಬಿ ವಸ್ತ್ರದ್ ಅವರನ್ನು ಸರ್ಕಾರ ನೇಮಕ ಮಾಡಿದ್ದು,‌ ಇಂದು ಸಂಜೆ ಮುರುಘಾ ಮಠಕ್ಕೆ ಆಗಮಿಸಿ ಅಧಿಕಾರ ಸ್ವೀಕಾರ ಮಾಡಿಕೊಂಡರು.

Chitradurga: ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್. ವಸ್ತ್ರದ್‌ ನೇಮಕ

ಇನ್ನು ಮುರುಘಾ ಮಠಕ್ಕೆ ಮೊದಲ ಬಾರಿಗೆ ಆಗಮಿಸಿದ ಸರ್ಕಾರದಿಂದ ನೇಮಕವಾದ ನೂತನ ಆಡಳಿತಾಧಿಕಾರಿ ಎಸ್.ಬಿ ವಸ್ತ್ರದ್ ಮೊದಲು ಮುರುಘಾ ಮಠದ ಕರ್ತೃ ಗದ್ದುಗೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಮರುಘಾ ಮಠದ ಪ್ರಸ್ತುತ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳನ್ನು ಭೇಟಿ ಮಾಡಿ ಕೆಲಕಾಲ ಕುಶಲೋಪರಿ ವಿಚಾರಿಸಿದರು.‌ ಬಳಿಕ ಮಾದ್ಯಮಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಆದೇಶದಂತೆ ಮುರುಘಾ ಮಠಕ್ಕೆ‌ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದೀನಿ.‌ ಈ ಹಿಂದೆ ಮುರುಘಾ ಶ್ರೀ ಜೈಲ್‌ನಲ್ಲಿ ಇದ್ದುಕೊಂಡೇ, ಕೆಲವರಿಗೆ ಜಿಪಿಎ ನೀಡಿರುವ ಬಗ್ಗೆ ಪರಿಶೀಲನೆ ನಡೆಸಬೇಕಿದೆ. SJM ವಿದ್ಯಾಸಂಸ್ಥೆ ಗೆ ಕಾರ್ಯದರ್ಶಿ, ಹಾಗೂ ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭು ಶ್ರೀ ವಿಚಾರದ ಬಗ್ಗೆಯೂ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ‌‌ ಮುರುಘಾ ಮಠದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಲಾಗುವುದು ಎಂದು ಭರವಸೆ ನೀಡಿದರು.

ಒಟ್ಟಾರೆಯಾಗಿ ಮುರುಘಾ ಶ್ರೀ ಪೀಠತ್ಯಾಗ ಮಾಡಬೇಕು ಹಾಗೂ ಕೂಡಲೇ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂಬುವ ಸಮುದಾಯದ ಮುಖಂಡರ ಆಸೆ ಕೊನೆಗೂ ಈಡೇರಿದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಅಧಿಕಾರ ನಡೆಸಿಕೊಂಡು ಹೋಗ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕಕ್ಕೆ ವೀರಶೈವ ಮಹಾಸಭಾ ಆಗ್ರಹ: 30 ಜಿಲ್ಲೆಗಳಿಂದ ಪಾದಯಾತ್ರೆ ನಿರ್ಣಯ

click me!