ಪುಟ್ಟ ಮಗು ಸಾತ್ವಿಕ್ ಬದುಕಿ ಬರಲೆಂದು ಸಿದ್ದಲಿಂಗೇಶ್ವರ ಪಾದಗಳಿಗೆ ಬೇಡಿಕೊಂಡಿದ್ದ ಭೀಮಾತೀರದ ಮುಸ್ಲಿಂ ಯುವಕ ಮಸ್ತಾನ್ ಮಕಾನದಾರ ದಂಡುವತ್ತು ರಂಜಾನ್ ಉಪವಾಸದಲ್ಲೂ ಲಚ್ಯಾಣ ಸಿದ್ದಲಿಂಗ ಮಹಾರಾಜರಿಗೆ ಹರಕೆಯನ್ನು ತೀರಿಸಿ ಭಾವೈಕ್ಯತೆ ಮೆರೆದಿದ್ದಾರೆ.v
- ಷಡಕ್ಷರಿ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.05): ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಮುಜಗೊಂಡ ಅವರ ತೋಟದಲ್ಲಿ 2 ವರ್ಷದ ಬಾಲಕ ಆಕಸ್ಮಿಕವಾಗಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ. 20 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿ ನಿರಂತರವಾಗಿ ಯಾತನೆ ಅನುಭವಿಸಿದ್ದ 2 ವರ್ಷದ ಸಾತ್ವಿಕ ವಿಧಿಯನ್ನೆ ಗೆದ್ದು ಹೊರ ಬಂದಿದ್ದಾರೆ.
ಸಾತ್ವಿಕ ಕೊಳವೆ ಬಾವಿಯಲ್ಲಿ ಬಿದ್ದಾಗ ರಾಜ್ಯದ ಜನರು ಸಾತ್ವಿಕ್ ಬದುಕಿ ಬರುವಂತೆ ದೇವರಲ್ಲಿ ಮೊರೆ ಇಟ್ಟಿದ್ದರು. ಅದೆಷ್ಟೋ ಜನರು ಸಾತ್ವಿಕ್ ಬದುಕಿ ಬಂದರೆ ದೀಡ್ ನಮಸ್ಕಾರ (ದಂಡವತ್) ಹಾಕುವ ಹರಕೆ ತೊಟ್ಟಿದ್ದರು. ಅದ್ರಂಗೆ ಸಾತ್ವಿಕ ಬದುಕಿ ಬಂದ ಬೆನ್ನಲ್ಲೇ ಹರಕೆ ತೊಟ್ಟವರು ಹರಕೆ ತೀರಿಸುತ್ತಿದ್ದಾರೆ.
20 ಗಂಟೆ ಬಳಿಕ ಕೊಳವೆ ಬಾವಿಯಿಂದ ರಕ್ಷಿಸಿದ 2 ವರ್ಷದ ಮಗು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ!
ಸಾತ್ವಿಕ್ ಗಾಗಿ ಹರಕೆ ತೊಟ್ಟಿದ್ದ ಐರಸಂಗದ ಯುವಕರು!
ಕೊಳವೆ ಬಾವಿಯಿಂದ ಮಗು ಸಾತ್ವಿಕ್ ಸುರಕ್ಷಿತವಾಗಿ ಬದುಕಿ ಬರಲೆಂದು ಐರಸಂಗ ಗ್ರಾಮದ ಮಹೇಶ್ ಹಾಗೂ ಅಶೋಕ ಲಚ್ಯಾಣ ಗ್ರಾಮದ ಆರಾಧ್ಯದೈವ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತಿದ್ದರು. ಪ್ರಾರ್ಥನೆಯಂತೆ ಕೊಳವೆಬಾವಿಯಿಂದ ಸಾತ್ವಿಕ್ ಸುರಕ್ಷಿತವಾಗಿ ಹೊರ ಬಂದ ಹಿನ್ನೆಲೆ ಐರಸಂಗ ಗ್ರಾಮದಿಂದ ಲಚ್ಯಾಣದ ಸಿದ್ದಲಿಂಗ ಮಹಾರಾಜರ ದೇಗುಲದವರೆಗೆ ಸುಮಾರು 5 ಕಿ.ಮೀ ದೀಡ್ ನಮಸ್ಕಾರ ಸೇವೆ ಸಲ್ಲಿಸಿ ಯುವಕರು ಹರಕೆ ತೀರಿಸಿದರು.
ಹರಕೆ ತೀರಿಸಿದ ಮುಸ್ಲಿಂ ಯುವಕ ಮಸ್ತಾನ್!
ಪುಟ್ಟ ಮಗು ಸಾತ್ವಿಕ್ ಬದುಕಿ ಬರಲೆಂದು ಸಿದ್ದಲಿಂಗೇಶ್ವರ ಪಾದಗಳಿಗೆ ಬೇಡಿಕೊಂಡಿದ್ದ ಭೀಮಾತೀರದ ಮುಸ್ಲಿಂ ಯುವಕ ಮಸ್ತಾನ್ ಮಕಾನದಾರ ದಂಡುವತ್ತು ರಂಜಾನ್ ಉಪವಾಸದಲ್ಲೂ ಲಚ್ಯಾಣ ಸಿದ್ದಲಿಂಗ ಮಹಾರಾಜರಿಗೆ ಹರಕೆಯನ್ನು ತೀರಿಸಿ ಭಾವೈಕ್ಯತೆ ಮೆರೆದಿದ್ದಾರೆ. ಭೀಮಾನದಿಯಿಂದ ಲಚ್ಯಾಣ ಸಿದ್ದಲಿಂಗ ಮಹಾರಾಜರ ಮಠದವರಿಗೂ ಮಸ್ತಾನ್ ಮಖಾನದಾರ್ ದಂಡುವತ್ತು ರಂಜಾನ್ ಉಪವಾಸದಲ್ಲೂ ಸುಡು ಬಿಸಿಲನ್ನು ಲೆಕ್ಕಿಸದೇ ದೀಡ ನಮಸ್ಕಾರ ಹಾಕಿ ಭಾವೈಕ್ಯತೆಯ ಭಕ್ತಿ ಮೆರೆದಿದ್ದಾರೆ.
ಸಾವು ಗೆದ್ದ ಸಾತ್ವಿಕ್ ಇನ್ಮುಂದೆ ಲಚ್ಯಾಣ ಸಿದ್ಧಲಿಂಗ, ಮಗುವಿಗಾಗಿ ಮರುಗಿದ ಶ್ವಾನ!
ಮುಖಂಡ ಕಾಸೂಗೌಡ ಬಿರಾದಾರಿಂದ ಹರಕೆ ಸಲ್ಲಿಕೆ!
ಸಾತ್ವಿಕ್ ಕೊಳವೆಬಾವಿಯಿಂದ ಸುರಕ್ಷಿತವಾಗಿ ಬದುಕಿಬರಲೆಂದು ಇಂಡಿ ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠಕ್ಕೆ ನಡುರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಮಗು ಸಾತ್ವಿಕ ಬದುಕಿಬಂದ ಹಿನ್ನೆಲೆ ಮುಖಂಡ ಕಾಸೂಗೌಡ ಬಿರಾದಾರ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠದವರೆಗೂ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ಮುಟ್ಟಿಸಿದರು.