ಕಾಫಿನಾಡಲ್ಲಿ ನಿರ್ಗತಿಕಳಾಗಿ ಅಲೆಯುತ್ತಿದ್ದ ಆಂಧ್ರದ ವೃದ್ಧೆ ವರ್ಷದ ಬಳಿಕ ಮರಳಿ ಮನೆಗೆ!

By Ravi Janekal  |  First Published Apr 5, 2024, 7:54 PM IST

ಎಲ್ಲಾ ಇದ್ದು ಯಾರೂ ಇಲ್ಲದಂತೆ ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಸುತ್ತಮುತ್ತ ನಿರ್ಗತಿಕಳಂತೆ ಅಲೆಯುತ್ತಿದ್ದ 72 ವರ್ಷದ ಆಂಧ್ರ ಪ್ರದೇಶದ ಮದನಪಲ್ಲಿ ತಾಲೂಕಿನ ವೃದ್ಧೆ ಅಚ್ಚಮ್ಮಳನ್ನ ಚಿಕ್ಕಮಗಳೂರಿನ ತಹಶೀಲ್ದಾರ್, ಮಹಿಳಾ ಠಾಣೆ ಪೊಲೀಸರು, ಸಹನಾ ರೂಬಿನ್ ಸಾಮಾಜಿಕ ಸೇವಾ ಸಂಸ್ಥೆ ವೃದ್ಧೆಯನ್ನ ಮರಳಿ ಗೂಡಿಗೆ ಸೇರಿಸಿದೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.5): ಎಲ್ಲಾ ಇದ್ದು ಯಾರೂ ಇಲ್ಲದಂತೆ ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಸುತ್ತಮುತ್ತ ನಿರ್ಗತಿಕಳಂತೆ ಅಲೆಯುತ್ತಿದ್ದ 72 ವರ್ಷದ ಆಂಧ್ರ ಪ್ರದೇಶದ ಮದನಪಲ್ಲಿ ತಾಲೂಕಿನ ವೃದ್ಧೆ ಅಚ್ಚಮ್ಮಳನ್ನ ಚಿಕ್ಕಮಗಳೂರಿನ ತಹಶೀಲ್ದಾರ್, ಮಹಿಳಾ ಠಾಣೆ ಪೊಲೀಸರು, ಸಹನಾ ರೂಬಿನ್ ಸಾಮಾಜಿಕ ಸೇವಾ ಸಂಸ್ಥೆ ವೃದ್ಧೆಯನ್ನ ಮರಳಿ ಗೂಡಿಗೆ ಸೇರಿಸಿದೆ. 

Tap to resize

Latest Videos

undefined

ವೃದ್ಧೆ ಹಲವು ದಿನಗಳಿಂದ ಚಿಕ್ಕಮಗಳೂರು ತಾಲ್ಲೂಕು ಕಚೇರಿ ಬಳಿ ರಸ್ತೆ ಬದಿ ಬಿದ್ದ ಕಸವನ್ನೆಲ್ಲಾ ಒಂದು ಗೂಡಿಸುತ್ತಾ, ಭಿಕ್ಷೆ ಬೇಡಿ ಜೀವನ ಮಾಡುತ್ತಾ ರಸ್ತೆ ಬದಿಯಲ್ಲೇ ಮಲಗುತ್ತಿದ್ದರು. ಇದನ್ನ ಕಂಡ ತಹಶೀಲ್ದಾರ್ ಅವರನ್ನ ಸಹನಾ ರೂಬಿನ್ ಟ್ರಸ್ಟ್ ಅವರಿಗೆ ಆಕೆಯನ್ನ ಇಟ್ಟುಕೊಳ್ಳಲು ಹೇಳಿದ್ದರು. ರೂಬಿನ್ ಟ್ರಸ್ಟ್ ಆಕೆಗೆ ಊಟ-ಬಟ್ಟೆ ಕೊಟ್ಟು ಆಶ್ರಯ ನೀಡಿದ್ದರು. 

ಬತ್ತಿ ಹೋದ ಹೇಮಾವತಿ; ನೀರಿನ ಮೂಲಗಳೆಲ್ಲ ಖಾಲಿ ಖಾಲಿ, ಆತಂಕದಲ್ಲಿ ಕಾಫಿ ಬೆಳೆಗಾರರು

ವೃದ್ಧೆಯನ್ನು ವಿಚಾರಿಸಿದಾಗ ಆಂಧ್ರ ಪ್ರದೇಶದ ಮದನಪಲ್ಲಿ ಜಿಲ್ಲೆಯ ವಾಸಿ ಎಂದು ತಿಳಿದುಬಂದಿದ್ದು ಅವರಿಗೆ 2 ಗಂಡು ಮಕ್ಕಳು, 2 ಹೆಣ್ಣುಮಕ್ಕಳು ಇರುವುದಾಗಿ ತಿಳಿಸಿದ್ದಾರೆ. ಕನ್ನಡ ಬಾರದ ಅವರು ತೆಲುಗು ಮಾತನಾಡುತ್ತಿದ್ದು. ಯಾವುದೇ ಅನಾರೋಗ್ಯವಾಗದೆ ಆರೋಗ್ಯವಾಗಿದ್ದ ವೃದ್ಧೆಯನ್ನ ಮಹಿಳಾ ಠಾಣೆ ಪೊಲೀಸರು, ತಹಶೀಲ್ದಾರ್ ಹಾಗೂ ರೂಬಿನ್ ಟ್ರಸ್ಟ್ ಮದನಪಲ್ಲಿ ಜಿಲ್ಲೆಯ ಅವರ ಮಕ್ಕಳನ್ನ ಸಂಪರ್ಕಿಸಿ ಅವರಿಗೆ ಒಪ್ಪಿಸಿದ್ದಾರೆ. ಕಳೆದೊಂದು ವರ್ಷದ ಹಿಂದೆ ಆಂಧ್ರದ ಮದನಪಲ್ಲಿಯಲ್ಲಿ ವೃದ್ಧೆ ನಾಪತ್ತೆಯಾಗಿದ್ದ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು. ಕಳೆದೊಂದು ವರ್ಷದಿಂದ ಕಾಣೆಯಾಗಿದ್ದ ವೃದ್ಧೆ ಇದೀಗ ಕುಟುಂಬದೊಂದಿಗೆ ಸೇರಿದ್ದಾರೆ.

click me!