ಕುಂಬಳಕಾಯಿ ಹಾಗೂ ಕುಡುಗೋಲು ಎರಡೂ ಈಗ ಸಚಿವ ಶ್ರೀರಾಮುಲು ಅವರ ಕೈಯಲ್ಲೇ ಇದೆ| ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ತಲಾ 100 ಎಂಜಿ ಮಾತ್ರೆ ಇದ್ದಂತೆ| ಇಬ್ಬರೂ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಮೀಸಲಾತಿ ಪಡೆಯುವುದೇನೂ ಕಷ್ಟವಾಗುವುದಿಲ್ಲ ಎಂದ ಸತೀಶ್ ಜಾರಕಿಹೊಳಿ|
ದಾವಣಗೆರೆ(ಫೆ.10): ಮೀಸಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ನಮ್ಮ ಸರ್ಕಾರವಿದ್ದಾಗಲೇ ಮಾಡಬೇಕಿತ್ತು. ಆದರೆ, ಈ ಕೆಲಸ ಮಾಡದ ಕಾರಣಕ್ಕೆ ಸಮಾಜದವರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಲ್ಲಿಯ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಕುಂಬಳಕಾಯಿ ಹಾಗೂ ಕುಡುಗೋಲು ಎರಡೂ ಈಗ ಸಚಿವ ಶ್ರೀರಾಮುಲು ಅವರ ಕೈಯಲ್ಲೇ ಇದೆ. ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ತಲಾ 100 ಎಂಜಿ ಮಾತ್ರೆ ಇದ್ದಂತೆ. ಇಬ್ಬರೂ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಮೀಸಲಾತಿ ಪಡೆಯುವುದೇನೂ ಕಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ 'ಹಿಂದ' ಹೋರಾಟ: ಜಾರಕಿಹೊಳಿ ಪ್ರತಿಕ್ರಿಯೆ
ಇಬ್ಬರು ಸಚಿವರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಿ. ನಾವೂ ಸಹ ನಿಮ್ಮೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.