ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಮರಾಠಾ ಮತ್ತು ಹಿಂದೂ ಸಮಾಜದ ವಿರೋಧಿ ಅಲ್ಲ. ಆದರೆ ಬಿಜೆಪಿ, ಆರ್‌ಎಸ್‌ಎಸ್‌ನವರು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಷ್ಯಡ್ಯಂತ್ರ ರೂಪಿಸಿ, ದ್ವೇಷ ರಾಜಕಾರಣ ಮಾಡುತ್ತಿದ್ದು, ಇದನ್ನು ಮರಾಠಾ ಸಮಾಜದವರು ಸಹಿಸಲ್ಲ ಎಂದು ಮರಾಠಾ ಸಮಾಜದ ನೂರಾರು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಡಿ.23): ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಮರಾಠಾ ಮತ್ತು ಹಿಂದೂ ಸಮಾಜದ ವಿರೋಧಿ ಅಲ್ಲ. ಆದರೆ ಬಿಜೆಪಿ, ಆರ್‌ಎಸ್‌ಎಸ್‌ನವರು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಷ್ಯಡ್ಯಂತ್ರ ರೂಪಿಸಿ, ದ್ವೇಷ ರಾಜಕಾರಣ ಮಾಡುತ್ತಿದ್ದು, ಇದನ್ನು ಮರಾಠಾ ಸಮಾಜದವರು ಸಹಿಸಲ್ಲ ಎಂದು ಮರಾಠಾ ಸಮಾಜದ ನೂರಾರು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸತೀಶ್ ಜಾರಕಿಹೊಳಿಯವರು ಸದಾ ಮರಾಠಾ ಸಮುದಾಯದ ಸೇರಿದಂತೆ ಎಲ್ಲಾ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರು ಯಾವುದೇ ಜಾತಿಗೆ ಇದುವರೆಗೂ ಅನ್ಯಾಯ ಮಾಡಿಲ್ಲ. ಆದರೆ ಶಾಸಕ ಸತೀಶ್ ಜಾರಕಿಹೊಳಿ ಅವರು ಮರಾಠ ಸಮುದಾಯದ ವಿರೋಧಿ ಇದ್ದಾರೇ ಎಂದು ಯಮಕನಮರಡಿ ಕ್ಷೇತ್ರದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಈ ಸಂದರ್ಭದಲ್ಲಿ ಮರಾಠ ಸಮಾಜ ಮುಖಂಡರಾದ ಅರುಣ ಕಟಾಂಬಳೆ, ಬಾಹುರಾವ್ ಗಡ್ಕರಿ, ಆನಂದ ಪಾಟೀಲ್, ಮನೋಹರ ಹುಕ್ಕೇರಿಕರ್, ಸಂದೀಪ್ ಜಕ್ಕಾಣೆ, ಸಾಗರ ಪಿಂಗಟ್, ಚಂದ್ರಕಾಂತ ದುಡುಮ್, ಸಿದ್ದರಾಯ ಗವಿ, ಅಣ್ಣು ಕಟಾಂಬಳೆ, ವಿಜಯ ಹೊನಮನೆ, ನಾಗೇಶ ಪಾಟೀಲ್, ವೀರಭದ್ರ ಮುಂಗಾರಿ, ರಾಮಾ ಕಡೊಲಕರ್ ಸೇರಿದಂತೆ ನೂರಾರು ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು.
2ಎ ಮೀಸಲಾತಿಗಾಗಿ ಮರಾಠಾ ಸಮುದಾಯ ಆಗ್ರಹ
ಮರಾಠಾ ಸಮಾಜ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಮರಾಠಾ ಸಮುದಾಯದವರು ಕೊಂಡಸಕೊಪ್ಪದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಮರಾಠಾ ಸಮುದಾಯವು ರಾಜ್ಯದಲ್ಲಿ ಆರ್ಥಿಕ, ಶೆಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು ಅದಕ್ಕಾಗಿ ಐದು ವರ್ಷಗಳಿಂದ ಸಮುದಾಯವನ್ನು 3ಬಿ ದಿಂದ 2ಎಗೆ ಸೇರಿಸುವಂತೆ ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ 2012 ರಲ್ಲಿ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕರಪ್ಪ ನೇತೃತ್ವದ ತಂಡ ತಾಲೂಕಿಗೆ ಆಗಮಿಸಿ ಸತ್ಯಾಸತ್ಯೆ ಕಂಡು ಸಮಗ್ರ ವರದಿ ಸರ್ಕಾರಕ್ಕೆ ನೀಡಿದ್ದಾರೆ.ಹೀಗಾಗಿ ತಕ್ಷಣವೇ 2ಎ ಮೀಸಲಾತಿ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳಕ್ಕೆ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಭೇಟಿ ನೀಡಿ ಮರಾಠಾ ಸಮಾಜಕ್ಕೆ ಬೆಂಬಲ ಸೂಚಿಸಿದರು.
ಮರಾಠರ ಹೋರಾಟಕ್ಕೆ ಬೆಂಬಲ ನೀಡಿದ ಸತೀಶ್ ಜಾರಕಿಹೊಳಿಗೆ ಮುಖಭಂಗ!
ಈ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನನಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಮರಾಠಾ ಸಮಾಜ. ನಿಮ್ಮದು ಸ್ವಾಭಿಮಾನಿ ಸಮಾಜ, ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿಗೆ ಆಗ್ರಹಿಸಿ ಮಾಡುತ್ತಿರುವ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಕರ್ನಾಟಕದಲ್ಲಿನ ಮರಾಠಿಗರಿಗೆ ಮಹಾರಾಷ್ಟ್ರ ನೆರವು ಪ್ರಕಟ
ಪ್ರತಿಭಟನೆಯಲ್ಲಿ ಬೆಂಗಳೂರಿನ ಗವಿಪುರ ಮಠದ ಮಂಜುನಾಥ ಸ್ವಾಮೀಜಿ, ಕಿರಣ ಜಾಧವ, ಶಾಮಸುಂದರ ಗಾಯಕವಾಡ, ಮಾಜಿ ಶಾಸಕ ಮನೋಹರ ಕಡೋಲ್ಕರ, ನಾಗೇಶ ಮನ್ನೋಳ್ಕರ, ಧನಂಜಯ ಜಾಧವ, ವಿನಯ ಕದಂ, ಪ್ರವೀಣ ಪಾಟೀಲ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.